ದಾವಣಗೆರೆ ನ.23
   ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮುಸ್ಲಿಂ
ಮಹಿಳಾ ಒಕ್ಕೂಟ ನೆರಳು ಬೀಡಿ ಕಾರ್ಮಿಕರ ಯೂನಿಯನ್  ದಾವಣಗೆರೆ

ಇವರ ಸಂಯುಕ್ತಾಶ್ರಯದಲ್ಲಿ ನ.24 ರಂದು ಬೆಳಿಗ್ಗೆ 11.30ಕ್ಕೆ
ದುರ್ಗಾಂಬಿಕಾ ಸಂಯುಕ್ತ ಪ್ರೌಢಶಾಲೆ, ಹೊಂಡದ ರಸ್ತೆ,
ದಾವಣಗೆರೆ ಇಲ್ಲಿ  ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಮಹಿಳಾ
ದಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
 ಈ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ
ಸಾಬಪ್ಪ ಉದ್ಘಾಟಿಸುವರು. ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಿಯಾಜ್ ಖಾನ್ ಅಧ್ಯಕ್ಷತೆ ವಹಿಸುವರು.
   ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷರಾದ ಮಂಜುನಾಥ
ಎನ್.ಟಿ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ
ಅರುಣಕುಮಾರ್ ಎಲ್.ಹೆಚ್.ವಕೀಲರಾದ ಆಂಜನೇಯ ಎನ್.ಎಂ, ನೆರಳು
ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷರಾದ ಜಬೀನಖಾನಂ,
ನಿರ್ದೇಶಕರಾದ ನೂರಫಾತೀಮಾ, ಕಾರ್ಯದರ್ಶಿ ಕರಿಬಸಪ್ಪ.ಎಂ, ಸಿಡಿಪಿಓ
ಧರಣಿ ಕುಮಾರ್.ಎಂ.ಆರ್ ಪಾಲ್ಗೊಳ್ಳುವರು ಹಾಗೂ ಸಂಪನ್ಮೂಲ
ವ್ಯಕ್ತಿಗಳಾಗಿ ವಕೀಲದ ಭಾಗ್ಯಮ್ಮ ಪಾಲ್ಗೊಳ್ಳುವರೆಂದು ಪ್ರಕಟಣೆ
ತಿಳಿಸಿದೆ.

Leave a Reply

Your email address will not be published. Required fields are marked *