ದಾವಣಗೆರೆ ನ.05  
     ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ನೃತ್ಯ, ಸುಗಮ
ಸಂಗೀತ, ಕಥಾಕೀರ್ತನ ಮತ್ತು ಗಮಕ ಈ ಆರು
ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ
ವಯೋಮಾನದ ಅಭ್ಯರ್ಥಿಗಳಿಂದ 2020-21ನೇ ಸಾಲಿನ
ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
 ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.10,000/-
ಗಳನ್ನು ಶಿಷ್ಯವೇತನವಾಗಿ ನೀಡಲಾಗುವುದು. ಅರ್ಜಿಗಳನ್ನು
ಅಕಾಡೆಮಿಯ ಕಚೇರಿ ವೇಳೆಯಲ್ಲಿ ಉಚಿತವಾಗಿ
ಪಡೆಯಬಹುದು. ಹಾಗೂ ಅಕಾಡೆಮಿ
ಅಂರ್ತಜಾಲತಾಣ hಣಣಠಿ://ಞಚಿಡಿಟಿಚಿಣಚಿಞಚಿsಚಿಟಿgeeಣಚಿಟಿಡಿiಣಥಿಚಿಚಿಛಿಚಿಜemಥಿ.ಛಿom ಮೂಲಕ
ಪಡೆದು ಸಲ್ಲಿಸಬಹುದಾಗಿದೆ. ಬೆರೆ ಬೇರೆ ಜಿಲ್ಲೆಯ
ಅಭ್ಯರ್ಥಿಗಳು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ

ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ
ಅರ್ಜಿಗಳನ್ನು ಪಡೆಯಬಹುದು.
  ಅರ್ಜಿಯ ಜೊತೆ ಇತ್ತೀಚಿನ ಪಠ್ಯಕ್ರಮವನ್ನು ಸಹ
ನೀಡಲಾಗಿದೆ. ಅಂಚೆ ಮೂಲಕ ಅರ್ಜಿ ಪಠ್ಯಕ್ರಮ
ಪಡೆಯಲಿಚ್ಚಿಸುವವರು ರೂ.10/- ಸ್ಟ್ಯಾಂಪ್ ಹಚ್ಚಿದ
ಸ್ವವಿಳಾಸವುಳ್ಳ ಲಕೋಟೆಯನ್ನು ರಿಜಿಸ್ಟ್ರಾರ್, ಕರ್ನಾಟಕ
ಸಂಗೀತ ವೃತ್ಯ ಅಕಾಡೆಮಿ, ಕನ್ನಡಭವನ, 2ನೇಮಹಡಿ,
ಜೆ.ಸಿ.ರಸ್ತೆ, ಬೆಂಗಳೂರು, ಬೆಂಗಳೂರು-560002 ಇಲ್ಲಿಗೆ
ಕಳುಹಿಸಿಕೊಡಬೇಕು. ಭರ್ತಿ ಮಾಡಿದ ಅರ್ಜಿಗಳನ್ನು
ಮೇಲ್ಕಂಡ ವಿಳಾಸಕ್ಕೆ ನ.30 ರೊಳಗೆ ಕಳುಹಿಸಬೇಕು ಎಂದು
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಬನಶಂಕರಿ
ವಿ.ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *