ದಾವಣಗೆರೆ ನ.20
2020-21ನೇ ಸಾಲಿನ ಕೇಂದ್ರ ಪುರಸ್ಕøತ ಪ್ರಧಾನಮಂತ್ರಿ
ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ
ಕಾರ್ಯಕ್ರಮದಡಿ ತೋಟಗಾರಿಕೆ ಬೆಳಿಗಳಿಗೆ ನೀರಿನ ಮಿತ
ಬಳಕೆಗಾಗಿ ಹನಿ ನೀರಾವರಿ ಅಳವಡಿಸಲು ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ
ಪರಿಶಿಷ್ಟ ಜಾತಿ ವರ್ಗದ ರೈತಬಾಂಧವರಿಗೆ ರೂ.4.29 ಕೋಟಿ
ಮತ್ತು ಪರಿಶಿಷ್ಟ ಪಂಗಡದ ರೈತಬಾಂಧವರಿಗೆ ರೂ.5.49
ಕೋಟಿ ಸಹಾಯಧನ ಲಭ್ಯವಿದ್ದು, ಈ ವರ್ಗದ ಆಸಕ್ತ
ರೈತರು ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ
ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ರೈತಬಾಂಧವರು ಸಂಬಂಧಿಸಿದ
ಹೋಬಳಿಯ ರೈತಸಂಪರ್ಕ ಕೇಂದ್ರದ ಸಹಾಯಕ
ತೋಟಗಾರಿಕೆ ಅಧಿಕಾರಿ ಅಥವಾ ತಾಲ್ಲೂಕಿನ ಹಿರಿಯ ಸಹಾಯಕ
ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದೆಂದು ಜಿ.ಪಂ
ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.