ದಾವಣಗೆರೆ: ಶ್ರೀಮತಿ ಮಮತಾ ಮಲ್ಲಿಕಾರ್ಜುನ್. ಬಾವಿಕಟ್ಟಿ ಇವರನ್ನು ಅಖಿಲ ಭಾರತ ರೆಡ್ಡಿ ಒಕ್ಕೂಟ(ರಿ) ರಾಜ್ಯ ಮಹಿಳಾ ಘಟಕದ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು .ಇದರ ಜೊತೆ ಅಖಿಲ ಭಾರತ ರೆಡ್ಡಿ ಸಮಾಜದ ರಾಜ್ಯ ಕಾರ್ಯಕಾರಿಣಿ ಮಂಡಳಿಗೆ 11ಜನ ಆಯ್ಕೆಯಾಗಿದ್ದು ಐಡಿ ಕಾರ್ಡ್, ಪ್ರಮಾಣ ಪತ್ರವನ್ನು ಗುರುಗಳು ವಿತರಣೆ ಮಾಡಿದರು . ಹರಿಹರ ತಾಲ್ಲೂಕಿನ ಎರೆ ಹೊಸಹಳ್ಳಿಯ ಹೇಮವೇಮ ರೆಡ್ಡಿ ಗುರುಪೀಠದ ನಡೆದ ಕಾರ್ಯಕ್ರಮದಲ್ಲಿ ಮಮತಾ ಅವರನ್ನು ಅಭಿನಂದಿಸಲಾಯಿತು. ಹಾಗೂ ಶ್ರೀಗಳ ಆರ್ಶೀವಾದವನ್ನು ಸಹ ಅವರು ಪಡೆದರು.ನಂತರ ಮಾತನಾಡಿದ ಅವರು ನನಗೆ ಕೊಟ್ಟ ಜವಾಬ್ದಾರಿ ದೊಡ್ಡದು ಶ್ರೀಗಳು ಮತ್ತು ಹಿರಿಯರು ಆರ್ಶೀವಾದ, ಕಿರಿಯರ ಸಹಕಾರದೊಂದಿಗೆ ಸೇವೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಗುರುಪೀಠದ ವೇಮಾನಂದ ಗುರುಗಳ ಸಾನ್ನಿಧ್ಯ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷ ಮೇಜರ್ ಎನ್.ರಘುರಾಮ ರೆಡ್ಡಿ ನೇತೃತ್ವ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಗುರುನಾಥ ‘ರೆಡ್ಡಿ, ಬಿ.ಎಂ. ಪಾಟೀಲ್, ರಮೇಶ್ ಬಗಲಿ, ಹರ್ಷಾ ಪಾಟೀಲ್, ಸುನೀಲ್ ರೆಡ್ಡಿ ಬಾಂಡರಾವಿ, ಮಲ್ಲಿಕಾರ್ಜುನ್ ಬಾವಿಕಟ್ಟಿ, ಮನೋಜ್, ಶಂಕರ್‌ರೆಡ್ಡಿ ಬಾಗಲಕೋಟ, ದೇವರಾಜ ಎಚ್.ಪಿ. ಸಹ ಭಾಗಿಯಾಗಿದ್ದರು.