ದಾವಣಗೆರೆ ನ.06
ಸಾರಿಗೆ ಪ್ರಾದೇಶಿಕ ಕಚೇರಿ ವತಿಯಿಂದ ನವೆಂಬರ್-2020 ರ
ಮಾಹೆಯನ್ನು ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ
ಮಾಸವನ್ನಾಗಿ ಆಚರಿಸಲಾಗುತ್ತಿದ್ದು ಉದ್ಘಾಟನಾ
ಕಾರ್ಯಕ್ರಮವನ್ನು ನ.7 ರ ಮಧ್ಯಾಹ್ನ 12.30 ಕ್ಕೆ ಆರ್‍ಟಿಓ
ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ
ಪರಿಸರ ಅಧಿಕಾರಿಗಳು ಉದ್ಘಾಟನೆ ನೆರವೇರಿಸುವರು.
‘ಮಾಲಿನ್ಯದಿಂದ ಮರಣ, ಮಾಡೋಣ ನಿಯಂತ್ರಣ’ ಎಂಬ
ಧ್ಯೇಯದೊಂದಿಗೆ ನ.1 ರಿಂದ 30 ರವರೆಗೆ ಜಿಲ್ಲೆಯಾದ್ಯಂತ
ತಾಲ್ಲೂಕುವಾರು ವಿವಿಧ ಜಾಗೃತಿ ಶಿಬಿರಗಳನ್ನು ನಡೆಸುವ
ಮೂಲಕ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರುಗಳಿಗೆ
ಜಾಗೃತಿಯನ್ನು ಮೂಡಿಸಲಾಗುವುದು ಎಂದು ಪ್ರಾದೇಶಿಕ
ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ
ದಾವಣಗೆರೆ ನ. 04 (ಕರ್ನಾಟಕ ವಾರ್ತೆ:
ರಾಜ್ಯ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ
ಸಚಿವರಾದ ಬಿ.ಎ. ಬಸವರಾಜ ಅವರು ನ.07 ರಂದು ದಾವಣಗೆರೆ ಜಿಲ್ಲಾ
ಪ್ರವಾಸ ಕೈಗೊಳ್ಳಲಿದ್ದಾರೆ.
ಸಚಿವರು ನ. 07 ರಂದು ಮಧ್ಯಾಹ್ನ ಬೆಂಗಳೂರಿನಿಂದ
ಹೊರಟು, ಸಂಜೆ 6 ಗಂಟೆಗೆ ದಾವಣಗೆರೆ ಪ್ರವಾಸಿ ಮಂದಿರಕ್ಕೆ
ಆಗಮಿಸಿ ವಾಸ್ತವ್ಯ ಮಾಡುವರು. ನ. 08 ರಂದು ಬೆಳಿಗ್ಗೆ 9.30
ಗಂಟೆಗೆ ಹಾವೇರಿ ಜಿಲ್ಲೆ ಶ್ರೀ ಕ್ಷೇತ್ರ ಕಾಗಿನೆಲೆಗೆ
ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.