ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಹೊಸಳ್ಳಿ ಗ್ರಾಮದಲ್ಲಿರುವ ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮ ಮಠದ ಪೀಠಾಧ್ಯಕ್ಷರಾದ ಶ್ರೀ ವೇಮನಂದ ಸ್ವಾಮೀಜಿ ಹೊಸಳ್ಳಿ ಗುರುಪೀಠ ಇವರ ನೇತೃತ್ವದಲ್ಲಿ ಇಂದು ಅಖಿಲಭಾರತ ರೆಡ್ಡಿ ಸಮಾಜದ ಸಂಘದ ರಾಜ್ಯ ಧ್ಯಕ್ಷರಾದ ಮೇಜರ್ ರಘುರಾಮ್ ರೆಡ್ಡಿ ಅಧ್ಯಕ್ಷತೆಯಲ್ಲಿ ಇಂದು ಮಠದಲ್ಲಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ರಾಜ್ಯದ ರೆಡ್ಡಿ ಸಮಾಜದ ಏಳಿಗೆ ಮತ್ತು ಸಂಘಟನೆ ಮಾಡುವ ಬಗ್ಗೆ ರಾಜ್ಯದ 28 ಜಿಲ್ಲೆಗಳಿಂದ ಬಂದ ಪದಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಯಾವ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಲಾಯಿತು.
ನಂತರ ಅಧ್ಯಕ್ಷರಾದ ಮೇಜರ್ ರಘುರಾಮ್ ರೆಡ್ಡಿ ಅವರು ಮಾತನಾಡಿ ಭಾರತ ದೇಶದಲ್ಲಿ 25 ರಾಜ್ಯಗಳಲ್ಲಿ ಅಖಿಲ ಭಾರತ ರೆಡ್ಡಿ ಸಮಾಜದ ಅಧ್ಯಕ್ಷರಾದ ಹೈದರಾಬಾದಿನ ನಲ್ಲ ಸಂಜೀವರೆಡ್ಡಿ ಅವರು ಸಂಘಟನೆಯನ್ನು ಮಾಡುತ್ತಿದ್ದು ಅಸಂಘಟನೆ ಕಾರ್ಯದರ್ಶಿಗಳು ಮತ್ತು ಕರ್ನಾಟಕ ರಾಜ್ಯ ರೆಡ್ಡಿ ಸಮಾಜದ ವೆಲ್ಫೇರ್ ಅಧ್ಯಕ್ಷರಾಗಿ ನಾನು ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಮತ್ತು ರಾಜ್ಯದ ಎಲ್ಲಾ ಪಕ್ಷಾತೀತವಾಗಿ ರೆಡ್ಡಿ ಸಮಾಜದ ಮುಖಂಡರು ಮತ್ತು ಹಿರಿಯರು ಸಹಕಾರದೊಂದಿಗೆ ರೆಡ್ಡಿ ಸಮಾಜದ ಏಳಿಗೆಗೆ ಮತ್ತು ಹಿತಕ್ಕಾಗಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ ಎಂದರು.
ಮಠದ ಪೀಠಾಧ್ಯಕ್ಷರಾದ ವೇಮನಂದ ಶ್ರೀಗಳು ರೆಡ್ಡಿ ವಾಹಿನಿ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ನಂತರ ಶ್ರೀಗಳು ಮಾತನಾಡಿ ದೇಶ ಮತ್ತು ರಾಜ್ಯಗಳಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ಮತ್ತು ವೇಮನ ಇವರುಗಳ ಆರಾಧನೆಯನ್ನು ಯಾರು ಮಾಡುತ್ತಾರೋ ಅವರುಗಳೆಲ್ಲ ರೆಡ್ಡಿ ಸಮಾಜದವರು ಎಂದರು. ಯಾಕೆ ಈ ಮಾತು ಶ್ರೀಗಳು ಹೇಳಿದರು ಎಂದರೆ ರೆಡ್ಡಿ ಸಮಾಜದಲ್ಲಿ ಅನೇಕ ಉಪಪಂಗಡಗಳಿವೆ ಆ ಉಪಪಂಗಡಗಳಲ್ಲಿ ಅವರ ಅವರ ಮನೆಯಲ್ಲಿ ಆಹಾರ ಪದ್ಧತಿ ಭಿನ್ನವಾಗಿರಬಹುದು ಆದರೆ ಅದು ನಮಗೆ ಬೇಕಾಗಿಲ್ಲ ಹೇಮರೆಡ್ಡಿ ಮಲ್ಲಮ್ಮ ಮತ್ತು ವೇಮನ ಆರಾಧನೆಯನ್ನು ಮಾಡುವವರೆಲ್ಲ ರೆಡ್ಡಿ ಸಮಾಜದವರು ಎಂದು ಹೇಳಿದರು. ಪೀಠಾಧ್ಯಕ್ಷರಾಗಿ ನಾವು ಸದಾ ಹಗಲು ಇರಳು ಸಮಾಜದ ಏಳಿಗೆಗೆ ಪ್ರಯತ್ನ ಮಾಡುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು:- ರೆಡ್ಡಿ ಸಮಾಜದ ರಾಜ್ಯಾಧ್ಯಕ್ಷರಾದ ರಘುರಾಮರೆಡ್ಡಿ, ಕಾರ್ಯದರ್ಶಿಗಳಾದ ಗುರುನಾಥ ರೆಡ್ಡಿ ,ಬಿಎಂ ಪಾಟೀಲ್, ಪಿಎಸ್ ಮಂಜುನಾಥರೆಡ್ಡಿ, ಮನೋಜ್ ರೆಡ್ಡಿ, ಮಲ್ಲಿಕಾರ್ಜುನ್, ಮಮತಾ,ಹೊನ್ನಾಳಿಯ ಎ.ಬಿ.ಸಿ ನ್ಯೂಸ್ ಸಿನ ಸಂಪಾದಕರಾದ ಅರವಿಂದ್ ಎಸ್, ಶಂಕರ್ ರೆಡ್ಡಿ ,ಶ್ರೀಹರ್ಷ ಪಾಟೀಲ್ ,ರಮೇಶ್ ಬಸಪ್ಪ ಬಗಲಿ ಬೀಳಗಿ , ದೇವರಾಜ್ ಹೆಚ್.ಬಿ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.