ದಾವಣಗೆರೆ ನ.25
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಗ್ರೀನ್
ನೇಷನ್, ಪರಿಸರ ಸಂರಕ್ಷಣಾ ವೇದಿಕೆ, ದಾವಣಗೆರೆ ಇವರ
ಸಂಯುಕ್ತಾಶ್ರಯದಲ್ಲಿ ನ.25 ರಂದು ಮಧ್ಯಾಹ್ನ 12 ಗಂಟೆಗೆ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಎ.ಡಿ.ಆರ್ ಕಟ್ಟಡ ದಾವಣಗೆರೆ ಇಲ್ಲಿ
ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಪರಿಸರ ರಕ್ಷಣಾ ದಿನ
ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ
ಸಾಬಪ್ಪ ಉದ್ಘಾಟಿಸುವರು. ವಕೀಲರ ಸಂಘದ ಅಧ್ಯಕ್ಷರಾದ
ಮಂಜುನಾಥ ಎನ್.ಟಿ, ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಗ್ರೀನ್ ನೇಷನ್ ಅಧ್ಯಕ್ಷರಾದ ತಾರೀಕ್ ನಕಾಶ್,
ಪರಿಸರ ಸಂರಕ್ಷಣಾ ವೇದಿಕೆಯ ಉಪಾಧ್ಯಕ್ಷರಾದ
ಆರ್.ಬಿ.ಹನುಮಂತಪ್ಪ, ವಕೀಲರಾದ ಅನೀಸ್ ಪಾಶ, ಹಿರಿಯ ವಕೀಲರಾದ
ಆಂಜನೇಯ ಗುರೂಜಿ ಪಾಲ್ಗೊಳ್ಳುವರು ಹಾಗೂ ರಾಜ್ಯ ಕಾನೂನು
ಸೇವಾ ಪ್ರಾಧಿಕಾರದ ಸದಸ್ಯರು ಹಾಗೂ ವಕೀಲರಾದ ಅರುಣ್
ಕುಮಾರ್ ಎಲ್.ಹೆಚ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರೆಂದು
ಪ್ರಕಟಣೆ ತಿಳಿಸಿದೆ.