ನಂತರ ಕರ್ನಾಟಕ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಗುರುನಾಥ್ ರೆಡ್ಡಿ ಕೆ ಚಿಂತಾಕಿಯವರು ಮಾತನಾಡಿ ರಾಜ್ಯದಲ್ಲಿ ನಮ್ಮ ರೆಡ್ಡಿ ಸಮುದಾಯ 95 ಲಕ್ಷ ಜನಸಂಖ್ಯೆಯೊಂದಿದೆ. ನಮ್ಮ ರೆಡ್ಡಿ ಸಮುದಾಯದವರಿಗೆ ವಿಧಾನಸಭೆ ಮತ್ತು ಲೋಕಸಭೆ
ಚುನಾವಣೆ ಬಂದಾಗ ಮಾತ್ರ ಆಶ್ವಾಸನೆ ಕೊಡುವುದಕ್ಕೆ ನೆನಪಾಗುತ್ತದಾ? 95 ಲಕ್ಷ ಜನಸಂಖ್ಯೆ ಮತ್ತು ಮತದಾರರಿರುವ ಸಮುದಾಯ ಸರ್ಕಾರದ ಮುಂದೆ ಭಿಕ್ಷೆ ಕೇಳಬೇಕಾ?
ಕಳೆದ ಹಲವು ವರ್ಷಗಳಿಂದ ರೆಡ್ಡಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಮುದಾಯದ ಹಲವು ಸಂಘಟನೆಗಳು , ಸರ್ಕಾರದ ಮೇಲೆ ಸತತ ಒತ್ತಡ ಹಾಕುತ್ತಿದ್ದರು ತಾವು ಕಡೆಗಣಿಸುತ್ತಿರುವುದು ಸರಿಯಲ್ಲ. ಇದು ಸಮುದಾಯಕ್ಕೆ ಮಾಡುತ್ತಿರುವ ದೊಡ್ಡ ವಂಚನೆ. ಇನ್ನೂ ತಾಳ್ಮೆ ಪರೀಕ್ಷೆ ಬೇಡ. ಶೀಘ್ರದಲ್ಲೇ ಮೀಸಲಾತಿ ಮತ್ತು ಸಮುದಾಯದ ಅಭಿವೃದ್ಧಿ ನಿಗಮ ಘೋಷಣೆ ಆಗದಿದ್ದಲ್ಲಿ ರಾಜ್ಯವ್ಯಾಪಿ ರೆಡ್ಡಿ ಒಕ್ಕೂಟ ಬೀದಿಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಆನ್ಲೈನ್ ಮೂಲಕ ಎ.ಬಿ.ಸಿ ನ್ಯೂಸ್ ಚಾನೆಲ್ ರವರಿಗೆ ತಿಳಿಸಿದರು.