ದಾವಣಗೆರೆ ನ.13
   ಧನ್ವಂತರಿಯು ಆಯುರ್ವೇದ ಶಾಸ್ತ್ರದ ಜನಕ.
ಧನ್ವಂತರಿ ಜಯಂತಿಯನ್ನು ಆಶ್ವೀಜ ಮಾಸದ  ಕೃಷ್ಣ
ಪಕ್ಷದ 13ನೇ (ತ್ರಯೋದಶಿ) ದಿವಸ ಅಂದರೆ 2020ರ 13ನೇ
ನವಂಬರ್ ಶುಕ್ರವಾರದಂದು ಆಚರಿಸಲಾಗುತ್ತದೆ. ಆದ್ದರಿಂದ
ಇದಕ್ಕೆ ‘‘ಧನ್ವಂತರಿ ತ್ರಯೋದಶಿ” ಎಂತಲೂ
ಕರೆಯುತ್ತಾರೆ. ಧನ್ವಂತರಿಯನ್ನು ಆರೋಗ್ಯದ
ದೈವವೆಂದು ಹೇಳಲಾಗುತ್ತದೆ.
2020 ನೇ ಇಸ್ವಿಯಲ್ಲಿ ಕೋವಿಡ್-19 ಎಂಬ ಮಹಾಮಾರಿಯು
ನಮ್ಮೆಲ್ಲರನ್ನು ತಲ್ಲಣಗೊಳಿಸಿದೆ. ಅದರೆಡಗಿನ ಜಾಗರೂಕತೆ
ನಮ್ಮಲ್ಲಿ ಇನ್ನೂ ಜಾಗೃತವಾಗಿರಬೇಕಾದ ಅನಿವಾರ್ಯತೆಯು
ಮುಂದುವರೆದಿದೆ. ಇದೇ ಹಿನ್ನೆಲೆಯಲ್ಲಿ ಈ ವರ್ಷದ
ದೀಪಾವಳಿಯನ್ನು ಹಸಿರಾಗಿಸಬೇಕಾದ ಕರ್ತವ್ಯವು ನಮ್ಮ
ಮುಂದಿದೆ. ಈ ಎಲ್ಲಾ ಸಂಭ್ರಮಗಳ ನಡುವೆ ರಾಷ್ಟ್ರೀಯ
ಆಯುರ್ವೇದ ದಿನವೂ ಬಂದಿದೆ.
   ಆಯುಷ್ ಮಂತ್ರಾಲಯವು ಧನ್ವಂತರಿ ಜಯಂತಿಯನ್ನು
2016ನೇ ಇಸ್ವಿಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ
ಘೋಷಿಸಿದೆ ಮತ್ತು ಈ ವರ್ಷದ ಅಂದರೆ 5ನೇ ವರ್ಷದ ಘೋಷ
ವಾಕ್ಯವು “ಆಯುರ್ವೇದ ಫಾರ್ ಕೋವಿಡ್-19 ಪ್ಯಾಂಡಮಿಕ್”
ಎಂದು ತಿಳಿಸಿದೆ.
   ಭೂಲೋಕದಲ್ಲಿದ್ದ ಸಂಕಷ್ಟಗಳನ್ನು ಕಂಡು
ಇಂದ್ರನು ಭಗವಾನ್ ವಿಷ್ಣುವಿನಲ್ಲಿ ಮೊರೆ ಹೋಗಿ ಎಲ್ಲರನ್ನು
ಸಂರಕ್ಷಿಸಲು ವಿನಂತಿಸಿದಾಗ ಭಗವಾನ್ ವಿಷ್ಣುವು ಭಗವಾನ್
ಧನ್ವಂತರಿಯಾಗಿ ಉದ್ಭವಿಸುವುದಾಗಿ ಹೇಳಿದ್ದನೆಂದು
ಉಲ್ಲೇಖವಿದೆ. ಅದರ ಪ್ರಕಾರ ಭಗವಾನ್ ಧನ್ವಂತರಿಯಾಗಿ
ಉದ್ಭವಿಸಿದ್ದರಿಂದ ‘‘ಧನ್ವಂತರಿ ಜಯಂತಿ” ಎಂದು ಇಂದಿಗೂ
ಆಚರಿಸಲ್ಪಡುತ್ತಿದೆ.
ಆಯುರ್ವೇದ ಮತ್ತು ಕೋವಿಡ್-19: ಕೋವಿಡ್-19
ಮಹಾಮಾರಿಯಲ್ಲಿ ರೋಗಿಗಳ ರೋಗ ನಿರೋಧಕ
ಶಕ್ತಿಯನ್ನು ಹೆಚ್ಚಿಸಬೇಕಾಗಿರುವುದು ಅತ್ಯವಶ್ಯಕವಾಗಿದೆ.
