ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಹೊನ್ನಾಳಿ ಇದರ ಆಡಳಿತ ಮಂಡಳಿಯ 15ಜನ ನಿರ್ದೇಶಕರ ಹುದ್ದೆಗೆ ಚುನಾವಣೆ ಸ್ಪರ್ಧಿಸಿದ್ದರು ಮಾನ್ಯ ಮಾಜಿ ಶಾಸಕರಾದ ಡಿಜೆ ಶಾಂತನಗೌಡ್ರು ರವರು ಕಾಂಗ್ರೆಸ್ ಪಕ್ಷದ ಮುಖಂಡರುಗಳ ಜೊತೆ ಚರ್ಚಿಸಿ ಚುನಾವಣೆ ಯಾದರೆ ಸಹಕಾರ ಮಂಡಳಿಗಳು ಆರ್ಥಿಕ ಸ್ಥಿತಿಯಿಂದ ನಡೆಯುತ್ತವೆ ಎಂದು ಉದ್ದೇಶವನ್ನಿಟ್ಟುಕೊಂಡು ಅವರು ಅಳೆದು-ತೂಗಿ ಸದಸ್ಯರುಗಳನ್ನು ಅವಿರೋಧವಾಗಿ 15 ಜನರನ್ನು ಆಯ್ಕೆಯಾಗಿ ಮಾಡಿದ್ದರು .ಇಂದಿನ ದಿನ ದಿನಾಂಕ 11-11- 2020 ರಂದು ಎಂದು ಸಹಕಾರ ಮಂಡಳಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಕೆ ಈಶ್ವರಪ್ಪ ಗೌಡ, ಉಪಾಧ್ಯಕ್ಷರಾಗಿ ಬಸವರಾಜ್ ಎನ್ ಇವರುಗಳ ಆಯ್ಕೆಯನ್ನು ಮಾನ್ಯ ತಹಶೀಲ್ದಾರ್ ಅವರಾದ ತುಷಾರ್ ಬಿ ಹೊಸೂರಾ ಮತ್ತು ಚುನಾವಣೆ ಅಧಿಕಾರಿಗಳಾದ ಸಿ ಗೋಪಾಲ್ ರವರು ಆಯ್ಕೆ ಮಾಡುವುದರ ಮೂಲಕ ಅನುಮೋದನೆ ಮಾಡಿದರು.

ನಂತರ ಡಿಜೆ ಶಾಂತನಗೌಡ್ರುರವರು ಮಾತನಾಡಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಅಭಿನಂದನೆಗಳನ್ನು ತಿಳಿಸುತ್ತಾ ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಎನ್ನದೆ ಎಲ್ಲರೂ ಒಗ್ಗಟ್ಟಾಗಿ ಸಹಕಾರದಿಂದ ಕೃಷಿ ಉತ್ಪನ್ನ ವ್ಯವಸಾಯ ಸಹಕಾರ ಮಂಡಳಿಯನ್ನು ಉಳಿಸಲಿಕ್ಕೆ ಸಾಧ್ಯ ಎಂದರು ಕರ್ನಾಟಕ ರಾಜ್ಯ ಸಹಕಾರ ಮತ್ತು ವ್ಯಾಪಾರ ಮಹಾಮಂಡಳ ಬೆಂಗಳೂರು ನಿರ್ದೇಶಕರಾಗಿ ನಾನು ಪ್ರತಿವರ್ಷ ಈ ಮಂಡಳ ವತಿಯಿಂದ 1000 ಟನ್ ರಸಗೊಬ್ಬರ ಕೊಡುತ್ತೇನೆ ಈ ವರ್ಷ 5 ಲಕ್ಷ ಅನುದಾನವನ್ನು ಮೀಟಿಂಗ್ ಹಾಲಿನ ಕಟ್ಟಡ ಕಟ್ಟುವುದಾಗಿ ಕೊಡುತ್ತೇನೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಉಪಸ್ಥಿತಿ :-ಮಾಜಿ ಶಾಸಕರಾದ ಡಿಜೆ ಶಾಂತನಗೌಡ್ರು ರವರು ,ತಾಲ್ಲೂಕು ದಂಡಾಧಿಕಾರಿಗಳಾದ ತುಷಾರ್ ಬಿ ಹೊಸೂರಾ ರವರು, ಚುನಾವಣಾ ಅಧಿಕಾರಿ ಸತೀಶ್ ,ನೂತನ ಅಧ್ಯಕ್ಷರಾದ ಈಶ್ವರಪ್ಪ ಗೌಡ್ರು ,ಉಪಾಅಧ್ಯಕ್ಷರಾದ ಬಸವರಾಜ್ ಎನ್, ಮತ್ತು ಸದಸ್ಯರು ಹಾಗೂ ಕಾರ್ಯದರ್ಶಿಯವರಾದ ಮುರುಗೇಶ್ ,ಗೋಪಿ ,ಸುರೇಶ್ ,ಅರುಣ್ ,ಎಲ್ಲರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಯಿತು
