ದಾವಣಗೆರೆ ನ.05
2020-21ನೇ ಸಾಲಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು
ತರಬೇತಿ ಕೇಂದ್ರ ಹರಿಹರ ಇಲ್ಲಿ ಕೌಶಲ್ಯಾಭಿವೃದ್ದಿ
ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ
ತಂತ್ರಜ್ಞಾನ ತರಬೇತಿಗಳ ಸಂಸ್ಥೆಗಳಿಗೆ ನೆರವು
ಯೋಜನೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ
ಉಪಯೋಜನೆ(ಎಸ್‍ಸಿಪಿ/ಟಿಎಸ್‍ಪಿ) ಮೂಲಕ 16 ರಿಂದ 45 ವರ್ಷದೊಳಗಿನ
ಪ.ಜಾತಿ/ಪ.ಪಂ.ದ ನಿರುದ್ಯೋಗಿ ಯುವಕ/ಯುವತಿಯರಿಗಾಗಿ
ಉದ್ಯೋಗಾವಕಾಶ ಕಲ್ಪಿಸಲು ಎಸ್.ಎಸ್.ಎಲ್.ಸಿ/ಐ.ಟಿ.ಐ/ ಡಿಪ್ಲೊಮ/ಬಿ.ಇ ಪಾಸ್
ಆಗಿರುವ ಅಭ್ಯರ್ಥಿಗಳಿಗೆ 4 ತಿಂಗಳ ಅವಧಿಯ ಉಚಿತ
ತರಬೇತಿನ್ನು ಹಮ್ಮಿಕೊಳ್ಳಲಾಗಿದೆ.
  ಸಿಎನ್‍ಸಿ, ಪ್ರೋಗ್ರಾಮರ್, ಕನ್ವೆನ್‍ಷನಲ್ ಟರ್ನಿಂಗ್, ಮಷಿನ್
ಆಪರೇಟರ್, ಡಿಸೈನರ್-ಮೆಕ್ಯಾನಿಕಲ್, ಪ್ರೊಡಕ್ಷನ್ ಇಂಜಿನಿಯರ್
ಹಾಗೂ ಯುನಿಗ್ರಾಫಿಕ್ಸ್(ಯುಜಿ) ಮತ್ತು 12 ತಿಂಗಳು
ಅವಧಿಯ ಟೂಲ್ ರೂಮ್ ಮಷಿನಿಷ್ಟ್ ತರಬೇತಿ
ಕಾರ್ಯಕ್ರಮವನ್ನು ಉಚಿತವಾಗಿ ನಡೆಸಲಾಗುವುದು. ನ.20
ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ತರಬೇತಿಯ
ಅವಧಿಗೆ ಶಿಷ್ಯವೇತನ ನೀಡಲಾಗುವುದು.
ತರಬೇತಿಗಳನ್ನು ಪ್ರತಿ ತಿಂಗಳು ಬ್ಯಾಚ್‍ಗಳಲ್ಲಿ
ಪ್ರಾರಂಭಿಸಲಾಗುವುದು.
  ಈ ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ
ಮಾರ್ಗದರ್ಶನ ನೀಡಲಾಗುವುದು. ಅರ್ಜಿ ಸಲ್ಲಿಸಲು ಹಾಗೂ
ಹೆಚ್ಚಿನ ವಿವರಗಳಿಗಾಗಿ ಪ್ರಾಂಶುಪಾಲರು, ಜಿ.ಟಿ.ಟಿ.ಸಿ, 22 ಸಿ &ಚಿmಠಿ; ಡಿ ಕೆಐಎಡಿಬಿ,
ಇಂಡಸ್ಟ್ರಿಯಲ್ ಏರಿಯ ಹರ್ಲಾಪುರ, ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರ,
ಹರಿಹರ ದೂ.ಸಂ: 08192-243937,
8884488202/7019600676/9742430685/8711913947
ಸಂಪರ್ಕಿಸಬಹುದೆಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *