ದಾವಣಗೆರೆ ನ.11
ಚನ್ನಗಿರಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು
ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳು ಚನ್ನಗಿರಿ ಇವರ
ಸಹಯೋಗದೊಂದಿಗೆ ನ.13 ರಂದು ಮಧ್ಯಾಹ್ನ 12 ಗಂಟೆಗೆ
ಸರ್ಕಾರಿ ತಾಲ್ಲೂಕು ಕ್ರೀಡಾಂಗಣ, ಚನ್ನಗಿರಿ ಇಲ್ಲಿ ಜನಸ್ಪಂದನ
ಮತ್ತು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ
ಸಮಾರಂಭವನ್ನು ಏರ್ಪಡಿಸಲಾಗಿದೆ.
ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ
ಬಸವರಾಜ(ಭೈರತಿ) ಇವರು ಚನ್ನಗಿರಿ ಸರ್ಕಾರಿ ಪದವಿಪೂರ್ವ
ಕಾಲೇಜು ಹೆಚ್ಚುವರಿ ಶಾಲಾ ಕೊಠಡಿಗಳು, ಚನ್ನಗಿರಿ ಆಯುಷ್
ಆಸ್ಪತ್ರೆ ಶಂಕುಸ್ಥಾಪನೆ ನೆರವೇರಿಸುವರು ಹಾಗೂ
ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಸವಲತ್ತುಗಳ
ವಿತರಣೆಯನ್ನು ಮಾಡುವರು.
ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಚಿತ್ರದುರ್ಗ
ಜಿಲ್ಲಾ ಉಸ್ತುವಾರಿ ಸಚಿವರಾದ
ಬಿ. ಶ್ರೀರಾಮುಲು ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ,
ಚಿಕ್ಕಮಾಡಾಳ್ ಹಾಗೂ ಚನ್ನಗಿರಿ ಟೌನ್ ಮೆಟ್ರಿಕ್ ನಂತರದ
ಪರಿಶಿಷ್ಟವರ್ಗಗಳ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡ
ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರೆವೇರಿಸುವರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ
ಜಿ.ಎಂ.ಸಿದ್ದೇಶ್ವರ ಚನ್ನಗಿರಿ ತೋಟಗಾರಿಕೆ ಇಲಾಖೆ ಕಟ್ಟಡವನ್ನು
ಉದ್ಘಾಟಿಸುವರು. ಚನ್ನಗಿರಿ ಕ್ಷೇತ್ರದ ಶಾಸಕರು ಹಾಗೂ
ಕೆ.ಎಸ್.ಡಿ.ಎಲ್ ಅಧ್ಯಕ್ಷರಾದ ಕೆ.ಮಾಡಾಳ್ ವಿರೂಪಾಕ್ಷಪ್ಪ
ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಮಾಯಕೊಂಡ ಕ್ಷೇತ್ರದ
ಶಾಸಕರಾದ ಪ್ರೊ.ಲಿಂಗಣ್ಣ, ಜಿ.ಪಂ ಅಧ್ಯಕ್ಷರಾದ ದೀಪಾ ಜಗದೀಶ್,

ವಿಧಾನ ಪರಿಷತ್ ಶಾಸಕರಾದ ಆರ್.ಪ್ರಸನ್ನಕುಮಾರ್,
ಆಯನೂರು ಮಂಜುನಾಥ್. ಎಸ್.ಎಲ್.ಭೋಜೇಗೌಡ, ಚನ್ನಗಿರಿ
ತಾ.ಪಂ ಅಧ್ಯಕ್ಷರಾದ ಕವಿತ ಕಲ್ಲೇಶ್, ಜಿ.ಪಂ ಉಪಾಧ್ಯಕ್ಷೆ
ಸಾಕಮ್ಮ ಗಂಗಾಧರನಾಯ್ಕ, ತಾ.ಪಂ ಉಪಾಧ್ಯಕ್ಷೆ
ಚಂದ್ರಮ್ಮ ರುದ್ರಪ್ಪ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ,
ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪದ್ಮಬಸವಂತಪ್ಪ
ಪಾಲ್ಗೊಳ್ಳುವರು. ಹಾಗೂ ಉಪವಿಭಾಗದ ಉಪ ವಿಭಾಗಾಧಿಕಾರಿ
ಮಮತ ಹೊಸಗೌಡರ್, ಚನ್ನಗಿರಿ ತಹಶೀಲ್ದಾರ್ ಪುಟ್ಟರಾಜ ಗೌಡ,
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್.ಪ್ರಕಾಶ್, ಚನ್ನಗಿರಿ
ಉಪವಿಭಾಗದ ಪೊಲೀಸ್ ಉಪಾಧೀಕ್ಷರಾದ ಪ್ರಶಾಂತ್ ಜಿ
ಮುನ್ನೋಳಿ, ಆರಕ್ಷಕ ವೃತ್ತ ನಿರೀಕ್ಷಕರಾದ
ಆರ್.ಆರ್.ಪಾಟೀಲ್, ಪುರಸಭೆಯ ಮುಖ್ಯಾಧಿಕಾರಿ ಬಸವರಾಜ್.ಐ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳುವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು
ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಪ್ರಕಟಣೆ
ತಿಳಿಸಿದೆ.

Leave a Reply

Your email address will not be published. Required fields are marked *