ದಾವಣಗೆರೆ ನ.21
2020-21ನೇ ಸಾಲಿನಲ್ಲಿ ಕೋವಿಡ್-19 ಲಾಕ್‍ಡೌನ್ ಸಮಸ್ಯೆಯಿಂದಾಗಿ
ಸಂಕಷ್ಟಕ್ಕೆ ಒಳಗಾಗಿದ್ದ ಮುಸುಕಿನಜೋಳ ಬೆಳೆದ
ಜಿಲ್ಲೆಯ ರೈತರಿಗೆ ಸರ್ಕಾರವು ಆರ್ಥಿಕ ನೆರವು ಘೋಷಿಸಿದ್ದು
ಮುಸುಕಿನಜೋಳ ಬೆಳೆದಿದ್ದ ಪ್ರತಿ ರೈತರಿಗೆ ರೂ. 5000/-
ಗಳನ್ನು ಸಂಬಂಧಿಸಿದ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ.
ಆದರೂ ಸಹ ಬೆಳೆ ಸಮೀಕ್ಷೆಯಲ್ಲಿ ಬೆಳೆ ನಮೂದಾಗಿ
ಖಾತೆಗಳಿಗೆ ಹಣ ಜಮೆಯಾಗದ ರೈತರ ಅನುಕೂಲಕ್ಕಾಗಿ ಜಂಟಿ
ಕೃಷಿ ನಿರ್ದೇಶಕರು, ದಾವಣಗೆರೆ ಕಚೇರಿಯಲ್ಲಿ
ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು, ರೈತರು
ಮೊಬೈಲ್ ಸಂಖ್ಯೆ : 8277928938 ಇದಕ್ಕೆ ಕರೆ ಮಾಡಿ
ವಿವರಗಳನ್ನು ಪಡೆಯಬಹುದೆಂದು ಕೃಷಿ ಇಲಾಖೆ ಪ್ರಕಟಣೆ
ತಿಳಿಸಿದೆ.

Leave a Reply

Your email address will not be published. Required fields are marked *