ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಇಂದು ದೇವನಾಯಕನಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ನೌಕರರ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಎರಡು ಜನ ಕಾರ್ಯಕರ್ತರಂತೆ ಆಯ್ಕೆ ಮಾಡಿ ಅವರನ್ನು ಕೊರೋನಾ ವಾರಿಯರ್ಸ್ ಗಳಿಗೆ ಆರೋಗ್ಯ ಹಸ್ತದ ಬಗ್ಗೆ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ರವರು ಮತ್ತು ಜಿಲ್ಲಾಧ್ಯಕ್ಷರಾದ ಮಂಜಪ್ಪನವರು ಕಾರ್ಯಕರ್ತರುಗಳಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಟ್ಟರು.

ನಂತರ ಮಾತನಾಡಿದ ಡಿ ಜಿ ಶಾಂತನಗೌಡ್ರು ಅವರು ಕಾಂಗ್ರೆಸ್ ಪಕ್ಷದ ಕೊರೊನಾ ವಾರಿಯರ್ಸ್ ಗಳು ಪ್ರತಿಯೊಂದು ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರುಗಳ ಮನೆ ಮನೆಗೆ ತೆರಳಿ ಪ್ರತಿಯೊಬ್ಬರಿಗೂ ಕೊರೋನಾ ಟೆಸ್ಟ್ ಮಾಡಿ ನಮ್ಮ ಕಾರ್ಯಕರ್ತರುಗಳ ಆರೋಗ್ಯವನ್ನು ಸುಧಾರಿಸಬೇಕು ಎಂದು ಹೇಳಿದರು. ತದನಂತರ ಪ್ರಥಮ ಬಾರಿಗೆ ಆರೋಗ್ಯ ಕಿಟ್ಟುಗಳನ್ನು 2ಲಕ್ಷರೂ ಗಳಂತೆ ಕೊಟ್ಟು ತಂದಿದ್ದೇನೆ ಎಂದು ಹೇಳಿದರು.


ಆ ಕಿಟ್ಟು ಗಳು ಈ ರೀತಿ ಇವೆ
ಮಾಸ್ಕ್ ,ತರ್ಮಲ್ ಸ್ಕ್ಯಾನಿಂಗ್, ಗ್ಲಾಸ್, ಆಕ್ಸಿಜನ್ ಸ್ಕ್ಯಾನಿಂಗ್,ಪಿಪಿಟಿ ಕಿಟ್ಟ್ ಇನ್ನು ಮುಂತಾದವೆಲ್ಲವೂ ಒಳಗೊಂಡಂತೆ 94 ಕಿಟ್ಟುಗಳು ತಂದಿದ್ದೇವೆ ಆ ಕೊರೋನಾ ವಾರಿಯರ್ಸ್ ಗಳಿಗೆ ಎರಡು ಲಕ್ಷದ ಇನ್ಸುರೆನ್ಸ್ ಮಾಡಿಸಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾದವರು :- ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು, ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸಣ್ಣಕ್ಕಿ ಬಸನಗೌಡ್ರು, ಹೆಚ್.ಎ ಗದ್ದಿಗೇಶಣ್ಣ,ಹೆಚ್.ಎ ಉಮಾಪತಿ, ಡಿ.ಜಿ ವಿಶ್ವನಾಥ್ zp ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಸಹ ಭಾಗಿಯಾಗಿದ್ದರು

Leave a Reply

Your email address will not be published. Required fields are marked *