ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ದಿ ನ 21 ಯರಗನಾಳ್ ಗ್ರಾಮದ ಶಾಲಾ ಆವರಣದಲ್ಲಿ ಇಂದು ಮಹಾನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಧಾರವಾಹಿಯ ಪ್ಲೆಕ್ಸ್ ಅನಾವರಣ ಮತ್ತು ಪ್ರಜಾ ಪರಿವರ್ತನಾ ವೇದಿಕೆ ,ಗ್ರಾಮ ಘಟಕ ಸಮಾರಂಭದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರು ರವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಮೂಲಕ ಚಾಲನೆಯನ್ನು ಕೊಟ್ಟರು.


ನಂತರ ಮಾತನಾಡಿದ ಡಿ.ಜಿ ಶಾಂತನಗೌಡ್ರು ರವರು ಮಹಾನಾಯಕ ಧಾರಾವಾಹಿ ಜೀ ಕನ್ನಡದ ಮುಖ್ಯಸ್ಥರಾದ ರಾಘವೇಂದ್ರ ಹೊಣಸೂರ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತಾ, ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿ ಅಂಬೇಡ್ಕರ್ ರವರ ಭಾವಚಿತ್ರದ ಫ್ಲೆಕ್ಸ್ ಗಳನ್ನು ಹಾಕಿ ,ಇವರು ಭಾರತ ದೇಶದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ವಿಶ್ವಮಾನವ ದೇವತಾ ಪುರುಷ ಎಂದು ಸಂಬೋಧನೆ ಯನ್ನು ಮಾಡಿದರು. ಬಿ ಆರ್ ಅಂಬೇಡ್ಕರ್ ಅವರು ದಲಿತ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಅವರು ಈ ದೇಶದ ಸರ್ವ ಜಾತಿಗೂ ಸೇರಿದಂತಹ ಮಹಾನಾಯಕ.

ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯಿಂದ ದಲಿತರಿಗೆ ಕ್ಷೌರ ಮಾಡಲಾಗುವುದು ಎಂದರೆ ನಾನು ಅದನ್ನು ಕಟುವಾಗಿ ವಿರೋಧಿಸುತ್ತೇನೆ. ಯಾಕೆ ಈ ಮಾತನ್ನು ಡಿ.ಜಿ ಶಾಂತನಗೌಡ್ರು ಹೇಳಿದರೆಂದರೆ ದಲಿತರಿಗೆ ಈಗಲೂ ಕ್ಷೌರಿಕರು ಕ್ಷೌರ ಮಾಡುವುದನ್ನು ಬಹಿಷ್ಕಾರ ಮಾಡುತ್ತಿದ್ದಾರೆ ಎಂದು ಕೇಳುಪಟ್ಟಿದೇನೆ ಈ ಹಿನ್ನೆಲೆಯಲ್ಲಿ ಅವರಿಗೆ ಚಾಟಿಯನ್ನು ಬೀಸಬೇಕೆಂದು ಹೇಳಿದರು.

ಅಪ್ಪರ್ ತುಂಗಾ ಯೋಜನೆಗಳನ್ನು ನಮ್ಮಂತಹ ಅನುಕೂಲಸ್ಥ ರಿಗೆ ಲಾಭವಾಗಿದೆ ವಿನಹಃ ನಿಮ್ಮಂತಹ ಹಿಂದುಳಿದವರ್ಗದವರಿಗೆ ಇಂತಹ ಯೋಜನೆಗಳು ಸಿಕ್ಕರೆ ಆರ್ಥಿಕವಾಗಿ ಮತ್ತು ಪ್ರಬಲವಾಗಿ ಬೆಳೆಯಲು ಸಾಧ್ಯ ಎಂದು ಜೈ ಭೀಮ್ ಜೈ ಅಂಬೇಡ್ಕರ್ ಎಂದು ಘೋಷಣೆ ಕೂಗುತ್ತ ಮಾತನ್ನು ಮುಗಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾದವರು:- ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು ಹೊನ್ನಾಳಿ, ಎ.ಡಿ ಈಶ್ವರಪ್ಪ , ಎ.ಕೆ ರಂಗಪ್ಪ, ಪಿ ರುದ್ರೇಗೌಡ ಗ್ರಾಮ ಮುಖಂಡರು, ವಿರೇಶಪ್ಪ ಹೆಚ್, ಮಹೇಶಪ್ಪ ಹೆಚ್, ಎಂ.ಆರ್ ಸಿದ್ದೇಶ್, ಪಿ.ಜಿ ಸಿದ್ದನಗೌಡ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *