ದಾವಣಗೆರೆ ನ.12
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮದಿಂದ 2020-
21ನೇ ಸಾಲಿನಲ್ಲಿ ಅನುಷ್ಠಾನಗೋಳಿಸುತ್ತಿರುವ ಕೆಳಕಂಡ
ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯಲು ಮತೀಯ
ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನರು,
ಬೌದ್ಧÀ್ದರು, ಸಿಖ್ಖರು, ಪಾರ್ಸಿ ಜನಾಂಗದವರಿಂದ ಆನ್‍ಲೈನ್ ಮೂಲಕ
ಅರ್ಜಿಯನ್ನು ಆಹ್ವಾನಿಸಲಾಗಿದೆ.
ಶ್ರಮಶಕ್ತಿ ಸಾಲ ಯೋಜನೆ, ಮೈಕ್ರೋ (ಕಿರು)
ಸಾಲ/ಸಹಾಯಧನ ಯೋಜನೆ, ಗಂಗಾ ಕಲ್ಯಾಣ ಯೋಜನೆ,
ವೃತ್ತಿ ಪ್ರೋತ್ಸಾಹ ಯೋಜನೆ, ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ
ಯೋಜನೆ, ಪಶುಸಂಗೋಪನೆ ಯೋಜನೆ, ಮೈಕ್ರೋ
(ವೈಯಕ್ತಿಕ) ಸಾಲ ಯೋಜನೆಗಳಡಿ ಸಾಲ ಪಡೆಯಲು
ಅರ್ಜಿದಾರರು ಜಿಲ್ಲೆಯಲ್ಲಿ ಕನಿಷ್ಠ 15 ವರ್ಷದಿಂದ ಖಾಯಂ
ನಿವಾಸಿಯಾಗಿರಬೇಕು. ಅರ್ಜಿದಾರರು ಕುಟುಂಬದ ವಾರ್ಷಿಕ ಆದಾಯ
ಗ್ರಾಮಾಂತರ ಪ್ರದೇಶದವರಿಗೆ ರೂ.81,000/- ಮತ್ತು
ನಗರ ಪ್ರದೇಶದವರಿಗೆ ರೂ. 10,3000/- ಮೀರಬಾರದು. 18
ರಿಂದ 55 ವರ್ಷದೊಳಗಿನ ವಯೋಮಾನದಾವರಾಗಿರಬೇಕು.
ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಯೋಜನೆ, ಪಶುಸಂಗೋಪನೆ
ಯೋಜನೆ, ಮೈಕ್ರೋ(ವೈಯಕ್ತಿಕ) ಸಾಲ ಯೋಜನೆಯಡಿ
ಅರ್ಜಿದಾರರ ವಯಸ್ಸು 25 ರಿಂದ 50 ಮೀರಿರÀಬಾರದು.
ಶೇ.33 ರಷ್ಟು ಮಹಿಳೆಯರಿಗೆ ಮೀಸಲಾತಿ ಇರುತ್ತದೆ. ಶೇ
3 ಅಂಗವಿಕಲರಿಗೆ ಮೀಸಲಾತಿ ಇರುತ್ತದೆ. ಅರ್ಜಿದಾರರು ತಮ್ಮ
ಅರ್ಜಿಯೋಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ರೇಷನ್ ಕಾರ್ಡ್, ಆಧಾರ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಖಾತೆ
ಪುಸ್ತಕದ ಪ್ರತಿ, ಯೋಜನಾ ವರದಿ ಹಾಗೂ ಅರ್ಜಿದಾರರ ಹಾಗೂ
ಜಾಮೀನುದಾರರ 2 ಭಾವಚಿತ್ರಗಳನ್ನು ನೀಡಬೇಕು. ಈ ಹಿಂದೆ
ನಿಗಮದ ಸೌಲಭ್ಯವನ್ನು ಪಡೆದವರು ಮತ್ತೆ ಸೌಲಭ್ಯವನ್ನು
ಪಡೆಯಲು ಅರ್ಹರಿರುವುದಿಲ್ಲ. ಅರ್ಜಿದಾರರು
ಕಡ್ಡಾಯವಾಗಿ IಈSಅ ಕೋಡ್ ಇರುವ ಬ್ಯಾಂಕ್ ಖಾತೆ ಪಾಸ್ ಬುಕ್
ಪ್ರತಿಯನ್ನು ಸಲ್ಲಿಸಬೇಕು.
ಏmಜಛಿ.ಞಚಿಡಿ.ಟಿiಛಿ.iಟಿ/ಟoಚಿಟಿ/ಟogiಟಿ.ಚಿsಠಿx ಆನ್‍ಲೈನ್ ಮೂಲಕ ಅರ್ಜಿಯನ್ನು
ಭರ್ತಿ ಮಾಡಿ ಅರ್ಜಿಯ ಪ್ರತಿ ಹಾಗೂ ಅಗತ್ಯ ದಾಖಲೆಗಳೊಂದಿಗೆ
ಮೇಲ್ಕಂಡ ನಿಗಮದ ಜಿಲ್ಲಾ ಕಚೆÉೀರಿಗೆ ಸಲ್ಲಿಸಬೇಕು. ಡಿ.10 ಅರ್ಜಿ
ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ನಂತರ ಬಂದ
ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ನಿಗಮದ ಜಿಲ್ಲಾ
ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.