ದಾವಣಗೆರೆ ನ.18
ಕೃಷಿ ಉತ್ಪಾದನೆಯು ಪ್ರಕೃತಿಯ ಮೇಲೆ
ಅವಲಂಬಿತವಾಗಿದ್ದು, ಕಟಾವು ನಂತರ ವಿವಿಧ ರೀತಿಯ
ಕೊಯ್ಲೋತ್ತರ ನಷ್ಟಗಳಿಗೆ ತುತ್ತಾಗುತ್ತಿದೆ.
ವಿಶ್ವಬ್ಯಾಂಕ್ ಸಮೀಕ್ಷೆಯ ಪ್ರಕಾರ ಕೊಯ್ಲಿನಿಂದ
ಆರಂಭಗೊಂಡು ಗ್ರಾಹಕರನ್ನು ತಲುಪವವರೆಗೆ ವಿವಿಧ
ಹಂತಗಳಲ್ಲಿ ಶೇ.10-15 ರಷ್ಟು ಆಹಾರ ಧಾನ್ಯವು
ನಷ್ಟವಾಗುತ್ತಿದ್ದು ಇದು ಉತ್ಪನ್ನಗಳ ಪ್ರಮಾಣ ಹಾಗೂ
ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ. ಈ ನಷ್ಟವು
ರೂ.10 ಕೋಟಿ ಜನರಿಗೆ ಆಹಾರವಾಗಬಲ್ಲದು ಎಂದು
ಅಂದಾಜಿಸಲಾಗಿದೆ. ಆದ್ದರಿಂದ ಬೆಳೆಸಿದ ಪ್ರತಿ ಕಾಳನ್ನು ಉಳಿಸಿ, ಆಹಾರ
ಸಂರಕ್ಷಣೆ ಮಾಡುವ ಮೂಲಕ ಆಹಾರ ಭದ್ರತೆ
ಸಾಧಿಸಬಹುದಾಗಿದೆ.
ಇಂತಹ ಅಪಾರ ನಷ್ಟವನ್ನು ತಡೆಗಟ್ಟಲು
ಸಾಧ್ಯವಾಗಬಹುದಾದ ತಾಂತ್ರಿಕತೆಗಳನ್ನು ಕುರಿತು ಜಿಲ್ಲಾ
ಕೃಷಿ ತರಬೇತಿ ಕೇಂದ್ರ, ಕಾಡಜ್ಜಿ, ದಾವಣಗೆರೆ ವತಿಯಿಂದ
‘ಆಹಾರ ಧಾನ್ಯಗಳ ಕಟಾವು ನಂತರದ ತಾಂತ್ರಿಕತೆಗಳು’
ಬಗ್ಗೆ ಆನ್‍ಲೈನ್ ತರಬೇತಿ ಕಾರ್ಯಕ್ರಮವನ್ನು ನ.20 ರಂದು
ಅಪರಾಹ್ನ 12.30 ರಿಂದ 1.30 ರವರೆಗೆ ಆಯೋಜಿಸಿದ್ದು,
ಡಾ.ಉದಯಕುಮಾರ್ ನಿಡೋಣಿ, ಪ್ರಾಧ್ಯಾಪಕರು ಹಾಗೂ
ಮುಖ್ಯಸ್ಥರು, ಫುಡ್ ಇಂಜಿನಿಯರಿಂಗ್ ವಿಭಾಗ, ಕೃಷಿ
ವಿಶ್ವವಿದ್ಯಾಲಯ, ರಾಯಚೂರು ಇವರು ವಿಷಯ ಮಂಡನೆ
ಮಾಡಲಿದ್ದು, ರೈತರು ಗೂಗಲ್ ಮೀಟ್ ಲಿಂಕ್
meeಣ.googಟe.ಛಿom/bಛಿತಿ-eಠಿರಿq-ಥಿಚಿತಿ ಬಳಸಿ ತರಬೇತಿಯ ಪ್ರಯೋಜನ
ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ
ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿ,
ದಾವಣಗೆರೆ ಮೊ.ಸಂ: 9945910090, 8277928964 ಇವರನ್ನು
ಸಂಪರ್ಕಿಸಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ
ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *