ದಾವಣಗೆರೆ ನ.13
ನ.17 ರಿಂದ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಅಂತಿಮ
ವರ್ಷದ ಪದವಿ ತರಗತಿಗಳು ಹಾಗೂ ಸ್ನಾತಕೋತ್ತರ
ಪದವಿ ತರಗತಿಗಳು ಪ್ರಾರಂಭವಾಗುವುದರಿಮದ
ತರಗತಿಗೆ ಹಾಜರಾಗುವ ಅಂತಿಮ ವರ್ಷದ ಪದವಿ
ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು
ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಪಿ.ಹೆಚ್.ಸಿ ಯಲ್ಲಿ ಆರ್ಟಿಪಿಸಿಆರ್
ಕೋವಿಡ್-19 ಟೆಸ್ಟ್ ಮಾಡಿಸಿಕೊಂಡು, ನೆಗೆಟಿವ್ ವರದಿಯೊಂದಿಗೆ
ಕಾಲೇಜಿಗೆ ಹಾಜರಾಗಬೇಕು.
ಹಾಗೂ ಈಗಾಗಲೇ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ
ಪಡೆದಿರುವ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಹಾಗೂ
ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯಗಳಲ್ಲಿ
ಹಾಜರಾಗಬೇಕೆಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.