ದಾವಣಗೆರೆ ನ.13
ದೀಪಾವಳಿ ಹಬ್ಬವನ್ನು ಜಿಲ್ಲೆಯಲ್ಲಿ ಪಾರಂಪರಿಕವಾಗಿ ಪ್ರತಿ
ವರ್ಷವೂ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗವು
ಹರಡುವುದರಿಂದ ಈ ಹಬ್ಬವನ್ನು ಸರಳ ರೀತಿಯಲ್ಲಿ
ಮಾಲಿನ್ಯರಹಿತವಾಗಿ ಮತ್ತು ಭಕ್ತಿಪೂರ್ವಕವಾಗಿ
ಆಚರಿಸಬೇಕಾಗಿದ್ದು ಸರ್ಕರದ ಮಾರ್ಗಸೂಚನೆಗಳೊಂದಿಗೆ
ಹಸಿರು ನ್ಯಾಯಪೀಠ, ನವದೆಹಲಿ ಇವರು ದೀಪಾವಳಿ ಹಬ್ಬದ
ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಈ
ಕುರಿತು ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
 ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು
ನವೆಂಬರ್ 2019 ರಲ್ಲಿ ವಾಯುವಿನ ಗುನಮಟ್ಟ ಮಾಪನ
ಮಾಡಿದ ವರದಿಗಳ ಪ್ರಕಾರ ರಾಜ್ಯಾದ್ಯಂತ ವಾಯು
ಗುಣಮಟ್ಟವು ಉತ್ತಮ ಅಥವಾ ತೃಪ್ತಿಕರವಾಗಿದ್ದು,
ಬೆಂಗಳೂರಿನ ಕೆಲವೇ ಪ್ರದೇಶಗಳಲ್ಲಿ ಮಧ್ಯಮ
ಗುಣಮಟ್ಟದಾಗಿದ್ದನ್ನು ಗಮನಿಸಿ ರಾಜ್ಯಾದ್ಯಂತ ಹಸಿರು
ಪಟಾಕಿಗಳನ್ನು ಮಾರಾಟ ಮತ್ತು ಸಿಡಿಸಲು ಅವಕಾಶ
ಕಲ್ಪಿಸಲಾಗಿದೆ.

 ಹಸಿರು ಪಟಾಕಿಗಳನ್ನು ಹಚ್ಚುವ/ಸಿಡಿಸುವ ಸಮಯ
ರಾತ್ರಿ 8.00 ರಿಂದ ರಾತ್ರಿ 10.00 ಗಂಟೆಯವರೆಗೆ
ಸೀಮಿತಗೊಳಿಸಿದೆ.
 ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
ವಾಯುವಿನ ಗುಣಮಟ್ಟ ಈ ಅವಧಿಯಲ್ಲಿ ಮಾಪನ ಮಾಡಿ
ವರದಿಗಳನ್ನು ತಮ್ಮ ವೆಬ್‍ಸೈಟ್‍ನಲ್ಲಿ
ಪ್ರದರ್ಶಿಸತಕ್ಕದ್ದು ಹಾಗೂ ಕೇಂದ್ರ ಮಾಲಿನ್ಯ
ನಿಯಂತ್ರಣ ಮಂಡಳಿ, ನವದೆಹಲಿಗೆ ವರದಿಗಳನ್ನು
ಕಳುಹಿಸತಕ್ಕದ್ದು.
 ಮೇಲ್ಕಂಡ ಮಾರ್ಗಸೂಚಿಗಳು ದಿ: 09-11-2020 ರ
ಮಧ್ಯರಾತ್ರಿಯಿಂದ 30-11-2020 ರವರೆಗೆ
ಜಾರಿಯಲ್ಲಿರುತ್ತದೆ.
ಈ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಯಥಾವತ್ತಾಗಿ
ಜಾರಿಗೊಳಿಸುತ್ತ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಮುಖ್ಯ
ಕಾರ್ಯ ನಿರ್ವಹಣಾಧಿಕಾರಿಗಳು, ಸ್ಥಳೀಯ ಸಂಸ್ಥೆಯ
ಮುಖ್ಯಸ್ಥರು ಹಾಗೂ ಇತರೆ ಇಲಾಖೆಗಳ.ಪ್ರಾಧಿಕಾರಿಗಳು
ಪರಿಣಾಮಕಾರಿಯಾಗಿ ಮಾರ್ಗಸೂಚಿಗಳನ್ನು
ಅನುಷ್ಟಾನಗೊಳಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಸೂಚಿಸಿದ್ದಾರೆ.
ಮುಂದುವರೆದು ಸರ್ಕಾರದ ಮಾರ್ಗಸೂಚಿಗಳನ್ನು
ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಜಿಲ್ಲಾ ಮತ್ತು
ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿರುತ್ತದೆ.
ಜಿಲ್ಲಾ ಮಟ್ಟದಲ್ಲಿ ಪಾಲಿಕೆ ಆಯುಕ್ತರು ಸಮಿತಿ ಮುಖ್ಯಸ್ಥರಾಗಿ,
ಉಪ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಪೊಲೀಸ್ ಉಪಾಧೀಕ್ಷಕರು,
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸದಸ್ಯರಾಗಿ,
ಪರಿಸರ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯಗಿ
ನೇಮಿಸಲಾಗಿದೆ.
ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಮುಖ್ಯಸ್ಥರಾಗಿ, ತಾ.ಪಂ ಇಓ
ಗಳು, ಪೊಲೀಸ್ ವೃತ್ತ ನಿರೀಕ್ಷಕರು, ವಲಯ
ಅರಣ್ಯಾಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು,
ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಅಗ್ನಿಶಾಮಕ
ಅಧಿಕಾರಿಗಳು, ಪರಿಸರ ಅಧಿಕಾರಿಗಳು
ಸದಸ್ಯರಾಗಿರುತ್ತಾರೆ. ಈ ಸಮಿತಿಗಳು ಸರ್ಕಾರದ
ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ
ಅನುಷ್ಟಾನಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಿದ ಅಧ್ಯಕ್ಷರಾದ
ಮಹಾಂತೇಶ ಬೀಳಗಿ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *