ಹೊನ್ನಾಳಿ ತಾಲ್ಲೂಕು ನದಾಫ್ /ಪಿಂಜಾರ್ ಸಂಘದ ವತಿಯಿಂದ ರಾಜ್ಯ ಸರ್ಕಾರಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ನಮ್ಮ ಪಿಂಚಾರ್ ನದಾಫ್ ಜಾತಿಯು ರಾಜ್ಯ ವ್ಯಾಪ್ತಿಯಲ್ಲಿ 40 ಲಕ್ಷದಿಂದ ಜಾತಿಯ ಸಂಖ್ಯೆ ಇದೆ. ನಮ್ಮ ಸಮುದಾಯದ ಉಳಿವು & ಬೆಳವಣಿಗೆಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ತುಂಬಾ ಹಿಂದುಳಿದವರಾಗಿದ್ದು, ನಮ್ಮ ಸಮುದಾಯದ ಪಿಂಜಾರ ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲೇಬೇಕೆಂದು ಈ ಮೂಲಕ ತಮಗೆ ಒತ್ತಾಯ ಮಾಡುತ್ತಾ ಮನವಿ ಮಾಡುತ್ತೇವೆ. ಪ್ರಾದೇಶಿಕ ಭಾಷೆ ಕನ್ನಡದಲ್ಲಿ ವ್ಯವಹರಿಸುತ್ತಾ ಹಿಂದೂ ಮುಸ್ಲಿಂ ಎರಡು ಹಬ್ಬ ಹರಿದಿನಗಳ ಆಚರಿಸುತ್ತಾ ಕರ್ನಾಟಕದ ಕನ್ನಡಿಗಾರಾಗಿ ಜೀವನ ಮಾಡುತ್ತಾ ಇದ್ದೇವೆ. ನಮ್ಮ ರಾಜ್ಯ ಘಟಕದಿಂದ ಹತ್ತು ವರ್ಷದಿಂದ ಹೋರಾಟ ಮಾಡುತ್ತಾ ನಿಗಮ ಮಂಡಳಿಗೆ ಒತ್ತಾಯಿಸಿದ್ದಾರೆ. ತಾವು ಬಡವರ ಹಿಂದುಳಿದವರ ಆಶಾ ಕಿರಣ ಪಿಂಜಾರ/ನದಾಫ್ ಅಭಿವೃದ್ಧಿ ನಿಗಮ ಸ್ಥಾಪಿಸಬೇಕಾಗಿ ಈ ಮೂಲಕ
ಒತ್ತಾಯಿಸುತ್ತೇವೆ.
ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ.
2010 ರಲ್ಲಿ ಸಮುದಾಯದ ವಾಸ್ತವ ಸ್ಥಿತಿಯನ್ನು ಹಿಂದುಳಿದ ವರ್ಗಗಳ ಆಯೋಗವು ಡಾ. ಸಿ.ಎಸ್.ದ್ವಾರಕನಾಥ ಸಲ್ಲಿಸಿದ ವರದಿಯಲ್ಲಿ ಪಿಂಜಾರ್/ ನದಾಫ್ ಸಮುದಾಯದ ಉಳಿವು & ಬೆಳವಣಿಗೆಗೆ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯ ಎಂದು ಸ್ಪಷ್ಟವಾಗಿ ಹೇಳಿದೆ,
ಈ ಸಮುದಾಯ ತುಂಬಾ ಸಂಕಷ್ಟದಲ್ಲಿದೆ. ಕೂಡಲೇ ಸರ್ಕಾರವು ಪಿಂಜಾರ್ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ನಮ್ಮ ಸಮುದಾಯವನ್ನು ರಕ್ಷಣೆ ಮಾಡಬೇಕು ಎಂದು ಕೆ. ಹೊನ್ನೂರ್ ಸಾಬ್ ರವರು ಉಪ ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು. .
ಈ ಕಾರ್ಯಕ್ರಮದಲ್ಲಿ:- ಅಧ್ಯಕ್ಷರಾದ ಕೆ ಹೊನ್ನೂರ್ ಸಾಬ್, ಪ್ರಧಾನ ಕಾರ್ಯದರ್ಶಿ ದಾದಾಪೀರ್ ಸಾಬ್ ಹೆಚ್. ಹೆಚ್ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.