ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ ನವೆಂಬರ್ 17 ಇಂದು ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು , ಉಪಾಧ್ಯಕ್ಷರು,ಮತ್ತು ಕಾಂಗ್ರೆಸ್ ಹಾಗೂ ಬಿಜೆಪಿ ಸರ್ವ ಸದಸ್ಯರುಗಳಿಗೆ ವಿಶೇಷ ಸಭೆಯನ್ನು ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಹೆಚ್.ಎಂ ವೀರಭದ್ರಯ್ಯ ನವರು ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸರ್ವಸದಸ್ಯರುಗಳಿಗೆ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳು ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಿದರು.
ಆ ಪ್ರತಿಜ್ಞಾ ಬೋಧನೆ ಈ ರೀತಿ ಇದೆ
ಪಟ್ಟಣ ಪಂಚಾಯಿತಿ ಶ್ರೀ ಆದ ನಾನು ಚುನಾಯಿತ ನ/ ಳಾಗಿದ್ದು ಭಾರತ ಸಂವಿಧಾನಕ್ಕೆ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ ಮತ್ತು ನಾನು ಈಗ ಸದಸ್ಯರಾಗಿ ಕೈಗೊಳ್ಳಲಿರುವ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ ಎಂದು ನಾನು ಭಗವಂತನ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. ಮತ್ತು ಶ್ರದ್ಧಾಪೂರ್ವಕವಾಗಿ ದೃಢೀಕರಿಸುತ್ತೇವೆ ಎಂದು ಪ್ರತಿಜ್ಞಾ ವಿಧಿಯನ್ನು ಹೇಳಿದರು.
ನಂತರ ಅಧ್ಯಕ್ಷರಾದ ಕೆ ವಿ ಶ್ರೀಧರ್ ಅವರು ಮಾತನಾಡಿ ಅಧ್ಯಕ್ಷನಾಗಿ ನಾನು ಚಿಕ್ಕವನು ಗೆದ್ದಂತಹ ಸದಸ್ಯರು ಮತ್ತು ಸದಸ್ಯನಿಯಲ್ಲಿ ಹಿರಿಯರು ಮತ್ತು ಕಿರಿಯರು ಸಹ ಇದ್ದಿರೀ ಹಿರಿಯರ ಮಾರ್ಗದರ್ಶನ, ಕಿರಿಯರು ಹಾಗೂ ಸಮವಯಸ್ಕರ ಸದಸ್ಯರುಗಳು ನಿಮ್ಮೆಲ್ಲರ ಸಹಕಾರದೊಂದಿಗೆ ಹೊನ್ನಾಳಿ ಅಭಿವೃದ್ಧಿಯತ್ತ ಎಲ್ಲರೂ ಪಕ್ಷಾತೀತವಾಗಿ ಶ್ರಮಿಸೋಣ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಸದಸ್ಯರಾದ ಸುರೇಶ ರವರು ಮಾತನಾಡಿ ನಾವು ಕಾಂಗ್ರೆಸ್ ಪಕ್ಷದ ವತಿಯಿಂದ ನೀವು ಮಾಡುವ ಒಳ್ಳೆಯ ಕೆಲಸಗಳಿಗೆ ಸಹಕಾರ ಇರುತ್ತದೆ ಎಂದು ಹೇಳಿದರು.
ನಂತರ ಆ ಸಭೆಗೆ ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ ರವರು ಆಗಮಿಸಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರುಗಳಿಗೆ ಶುಭಕೋರಿದರು.
ನಂತರ ಮಾತನಾಡಿದ ಅವರು 2018ನೇ ಸಾಲಿನಲ್ಲಿ ಯುಜಿಡಿ ಹೊನ್ನಾಳಿ ಟೌನ್ ನಿನಲ್ಲಿ ಮಾಡಿದ್ದು ಅದು ಸರಿಯಾಗಿ ಯೋಜನೆಗೆ ಅನುಷ್ಠಾನ ಆಗದ ಕಾರಣ ಈಗ ಹೊಸದಾಗಿ ಯುಜಿಡಿ ಯೋಜನೆಗೆ 60 ಕೋಟಿ ಅನುದಾನ ಮತ್ತು ಕುಡಿಯುವ ನೀರಿಗಾಗಿ 25 ಕೋಟಿ ಅನುದಾನವನ್ನು ತರುವುದಾಗಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಂಪಿ ರೇಣುಕಾಚಾರ್ಯ ಶಾಸಕರು, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಹೆಚ್.ಎಂ ವೀರಭದ್ರಯ್ಯ ನವರು, ಅಧ್ಯಕ್ಷರಾದ ಕೆ ವಿ ಶ್ರೀಧರ್, ಉಪಾಧ್ಯಕ್ಷರಾದ ರಂಜಿತ ಚನ್ನಪ್ಪ ,ಕಾಂಗ್ರೆಸ್ ಮತ್ತು ಬಿಜೆಪಿಯ ಸರ್ವ ಸದಸ್ಯರು ಸಹ ಭಾಗಿಯಾಗಿದ್ದರು.