ದಾವಣಗೆರೆ ಜಿಲ್ಲೆ ಹೊನ್ನಾಳಿ ಟೌನಿನಲ್ಲಿರುವ ಶಂಕರಮಠದಲ್ಲಿ ಇಂದು ಗೋಪೂಜೆಯನ್ನು ಹಮ್ಮಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ಗೋಮಾತೆ ಮತ್ತು ಕರುವಿಗೆ ಪೂಜೆಯನ್ನು ಮಾಡುವುದರ ಮೂಲಕ ಭಾರತೀಯ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಗೌರವಿಸುವಂತಾಗ ಬೇಕು ಎಂದು ಹೇಳಿದರು.
ನಂತರ ಅವರು ಮಾತನಾಡಿ ಹಸುವನ್ನು ನಾವು ಲಕ್ಷ್ಮಿಗೆ ಹೋಲಿಸುತ್ತೇವೆ, ಯಾವುದೆಲ್ಲ ಮಾತೃಸ್ವರೂಪವೋ ಅವೆಲ್ಲವೂ ನಮಗೆ ಲಕ್ಷ್ಮಿ. ಅದು ಜನ್ಮ ಕೊಟ್ಟ ತಾಯಿ ಆಗಿರಬಹುದು,ಭೂಮಾತೆ ಆಗಿರಬಹುದು, ಕಾಮಧೇನು ಆಗಿರಬಹುದು. ಹಸುವಿಲ್ಲದೆ ಮನುಷ್ಯನಿಗೆ ಜೀವನ ಇಲ್ಲ, ಹಸುವಿನಿಂದ ಸಿಗುವ ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ, ತುಪ್ಪ, ಗಂಜಳ, ಸಗಣಿ ಎಲ್ಲವೂ ಉಪಯೋಗವಾಗುತ್ತದೆ.
ಹೀಗೆ ಎಲ್ಲವನ್ನೂ ಮನುಷ್ಯನಿಗೆ ನೀಡುವ ಮುಗ್ಧವಾದ ಪ್ರಾಣಿ ಹಸುವನ್ನು ಲಕ್ಷ್ಮಿಪೂಜೆ ಮಾಡುವ ದಿನ ಗೋಪೂಜೆ ಎಂದು ಹಸು, ಕರುಗಳಿಗೆ ಆರತಿ ಬೆಳಗಿ, ತಿನಿಸು ಕೊಡುತ್ತೇವೆ.
ಇದಕ್ಕೆ ಹಿನ್ನೆಲೆ ಗೋವತ್ಸ ದ್ವಾದಶಿ ಎಂದು, ಗೋವತ್ಸ ಎಂದರೆ ಹಸುವಿನ ಕರು, ಹೊಸದಾಗಿ ಹುಟ್ಟಿದ ಕರುವಿಗೆ ಪೂಜೆ ಮಾಡುತ್ತೇವೆ, ಅದನ್ನು ಬಲಿಪಾಡ್ಯಮಿ ದಿನ ಗೋಪೂಜೆ ಮಾಡುತ್ತೇವೆ.
ಇಂದಿನ ಯಾಂತ್ರಿಕ ಬದುಕಿನಲ್ಲಿ ನಗರ ಶೈಲಿಯ ಜೀವನದಲ್ಲಿ ಪ್ರಕೃತಿ ಸಾಕು ಪ್ರಾಣಿಗಳನ್ನು ವರ್ಷದಲ್ಲಿ ಒಂದು ದಿನವನ್ನಾದರೂ ಆಚರಿಸಿ ಲಕ್ಷ್ಮಿದೇವಿಯನ್ನು ನೆನೆಯೋಣ ಎನ್ನುವುದೇ ಉದ್ದೇಶವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು:-ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು, ಪೂರೋಹಿತಿಕೆ ಉಮಾಕಾಂತ್ ಜೋಯಿಸ್ ಮತ್ತು ಅವರ ಕುಟುಂಬ, ಹೆಚ್.ಎ ಉಮಾಪತಿ,ಮತ್ತು ಸತ್ಯನಾರಾಯಣ್ ಸಹ ಭಾಗಿಯಾಗಿದ್ದರು