ಶಿಕಾರಿಪುರ ಪಟ್ಟಣದ ಪುರಸಭಾ ಅಧ್ಯಕ್ಷ ಉಪಧ್ಯಕ್ಷ ಚುನಾವಣೆ ಇಂದು ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ 12 ನೇ ವಾರ್ಡ್ ನ ಲಕ್ಷ್ಮಿ ಮಹಾಲಿಂಗಪ್ಪ ನಾಮ ಪತ್ರ ಸಲ್ಲಿಸಿದ್ದರು.
ಉಪಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ಅಭ್ಯಾರ್ಥಿಯಾಗಿ ಗೆದ್ದು ಬಿಜೆಪಿಗೆ ಬೆಂಬಲ ನೀಡಿದ್ದ ಮಹಮ್ಮದ್ ಸಾಧಿಕ್ ನಾಮಪತ್ರ ಸಲ್ಲಿಸಿದ್ದರು.
ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಕಮ್ಮಲಮ್ಮ ನಾಮ ಪತ್ರಸಲ್ಲಿಸಿದ್ದು ಉಪಧ್ಯಕ್ಷ ಸ್ಥಾನಕ್ಕೆ ಮಹಮ್ಮದ್ ದಸ್ತಗಿರ್ ನಾಮ ಪತ್ರ ಸಲ್ಲಿಸಿದ್ದರು.
ಶಿಕಾರಿಪುರ ಪಟ್ಟಣ ಪುರಸಭೆಯ ಅಧ್ಯಕ್ಷ ಉಪಧ್ಯಕ್ಷ ಚುನಾವಣೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಕೂಡ ಭಾಗಿಯಾಗಿದ್ದು ಬಿಜೆಪಿ ಅಧ್ಯಕ್ಷ ಉಪಧ್ಯಕ್ಷ ಅಭ್ಯಾರ್ಥಿಗಳ ಪರವಾಗಿ ಮತ ಚಾಲವಣೆ ಮಾಡಿದರು.
ಮಹಾಲಿಂಗಪ್ಪ
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ 12 ನೇ ವಾರ್ಡ್ ನ ಲಕ್ಷ್ಮಿ ಮಹಾಲಿಂಗಪ್ಪ ನಾಮಪತ್ರ ಸಲ್ಲಿಸಿದ್ದು ಕಾಂಗ್ರೇಸ್ ನಿಂದ ಕಮಲಮ್ಮ ನಾಮಪತ್ರ ಸಲ್ಲಿಸಿದರು ಇದರಿಂದ ಚುನಾವಣೆ ನಡೆದಿದ್ದು ಬಿಜೆಪಿ ಅಭ್ಯಾರ್ಥಿ ಲಕ್ಷ್ಮಿ ಮಹಾಲಿಂಗಪ್ಪ ಪರ 12 ಮತಗಳು ಕಾಂಗ್ರೆಸ್ ಅಭ್ಯಾರ್ಥಿಯಾದ ಕಮಲಮ್ಮ ಪರವಾಗಿ 9 ಮತಗಳು ಚಲಾವಣೆಯಾಗಿದ್ದು ಅಂತಿಮವಾಗಿ ಬಿಜೆಪಿಪರ ಅಭ್ಯಾರ್ಥಿ ಲಕ್ಷ್ಮಿಮಹಾಲಿಂಗಪ್ಪ ಆಯ್ಕೆಯಾಗಿದ್ದಾರೆ.
ಉಪಧ್ಯಕ್ಷರಾಗಿ ಮಹಮ್ಮದ್ ಸಾಧೀಕ್ ಆಯ್ಕೆ:
ಇನ್ನೂ ಉಪಧ್ಯಕ್ಷ ಸ್ಥಾನ ಇದೆ ಕೂಡ ಚುನಾವಣೆ ನಡೆದಿದ್ದು ಮಹಮ್ಮದ್ ಸಾದೀಕ್ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದು ಕಾಂಗ್ರೆಸ್ ನ ಅಭ್ಯಾರ್ಥಿಯಾಗಿ ಮೊಹಮ್ಮದ್ ದಸ್ತಗಿರ್ ನಾಮಪತ್ರಸಲ್ಲಿಸಿದ್ದರು.
ಅಭ್ಯಾರ್ಥಿಗಳ ಪರವಾಗಿ ಕೈಎತ್ತುವ ಮೂಲಕ ಮತ ಚಲಾವಣೆ ನಡೆದಿದ್ದು ಬಿಜೆಪಿ ಅಭ್ಯಾರ್ಥಿ ಮಹಮ್ಮದ್ ಸಾದೀಕ್ ಪರವಾಗಿ 12 ಮತಗಳು ಕಾಂಗ್ರೆಸ್ ಅಭ್ಯಾರ್ಥಿ ಮಹಮ್ಮದ್ ದಸ್ತಗಿರ್ ಪರವಾಗಿ 9 ಮತಗಳು ಚಲಾವಣೆ ಆಗಿದ್ದು ಅಂತಿಮವಾಗಿ ಬಿಜೆಪಿ ಅಭ್ಯಾರ್ಥಿ ಮಹಮ್ಮದ್ ಸಾದೀಕ್ ಉಪಧ್ಯಕ್ಷರಾಗಿ ಆಯ್ಕೆಯಾಗದರು.
ಚುನಾವಣೆ ಅಧಿಕಾರಗಳಾದ ತಹಶಿಲ್ದಾರ್ ಕವಿರಾಜ್ ಅಧಿಕೃತ ಘೋಷಣೆಯನ್ನು ಹೊರಡಿಸಿದರು.ಈ ಸಂದರ್ಬದಲ್ಲಿ
ಪುರಸಭಾ ಅಧ್ಯಕ್ಷ ಉಪಧ್ಯಕ್ಷ ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಪುರಸಭಾ ಸದಸ್ಯರು ಸಂಸದರ ಎದುರೇ ಪ್ರತಿಭಟನೆ ನಡೆಸಿದರು.ಕಪ್ಪು ಬಣ್ಣದ ಬಟ್ಟೆ ಹಾಗೂ ಪಕ್ಷದ ಬಾಹು ಟ. ಹಿಡಿದು ಬಿಜೆಪಿ ವಿರುದ್ಧ ವಾಗ್ದಾಳಿ ಹಾಗೂ ಘೋಷಣೆ. ಕೂಗಿದರು.