ದಾವಣಗೆರೆ ನ.21
ಪ್ರತಿವರ್ಷ ಶಾಲೆಗಳಲ್ಲಿ ಪ್ರತಿಭಾ ಕಾರಂಜಿಯಂತಹ
ಕಾರ್ಯಕ್ರಮಗಳು ನಡೆಯುತ್ತಿದ್ದು ಮಕ್ಕಳ
ಪ್ರತಿಭೆ ಅನಾವರಣಗೊಳ್ಳಲು ವೇದಿಕೆ ಸಿಗುತ್ತಿತ್ತು. ಈ ವರ್ಷ
ಕೊರೋನ ಪಿಡುಗಿನಿಂದ ಮಕ್ಕಳು ತಮ್ಮ ಪ್ರತಿಭೆ
ವ್ಯಕ್ತಪಡಿಸಲು ಅವಕಾಶವಿಲ್ಲದಂತಾಗಿತ್ತು. ಆದರೆ ಕನ್ನಡ
ಮತ್ತು ಸಂಸ್ಕøತಿ ಇಲಾಖೆ ‘ಚಿಗುರು’ ಕಾರ್ಯಕ್ರಮ
ಏರ್ಪಡಿಸುವ ಮೂಲಕ ಮಕ್ಕಳಿಗೆ ವೇದಿಕೆ ಸಿಕ್ಕಂತಾಗಿದೆ ಎಂದು
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದೀಪ ಜಗದೀಶ್ ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕುವಂಪು
ಕನ್ನಡ ಭವನದಲ್ಲಿಂದು ಆಯೋಜಿಸಲಾಗಿದ್ದ ‘ಚಿಗುರು’ ಬಾಲ
ಪ್ರತಿಭೆಗಳ ಸಾಂಸ್ಕøತಿಕ ಕಾರ್ಯಕ್ರಮ ಉಧ್ಘಾಟಿಸಿ
ಮಾತನಾಡಿದ ಅವರು ಪ್ರತಿ ಮಕ್ಕಳಲ್ಲೂ ವಿಶೇಷತೆ
ಇರುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅಂತಹ
ಪ್ರತಿಭೆಗಳನ್ನ ಬಾಲ್ಯದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಿದರೆ
ಮುಂದೆ ಅಂತಹ ಮಕ್ಕಳು ಸಮಾಜದ ಸ್ವತ್ತಾಗುತ್ತವೆ.
ಅದಕ್ಕಾಗಿ ಇಂತಹ ವೇದಿಕೆಗಳು ಬೇಕು. ಇಂತಹ
ಕಾರ್ಯಕ್ರಮಗಳು ನಮ್ಮ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು
ಆಗಲಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಟಿವಿ ವಾಹಿನಿಗಳಲ್ಲಿ
ಬರುವ ರಿಯಾಲಿಟಿ ಶೋಗಳಲ್ಲಿ ಅದ್ಬುತ ಪ್ರತಿಭೆಗಳು
ಅನಾವರಣಗೊಳ್ಳುತ್ತಿವೆ. ನಮ್ಮ ಹಳ್ಳಿಗಾಡಿನ ಮಕ್ಕಳಿಗೂ
ಚಿಗುರು ಅಂತಹ ವೇದಿಕೆಗಳು ಉತ್ತಮ ಅವಕಾಶ ದೊರಕಿಸಿ
ಕೊಡಲಿ, ಅದರೊಂದಿಗೆ ನಮ್ಮ ಜನಪದ ಕಲಾಪ್ರಕಾರಗಳು
ಉಳಿಯಲಿ ಎಂದರು
ಅತಿಥಿಗಳಾದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.
ಮಂಜುನಾಥ ಕುರ್ಕಿ ಮಾತನಾಡಿ, ನಮ್ಮ ಸಾಂಸ್ಕøತಿಕ ಸಂಪತ್ತು
ಜನಪದ ಕಲೆಗಳಲ್ಲಿದೆ. ಸಾಮಾಜಿಕ ಕಳಕಳಿಯನ್ನು ಇಂದಿನ
ಮಕ್ಕಳಲ್ಲಿ ಬಿತ್ತಬೇಕಾಗಿದೆ. ಮೊನ್ನೆ ನಡೆದ
ಘಟನೆಯೊಂದರಲ್ಲಿ ಪುಟ್ಟ ಮಕ್ಕಳಿಬ್ಬರು ಓರ್ವ ಮಹಿಳೆಯ
ಪ್ರಾಣ ಉಳಿಸಿದುದೇ ಮಕ್ಕಳು ಜವಾಬ್ದಾರಿ ಪ್ರಜೆಗಳಾಗಿದ್ದಾರೆ
ಎಂದು ಗುರುತಿಸಬಹುದು. ಆ ಇಬ್ಬರು ಸಾಹಸಿ ಮಕ್ಕಳನ್ನು
ಸಾಹಿತ್ಯ ಪರಿಷತ್ ಇಂದು ಗೌರವಿಸುತ್ತಿದೆ ಮಕ್ಕಳಲ್ಲಿ ಸದ್ಗುಣದ
ಬೀಜ ಬಿತ್ತಿದರೆ ಮುಂದೆ ಅವರು ಸಮಾಜದ ಆಸ್ತಿ ಆಗುತ್ತಾರೆ
ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಸ್.ಎ.
ರವೀಂದ್ರನಾಥ್ ಮಾತನಾಡಿ ಚಿಗುರು ಎಂದರೆ ಪ್ರತಿಭೆ
ಗುರುತಿಸುವುದು. ದಾವಣಗೆರೆ ಹೆಸರಾಂತ ನಾಟಕಕಾರರು,
ಕಲಾವಿದರ ತವರೂರು. ಇಂತಹ ಕಾರ್ಯಕ್ರಮಗಳನ್ನು
ಒಂದು ದಿನ ಮಾಡಿದರೆ ಸಾಲದು ಕನಿಷ್ಟ ಮೂರು ದಿಗಳ ಕಾಲ
ಇಂತಹ ಕಾರ್ಯಕ್ರಮ ಮಾಡಿದರೆ ಎಲ್ಲರಿಗೂ ಅವಕಾಶ ಸಿಗಲಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಾಟಕ ಅಕಾಡೆಮಿ ಹೆಚ್ಚು
ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ
ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರನ್ನು
ಆತ್ಮಹತ್ಯೆಯಿಂದ ರಕ್ಷಿಸಿದ ಪುಟಾಣಿಗಳಾದ ಸುಶಾಂತ್ ರೆಡ್ಡಿ
ಹಾಗೂ ಪ್ರಣೀತ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು
ಮಕ್ಕಳು ವಾದ್ಯ ಸಂಗೀತ, ಜನಪದ ಗೀತೆಗಳು, ಸುಗಮ
ಸಂಗೀತ, ಶಾಸ್ತ್ರೀಯ ನೃತ್ಯ, ಯಕ್ಷಗಾನ ಮೂಡಲಪಾಯ,
ಏಕಪಾತ್ರಾಭಿನಯ ಕಾರ್ಯಕ್ರಮ ನಡೆಸಿಕೊಟ್ಟರು
ವೇದಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ
ರವೀಂದ್ರ ಅರಳಗುಪ್ಪಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
ಕಾರ್ಯದರ್ಶಿ ದಿಳ್ಯಪ್ಪ ಇದ್ದರು.