ದಾವಣಗೆರೆ ನ.19
  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,
ರಾಬ್ತಾಯೆ ಮಿಲ್ಲತ್ ಸಂಘಟನೆ ದಾವಣಗೆರೆ ಇವರ
ಸಂಯುಕ್ತಾಶ್ರಯದಲ್ಲಿ  ನ.20 ರಂದು ಬೆಳಿಗ್ಗೆ 11.30 ಕ್ಕೆ ಜಿಲ್ಲಾ
ಕಾನೂನು ಸೇವಾ ಪ್ರಾಧಿಕಾರ, ಹಳೇ ನ್ಯಾಯಾಲಯದ
ಸಂಕೀರ್ಣ,  ಎ.ಡಿ.ಆರ್. ಕಟ್ಟಡ, ದಾವಣಗೆರೆ ಇಲ್ಲಿ ‘ರಾಷ್ಟ್ರೀಯ ಐಕ್ಯತಾ
ಸಪ್ತಾಹದ ಅಂಗವಾಗಿ ಅಲ್ಪ ಸಂಖ್ಯಾತರ ಕಲ್ಯಾಣ ದಿನ’
ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಾಬಪ್ಪ
ಉದ್ಘಾಟಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ
ಎನ್.ಟಿ.ಮಂಜುನಾಥ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ರಾಬ್ತಾಯೆ ಮಿಲ್ಲತ್ ಸಂಘಟನೆಯ
ಅಧ್ಯಕ್ಷರಾದ ಗೌಸ್ ಖಾನ್, ಕರ್ನಾಟಕ ರಾಜ್ಯ ಕಾನೂನು ಸೇವಾ
ಪ್ರಾಧಿಕಾರ ಸದಸ್ಯರಾದ ಅರುಣ್ ಕುಮಾರ್ ಎಲ್.ಹೆಚ್,
ವಕೀಲರಾದ ಅಬ್ದುಲ್ ಸಮದ್ ಪಾಲ್ಗೊಳ್ಳುವರು. ವಕೀಲರಾದ
ಅನೀಸ್ ಪಾಶ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರೆಂದು
ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *