ದಾವಣಗೆರೆ ನ. 13
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಬಾರಿ ಸಿಎಸ್‍ಐಆರ್ ಮತ್ತು ಎನ್‍ಇಇಆರ್‍ಐ
ಪ್ರಮಾಣಿಕೃತ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ
ಮಾಡುವಂತೆ ಹಾಗೂ ಸಾರ್ವಜನಿಕರು ಬಳಸುವಂತೆ ಸರ್ಕಾರ ಮತ್ತು
ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದ್ದು, ನಿಯಮ ಉಲ್ಲಂಘಿಸುವವರ
ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ
ಸಂಬಂಧ ಇನ್ನೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ
ಅಗತ್ಯವಿದ್ದು, ಸಾರ್ವಜನಿಕರ ಮತ್ತು ಮಕ್ಕಳ ಆರೋಗ್ಯ
ಹಿತದೃಷ್ಟಿಯಿಂದ ದೀಪಾವಳಿ ಹಬ್ಬವನ್ನು ಸರಳವಾಗಿ, ಅರ್ಥಗರ್ಭಿತವಾಗಿ,
ಭಕ್ತಿ ಪೂರ್ವಕವಾಗಿ ಆಚರಿಸುವುದು ಅಗತ್ಯವಾಗಿದೆ. ಹಬ್ಬ
ಸಂದರ್ಭದಲ್ಲಿ ನ. 16 ರವರೆಗೆ ಹಸಿರು ಪಟಾಕಿಗಳನ್ನು ಮಾತ್ರ
ಪಟಾಕಿ ಮಾರಾಟಗಾರರಿಂದ ಮಾರಾಟ ಮಾಡಲು ಮತ್ತು ಸಾರ್ವಜನಿಕರು
ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಲು ಅನುಮತಿಸಲಾಗಿದೆ.
ಹಸಿರು ಪಟಾಕಿಗಳಲ್ಲಿನ ಖರೀದಿಗೆ ಗಮನಿಸಬೇಕಾದ ಚಿಹ್ನೆ, ರಾಷ್ಟ್ರೀಯ
ಪ್ರಮಾಣಪತ್ರ ಮತ್ತು ರಾಸಾಯನಿಕ ಬಳಕೆಗಳ ಬಗ್ಗೆಯೂ
ತಿಳಿಸಲಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಉಚ್ಛ ನ್ಯಾಯಾಲಯವು
ಶುಕ್ರವಾರದಂದು ಕೆಲವು ನಿರ್ದೇಶನಗಳನ್ನು ನೀಡಿದೆ.
ಇದರನ್ವಯ ರಾಜ್ಯದ ನಗರಪಾಲಿಕೆಗಳು ಮತ್ತು ಪೊಲೀಸ್
ಇಲಾಖೆ, ಸಂಬಂಧಪಟ್ಟ ಪ್ರಾಧಿಕಾರಗಳು ಸರ್ಕಾರದ
ಆದೇಶಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಸೂಚನೆ
ನೀಡಲಾಗಿದೆ. ಪಟಾಕಿ ಮಾರಾಟಗಾರರ ಅಂಗಡಿಗಳಿಗೆ ಅಧಿಕಾರಿಗಳು
ಭೇಟಿ ನೀಡಿ ಸಿಎಸ್‍ಐಆರ್ ಮತ್ತು ಎನ್‍ಇಇಆರ್‍ಐ ಪ್ರಮಾಣಿಕೃತ ಹಸಿರು
ಪಟಾಕಿಗಳನ್ನು ಮಾತ್ರ ಮಾರಾಟ ಮಾಡುತ್ತಿರುವ ಬಗ್ಗೆ ಖಾತ್ರಿ
ಪಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಪೊಲೀಸ್ ಮತ್ತು
ಮಾಲಿನ್ಯ ನಿಯಂತ್ರಣ ಮಂಡಳಿಯು ಶಬ್ದ ಮಾಲಿನ್ಯ ತಡೆಗಟ್ಟಲು
ಮತ್ತು ಯಾವುದೇ ಕಾರಣಕ್ಕೂ ನಿಯಮದ ವ್ಯಾಪ್ತಿ ಮೀರಿ
ಪಟಾಕಿಗಳ ಶಬ್ದ ಹೆಚ್ಚಾಗಿ ಹೊಮ್ಮದಂತೆ ಕ್ರಮವಹಿಸಬೇಕು,
ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ
ವಹಿಸಬೇಕೇ ಹೊರತು, ಇಂತಹವರ ಬಗ್ಗೆ ಸಹಾನುಭೂತಿ
ತೋರಿಸಬಾರದು. ಪೊಲೀಸ್ ಇಲಾಖೆ, ನಗರಪಾಲಿಕೆ, ಮಾಲಿನ್ಯ

ನಿಯಂತ್ರಣ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು,
ಪ್ರಾಧಿಕಾರಗಳು ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ
ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *