ಶಿಕಾರಿಪುರ
ಕೊರೋ ನಾ ವೈರಸ್ ವಿರುದ್ಧ ನಮ್ಮ ಆಶಾ ಕಾರ್ಯಕರ್ತೆಯರೂ ವೈದ್ಯರುಗಳು ಆಸ್ಪತ್ರೆಯ ಸರ್ವ ಸಿಬ್ಬಂದಿಗಳು ತಮ್ಮ ಕುಟುಂಬದ ಹಾಗೂ ಜೀವದ ಆಸೆ ಬಿಟ್ಟು ಸೇವೆ ಮಾಡಿ ರಾಜ್ಯಕ್ಕೆ ಮಾದರಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನವರ ಗೌರವ ಹೆಚ್ಚಿಸಿದ್ದಿರಿ .ನಿಮ್ಮ ಸೇವೆ ಅನನ್ಯ.ಈಗಾಗಲೇ ಸಕಲ ಸೌ ಲಬ್ಯ. ವ್ಯವಸ್ಥೆ. ಸಿಬ್ಬಂದಿಗಳ. ಕೊರತೆಯಿಲ್ಲ
: ಸಾಕಷ್ಟು ವೈದ್ಯರು ಇದ್ದಾರೆ ಆದರೆ ನೂತನವಾಗಿ ಆಯ್ಕೆಯಾದ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು ರೋಗಿ ಹಾಗೂ ವೈದ್ಯರಿಗೆ ಸೇತುವೆಯಾಗಿ ಕೆಲಸ ಮಾಡಿ ಎಂದು ಸಂಸದ B.Y.ರಾಘವೇಂದ್ರ ಮನವಿ ಮಾಡಿದರು.
ಅವರು ತಾಲೂಕ್ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕ್ ಆರೋಗ್ಯ ಇಲಾಖೆ ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ನೂತನ ನಾಮ ನಿರ್ದೇಶಿತ ಆಯ್ಕೆಯ ಆರೋಗ್ಯ ರಕ್ಷಾ ಸಮಿತಿಯ ಒಂದು ದಿನದ ಕಾರ್ಯಾಗಾರ ಹಾಗೂ ಅವರುಗಳಿಗೆ ಅಭಿನಂದನೆ ಸಲ್ಲಿಸುವ ವಿಶೇಷ ಕಾರ್ಯಕ್ರಮವನ್ನು ಸಸಿಗೆ ನೀರು ಹಾ ಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರು ಮೋದಲ್ಗಿಂತಲು ಹೆಚ್ಚಿನ ಜಾಗುರುಕತೆಯಿಂದ ಇರಬೇಕು. ಕೊ ರೋ ನಾ ಎರಡನೇ ಆವರ್ಥನೆ ಶುರುವಾಗಿದ್ದು ಕೆಲವು ದೇಶ ಗಳು ಎರಡನೇ ಬಾರಿ ಲಾಕ್ ಡೌನ್ ಗೋಷಿಸಿದೆ. ಛಳಿ ದಿನಗಳು ವೈರಸ್ ಹೆಚ್ಚಾಗಲು ಸದ್ಯಾತೆ ಇರುವುದರಿಂದ ಜಾಗುರುಕತೆಯಿದಿರಬೇಕೆಂದರು.ರಾಷ್ಟೀಯ ಆರೋಗ್ಯ ಅಭಿಯಾನ ದ ಅಡಿಯಲ್ಲಿ ಪ್ರಾಥಮಿಕ ಹಾಗೂ ಉಪ ಆರೋಗ್ಯ ಕೇಂದ್ರಗಳ ನವೀಕರಿಸಲು ಕೇಂದ್ರ ಸರ್ಕಾರ 60/ ಹಾಗೂ ರಾಜ್ಯ ಸರ್ಕಾರ 40/ ಪರ್ಸೆಂಟ್ ಅನುದಾನಗಳನ್ನು ನೀಡಿದ್ದು.ಪ್ರಾ. ಆ.ಕೇಂದ್ರಕ್ಕೆ ಹಾಗೂ ಉಪ ಆರೋಗ್ಯ ಕೇಂದ್ರ ಗಳಿಂದ ಒಟ್ಟು 13 ಕೋಟಿ 84 ಲಕ್ಷ ಹಣ ಬಿಡುಗಡೆ ಗೋಳಿ ಸಿದ್ದು.ಕನಿಷ್ಟ 5 ರಿಂದ 6 ಲಕ್ಷ ರೂಪಾಯಿಗಳ ಕಾಮಗಾರಿಗಳ ಕೆಲಸ ನಡೆಯಲಿದ್ದು ಭ್ರಷ್ಟಾಚಾರ ರಹಿತವಾಗಿ ಕೆಲಸ ವಾಗಬೇಕು ಸದಸ್ಯರು ಗಮನಿಸ ಬೇಕು ಸಣ್ಣ ಪುಟ್ಟ ತಪ್ಪು ಕಂಡಾಗ ಅಲ್ಲೇ ತಿದ್ದಿ ಬುದ್ಧಿ ಹೇಳಿ ಮತ್ತೆ ಮತ್ತೆ ಪುನಾರವರ್ಥನೆ ಮಾಡಿದಲ್ಲೆ ಮೇಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅತ್ವ ನಿಯೋಜಿತ ಸದಸ್ಯರ ಗಮನಕ್ಕೆ ತರಲು ತಿಳಿಸಿದರು.
