ದಾವಣಗೆರೆ ನ.05
ಸಮನ್ವಯ ಶಿಕ್ಷಣದಡಿಯಲ್ಲಿ ಕ್ಷೇತ್ರ ಸಂಪನ್ಮೂಲ
ಕೇಂದ್ರ, ಜಗಳೂರು ಇಲ್ಲಿ ತಾತ್ಕಾಲಿಕಚಾಗಿ ಕೆಲಸ ಮತ್ತು
ಪಾವತಿ ಆಧಾರದ ಮೇಲೆ ಫಿಜಿಯೋಥೆರಪಿಸ್ಟ್ ನೇಮಕಾತಿ
ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಡಿ.ಪಿ.ಟಿ/ಬಿ.ಪಿ.ಟಿ (ಡಿಪ್ಲೊಮಾ ಇನ್
ಫಿಜಿಯೋಥೆರಪಿಸ್ಟ್/ಬ್ಯಾಚುಲರ್ ಆಫ್ ಫಿಜಿಯೋಥೆರಪಿಸ್ಟ್)
ವಿದ್ಯಾರ್ಹತೆಯನ್ನು ಹೊಂದಿರಬೇಕು. 2 ವರ್ಷದ ಸೇವಾ
ಅನುಭವ ಇರಬೇಕು. ಅರ್ಜಿ ಸಲ್ಲಿಸಲು ನ.12 ಕೊನೆಯ
ದಿನವಾಗಿರುತ್ತದೆ ಎಂದು ಜಗಳೂರು ಸಾರ್ವಜನಿಕ ಶಿಕ್ಷಣ
ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.