ಆರೋಗ್ಯವಂತನ ಆರೋಗ್ಯವನ್ನು ಕಾಪಾಡುವುದು
ಮತ್ತು ರೋಗಿಯನ್ನು ರೋಗದಿಂದ ಗುಣಮುಖ ಮಾಡಿ
ಆರೋಗ್ಯವನ್ನು ನೀಡುವುದು ಆಯುರ್ವೇದದ ಮೂಲ
ಉದ್ದೇಶವಾಗಿದೆ. ಕೋವಿಡ್-19 ಸೋಂಕಿಗೆ ಒಳಗಾದವರು
ಮತ್ತು ಸೋಂಕಿಗೆ ಒಳಗಾಗದವರು ಎಂಬ ಎರಡೂ ಗುಂಪಿನ
ಜನರಿಗೆ ಆಯುರ್ವೇದದ ಪಾತ್ರ ತುಂಬಾ ಮುಖ್ಯ. ಈ
ಹಿನ್ನೆಲೆಯಲ್ಲಿ ಆಯುಷ್ ಸಚಿವಾಲಯವು ಕಾಲ ಕಾಲಕ್ಕೆ ಸೂಕ್ತ
ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆಗೊಳಿಸಿ ಜನ
ಸಾಮಾನ್ಯರಿಗೆ ಆರೋಗ್ಯ ದೊರಕುವಂತೆ ಮಾಡಲು
ಪ್ರಮುಖ ಪಾತ್ರವಹಿಸಿದೆ.

ಕೋವಿಡ್-19ಗೆ ಆಯುರ್ವೇದದ ಸಲಹಾ ಸೂಚಿಯ ಕೆಲ
ಪ್ರಮುಖ ಔಷಧಗಳಾದ ಸಂಶಮನಿ ವಟಿ, ಚ್ಯಚನಪ್ರಾಶ,
ಆಯುಷ್ ಕ್ವಾಥ ಮತ್ತು ಗೋಲ್ಡನ್ ಮಿಲ್ಕ್‍ನ್ನು ಜನ
ಸಾಮಾನ್ಯರು ಮತ್ತು ಕೋವಿಡ್-19 ಸೋಂಕಿತರು ಸಹ
ಸೇವಿಸಲು ಅನುಕೂಲವಾಗುವಂತೆ ಆಯುಷ್ ಇಲಾಖೆಯ
ಮುಖಾಂತರ ಔಷಧಿಗಳನ್ನು ವಿತರಿಸಲಾಗಿದೆ.
ಆಯುರ್ವೇದದ ಕಾರ್ಯತಂತ್ರಗಳು:  ಬೇಗನೆ
ಮಲಗುವುದು, ಬೇಗನೆ ಏಳುವುದು. ಹಲ್ಲು ಉಜ್ಜಿದ
ನಂತರ 2 ಹನಿ ಅಣು ತೈಲವನ್ನು ಅಥವಾ ತುಪ್ಪ, ಎಳ್ಳೆಣ್ಣೆ ಅಥವಾ
ತೆಂಗಿನ ಎಣ್ಣೆಯನ್ನು  ಮೂಗಿನ ಎರಡು ಹೊಳ್ಳೆಗಳಲ್ಲಿ
ಹಾಕುವುದು (ಪ್ರತಿಮರ್ಷ ನಸ್ಯ).  ಪುದಿನ ಎಲೆಗಳು ಹಾಗೂ
ಅಜವಾಯನದೊಂದಿಗೆ ಕುದಿಸಿದ ನೀರಿನಿಂದ ಹವೆ
ತೆಗೆದುಕೊಳ್ಳುವುದು.  ಅರಿಶಿಣ, ಜೀರಿಗೆ, ಕೊತ್ತಂಬರಿ ಹಾಗೂ
ಬೆಳ್ಳುಳ್ಳಿಯನ್ನು ದಿನ ನಿತ್ಯದ ಅಡುಗೆಯಲ್ಲಿ
ಉಪಯೋಗಿಸುವುದು. 150 ಎಂ.ಎಲ್ ಬಿಸಿ ಹಾಲಿಗೆ 1/3 ಟೀ ಚಮಚ
(1.66ಗ್ರಾಂ) ಅರಿಶಿನ ಪುಡಿಯನ್ನು ಸೇರಿಸಿ ಪ್ರತಿ ದಿನ ರಾತ್ರಿ
ಮಲಗುವ ಮುನ್ನ ಕುಡಿಯುವುದು. ಈ ರೀತಿಯ ಸರಳ
ಸೂತ್ರಗಳನ್ನು ಪ್ರತೀ ನಿತ್ಯ ಪಾಲಿಸಿ ನಮ್ಮ ದೇಹವನ್ನು
ಸೋಂಕಿನಿಂದ ರಕ್ಷಿಸಿಕೊಳ್ಳಬೇಕು.