ರಕ್ಷಾ ಕವಚ ಸಮಿತಿಯಲ್ಲಿ ನಿರ್ಧಾರಿತ ನಾಲ್ಕು ಸದಸ್ಯರ ಜೊತೆ ಗ್ರಾಮ ಪಂಚಾಯಿತಿ ಸದಸ್ಯರು ಇದ್ದು ಗ್ರಾಮಪಂಚಾಯಿತಿ ಅದ್ಯಕ್ಷರು ಇದಕ್ಕೆ ಅಧ್ಯಕ್ಷರಾಗಿರುತ್ತಾರೆ ಗ್ರಾ ಪ. ಉಪಾಧ್ಯಕ್ಷರು ಇಲ್ಲು ಸಹ ಉಪಾಧ್ಯಕ್ಷರಾಗಿ ವೈದ್ಯಾಧಿಕಾರಿಗಳು ಕಾರ್ಯದರ್ಶಿಗಳಾಗಿ ಕಾರ್ಯ ನಿಭಾಯಿಸುತ್ತಾರೆ. SC. ಹಾಗೂ ST. ಇಬ್ಬರು ಪ್ರತಿನಿಧಿಗಳು ಇರುತ್ತಾರೆಂದರು. ಬ್ರಷ್ಟ ಅಧಿಕಾರಿಗಳ ಬಗ್ಗೆ ದೂರು ಕೇಳಿ ಬರದಂತೆ ನಡೆದುಕೊಳ್ಳಿ ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸಿ ದೈರ್ಯ ತುಂಬುವ ಕೆಲಸ ಮಾಡಿ .ಅವರನ್ನು ಗಾಬರಿ ಗೊಳಿಸಬೇಡಿ.ರೋಗಿಗಳಿಗೆ ಹಣ ಕೇಳುವುದು ಕನಿಷ್ಟ ಶಸೃಷೆಗಾಗಿ ಬೇರೆ.ಕಡೆ ಕಳಿಸುವ ಕೆಟ್ಟ ಪದ್ಧತಿ ಕೈ ಬಿಡಿ.ಹಣ ವಸೂಲಿ ಮಾಡುವ ಕೆಲ್ಸ ಮಾಡಿದಲ್ಲಿ ಶಿಸ್ತು ಕ್ರಮಕ್ಕೆ ಒಳಪಡುತ್ತಿರೆಂದು ಎಚ್ಚರಿಸಿದರು.
ಈ ವೇದಿಕೆಯಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಗುರುಮೂರ್ತಿ.ರಾಜ್ಯ ಪರಿಸರ ಅರಣ್ಯ ನಿಗಮದ ಉಪಾಧ್ಯಕ್ಷ ರಾದ ರೇವಣಪ್ಪ. T.H.O. ಚಂದ್ರಪ್ಪ. D.H.O.ರಾಜೇಶ್ ಸುರ್ಗಿಹಳ್ಳಿ.ಚುನಾಯಿತ ಪ್ರತಿನಿಧಿಗಳು ಹಾಗೂ ವೈದ್ಯ ಇಲಾಖೆಯವರು ಉಪಸ್ಥಿತರಿದ್ದರು.ಭಾರತಿ ಪ್ರಾರ್ಥಿಸಿ .ಪೂಜಾರ ಸ್ವಾಗತ ಕೋರಿದರು.ವೇದಿಕೆಯಲ್ಲಿ ಸಂಸದರಿಂದ ನಾಮನಿರ್ದೇಶಿತ ರಕ್ಷಾ ಸಮಿತಿಯ ಸದಸ್ಯರನ್ನು ಸನ್ಮಾನಿಸಲಾಯಿತು