ದಾವಣಗೆರೆ ನ.05
ದಾವಣಗೆರೆ ಜಿಲ್ಲೆಯಲ್ಲಿ 2020-21ನೇ ಸಾಲಿನ ಹಿಂಗಾರು-ಬೇಸಿಗೆ
ಹಂಗಾಮುಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ
ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿಸಿ
ಅಧಿಸೂಚಿಸಲಾಗಿದೆ.
2020-21ನೇ ಹಿಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ
ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ)
ಯೋಜನೆಯಡಿ ಗ್ರಾಮ ಪಂಚಾಯತಿ ಮಟ್ಟಕ್ಕೆ ಮುಸುಕಿನ
ಜೋಳ (ನೀರಾವರಿ) ಬೆಳೆಯನ್ನು ಹೊನ್ನಾಳಿ ತಾಲ್ಲೂಕಿಗೆ
ಮತ್ತು ಮುಸುಕಿನ ಜೋಳ (ನೀರಾವರಿ) ಮತ್ತು ಕಡಲೆ
(ಮಳೆ ಆಶ್ರಿತ) ಬೆಳೆಗಳನ್ನು ಜಗಳೂರು ತಾಲ್ಲೂಕಿಗೆ
ಅಧಿಸೂಚನೆ ಮಾಡಲಾಗಿದೆ.
ಈ ಯೋಜನೆಯಡಿ ಹೋಬಳಿ ಮಟ್ಟಕ್ಕೆ ಜೋಳ (ಮಳೆ
ಆಶ್ರಿತ), ಜೋಳ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ),
ಸೂರ್ಯಕಾಂತಿ (ನೀರಾವರಿ), ಮುಸುಕಿನ ಜೋಳ (ನೀರಾವರಿ), ರಾಗಿ
(ನೀರಾವರಿ), ಹುರುಳಿ (ಮಳೆ ಆಶ್ರಿತ), ಕಡಲೆ (ಮ.ಆ)
ಬೆಳೆಗಳಿಗೆ ವಿಮೆ ನೋಂದಾಯಿಸಲು ಅವಕಾಶವಿರುತ್ತದೆ.
ಪ್ರತೀ ಹೋಬಳಿಗೆ ಪ್ರತ್ಯೇಕವಾಗಿ ಮೇಲ್ಕಂಡ ಬೆಳೆಗಳಲ್ಲಿ
ಅಧಿಸೂಚನೆ ಮಾಡಿರುತ್ತದೆ.
ಅದೇ ರೀತಿ ಈ ಯೋಜನೆಯಡಿ 2020-21ನೇ ಸಾಲಿನ ಹಿಂಗಾರು
ಹಂಗಾಮಿಗೆ ಹೋಬಳಿ ಮಟ್ಟಕ್ಕೆ ತೋಟಗಾರಿಕೆ ಬೆಳೆಗಳಾದ
ಟೊಮಾಟೋ, ಈರುಳ್ಳಿ (ನೀರಾವರಿ) ಬೆಳೆಗಳಿಗೆ ವಿಮೆಗೆ
ನೋಂದಾಯಿಸಲು ದಾವಣಗೆರೆ ತಾಲ್ಲೂಕಿನ ಆನಗೋಡು,
ಮಾಯಕೊಂಡ ಹೋಬಳಿ ಹಾಗೂ ಜಗಳೂರು ತಾಲ್ಲೂಕಿನ
ಬಿಳಿಚೋಡು, ಜಗಳೂರು, ಸೊಕ್ಕೆ ಹೋಬಳಿಗಳನ್ನು
ಅಧಿಸೂಚನೆ ಮಾಡಲಾಗಿದೆ.
2020-21ರ ಬೇಸಿಗೆ ಹಂಗಾಮಿಗೆ ಗ್ರಾಮ ಪಂಚಾಯತಿ
ಮಟ್ಟಕ್ಕೆ ಭತ್ತ (ನೀರಾವರಿ)ಯನ್ನು ದಾವಣಗೆರೆ ತಾಲ್ಲೂಕಿಗೆ
ಅಧಿಸೂಚಿಸಲಾಗಿದೆ. ಹೋಬಳಿ ಮಟ್ಟಕ್ಕೆ ಭತ್ತ (ನೀರಾವರಿ),
ಸೂರ್ಯಕಾಂತಿ (ನೀರಾವರಿ), ಶೇಂಗಾ (ನೀರಾವರಿ) ಬೆಳೆಗಳನ್ನು
ಅಧಿಸೂಚನೆ ಮಾಡಲಾಗಿದೆ.
ಹಿಂಗಾರು ಹಂಗಾಮಿಗೆ ಬೆಳೆ ಸಾಲ ಪಡೆದ ಮತ್ತು
ಪಡೆಯದ ರೈತರಿಗೆ ಬೆಳೆ ವಿಮೆಗೆ ನೋಂದಾಯಿಸಲು
ಕಡೆಯ ದಿನಾಂಕದ ವಿವರ :
ಬೆಳೆಯ ಹೆಸರು ನೋಂದಾಯಿಸಲು
ಕೊನೆಯ ದಿನಾಂಕ
ಮೆಕ್ಕೆಜೋಳ (ನೀ),
ಸೂರ್ಯಕಾಂತಿ(ಮ.ಆ) (ನೀ), ಹುರುಳಿ
(ಮ.ಆ), ರಾಗಿ (ನೀ), ಜೋಳ (ಮ.ಆ) (ನೀ)
17.11.2020
ಈರುಳ್ಳಿ(ನೀ). ಟೊಮ್ಯಾಟೋ 30.11.2020
ಕಡಲೆ (ಮ.ಆ) 16.12.2020
ಬೇಸಿಗೆ ಹಂಗಾಮಿಗೆ ಬೆಳೆ ಸಾಲ ಪಡೆದ ಮತ್ತು
ಪಡೆಯದ ರೈತರಿಗೆ ಬೆಳೆ ವಿಮೆಗೆ ನೋಂದಾಯಿಸಲು
ಕಡೆಯ ದಿನಾಂಕದ ವಿವರ :
ಬೆಳೆಯ ಹೆಸರು ನೋಂದಾಯಿಸಲು ಕೊನೆಯ
ದಿನಾಂಕ
ಭತ್ತ (ನೀ), ಶೇಂಗಾ (ನೀ),
ಸೂರ್ಯಕಾಂತಿ(ನೀ),
ಟೊಮ್ಯಾಟೋ
01.03.2021
ಹೆಚ್ಚಿನ ಮಾಹಿತಿಗಾಗಿ ಕೃಷಿ, ಕಂದಾಯ, ಸಹಕಾರ,
ತೋಟಗಾರಿಕೆ ಇಲಾಖೆಗಳನ್ನು, ಬೆಳೆ ಸಾಲ ನೀಡುವ ಬ್ಯಾಂಕ್ ಅಥವಾ
ಸಹಕಾರಿ ಬ್ಯಾಂಕ್‍ಗಳನ್ನು ಹಾಗೂ ಯೂನಿವರ್ಸಲ್ ಸೋಂಪೊ
ಜನರಲ್ ಇನ್‍ಶ್ಯೂರೆನ್ಸ್ ಕಂಪನಿಯ ಗುತ್ಯಪ್ಪ, ಜಿಲ್ಲಾ ಯೋಜನಾ
ಸಮನ್ವಯ ಅಧಿಕಾರಿ, ಮೊಬೈಲ್ ಸಂಖ್ಯೆ :9964064451 ಇವರನ್ನು
ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.