  ಈಗೀಗ ಕೊರೊನಾ ಸೋಂಕು ಗಣನೀಯವಾಗಿ
ಇಳಿಮುಖಗೊಂಡಿದೆ. ಆದರೆ ಮುಂದಿನ ದಿನಗಳಲ್ಲಿ ಹೆಚ್ಚಾದರೂ
ಆಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ
ನಮ್ಮನ್ನು ಸರ್ಕಾರವು ರಕ್ಷಿಸುವ ನಿಟ್ಟಿನಲ್ಲಿ 3
ಸೂತ್ರಗಳನ್ನು ಪಾಲಿಸಲು ತಿಳಿಸುತ್ತಲೇ ಇದೆ.
ದೈಹಿಕ ಅಂತರ: ಅನ್‍ಲಾಕ್ ಪ್ರಕ್ರಿಯೆಯು ಈಗ ದೇಶದ
ತುಂಬೆಲ್ಲಾ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನಮ್ಮನ್ನು
ನಾವು ಮತ್ತೊಬ್ಬರಿಂದ ಕನಿಷ್ಟ 6 ಅಡಿ ಅಂತರದಲ್ಲಿದ್ದು
ನಮ್ಮನ್ನು ಸೋಂಕಿನಿಂದ ರಕ್ಷಿಸಿಕೊಳ್ಳಬಹುದು.
ಮುಖಗವಸು/ಮಾಸ್ಕ್:ಕೆಮ್ಮಿದಾಗ ಮತ್ತು ಸೀನಿದಾಗ ಸೋಂಕು
ಹರಡುವ ಸಾಧ್ಯತೆಯಿದ್ದು ನಾವು ಮುಖಗವಸು/ಮಾಸ್ಕ್‍ನ್ನು
ಧರಿಸಿ ಸೋಂಕಿನಿಂದ ದೂರವಿರಬಹುದು.
ಕೈಗಳ ಸ್ವಚ್ಛತೆ ಪ್ರತೀ 30 ನಿಮಿಷಗಳ ಅಂತರದಲ್ಲಿ
ಸಾಬೂನಿನಿಂದ ನಮ್ಮ ಕೈಗಳನ್ನು ಸ್ವಚ್ಛಗೊಳಿಸಿದರೆ ನಾವು
ಸೋಂಕಿಗೊಳಗಾಗುವುದನ್ನು ತಪ್ಪಿಸಬಹುದು. ಕೋವಿಡ್-19
ಸಾಂಕ್ರಾಮಿಕ ರೋಗವನ್ನು ಎದುರಿಸಲು ನಡೆಯುತ್ತಿರುವ
ಜಾಗತೀಕ ಸಹಯೋಗದ ಕುರಿತು ಚರ್ಚಿಸಲು ಮಾನ್ಯ
ಪ್ರಧಾನ ಮಂತ್ರಿಗಳು ವಿಶ್ವ ಆರೋಗ್ಯ ಸಂಸ್ಥೆಯ ಮಹಾ
ನಿರ್ದೇಶಕರೊಂದಿಗೆ ಬುಧವಾರ ದೂರವಾಣಿ ಸಂಭಾಷಣೆಯಲ್ಲಿ
ನವಂಬರ್ 13 ರಂದು ಕೋವಿಡ್-19 ಪಿಡುಗಿಗೆ ಆಯುರ್ವೇದ” ಎಂಬ
ವಿಷಯದಡಿಯಲ್ಲಿ ಭಾರತದಲ್ಲಿ ಯೋಜಿತ ಆಯುರ್ವೇದ
ದಿನಾಚರಣೆಯನ್ನು ಆಚರಿಸಲಾಗುವುದರ ಬಗ್ಗೆ ತಿಳಿಸಿದ್ದಾರೆ.
ಆದ್ದರಿಂದ ನಾವೆಲ್ಲರೂ ಈ ವರ್ಷದ ರಾಷ್ಟ್ರೀಯ ಆಯುರ್ವೇದ
ದಿನದಂದು ಸರ್ಕಾರ ನೀಡಿರುವ ಸಲಹೆಗಳನ್ನು ಪಾಲಿಸಿ ನಮ್ಮ

ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಕೋವಿಡ್-19ನ್ನು
ಸೋಲಿಸಿ ಆರೋಗ್ಯದೆಡೆಗೆ ಹೆಜ್ಜೆ ಹಾಕೋಣ, ಆಯುರ್ವೇದ ನಿತ್ಯ
ಪಾಲಿಸೋಣ ಎಂದು ಆಯುಷ್ ಇಲಾಖೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *