ದಾವಣಗೆರೆ ನ.24
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ
ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್ ಮತ್ತು ಕೆಎಎಸ್
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 60 ದಿನಗಳ ಆನ್ಲೈನ್ ತರಬೇತಿ
ಆಯೋಜಿಸಲಾಗಿದೆ.
ನ.27 ರ ಬೆಳಿಗ್ಗೆ 11 ಗಂಟೆಗೆ ಐಎಎಸ್ ಅಧಿಕಾರಿ ಕಾರ್ಮಿಕ ಇಲಾಖೆ
ಆಯುಕ್ತರಾಗಿರುವ ಅಕ್ರಂಪಾಷ ಬೆಂಗಳೂರಿನಿಂದಲೇ ತರಬೇತಿ
ಉದ್ಘಾಟಿಸಿ ಸ್ಪರ್ಧಾತ್ಮಕ ಪರೀಕ್ಷಾ ಸಿದ್ದತೆ ಕುರಿತು ತಿಳಿಸುವರು.
ಐಪಿಎಸ್ ಅಧಿಕಾರಿಯಾಗಿರುವ ಮೈಸೂರು ನಗರ ಪೊಲೀಸ್
ಉಪಾಯುಕ್ತರಾದ ಡಾ.ಎ.ಎನ್,ಪ್ರಕಾಶ್ಗೌಡ ಆನ್ಲೈನ್ನಲ್ಲಿ ಶುಭ
ಹಾರೈಸಿ ಪರೀಕ್ಷಾ ಅಧ್ಯಯನ ಕ್ರಮದ ಬಗ್ಗೆ ಮಾಹಿತಿ ನೀಡುವರು.
ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯದ ಕುಲಪತಿ
ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸುವರು. ಕುಲಸಚಿವ
ಪ್ರೊ.ಲಿಂಗರಾಜಗಾಂಧಿ ಉಪಸ್ಥಿತರಿರುವರು ಎಂದು ಕರಾಮುವಿವಿ
ಸ್ಪರ್ದಾತ್ಮಕ ಪರೀಕ್ಷಾ ತರಬೆತಿ ಕೇಂದ್ರದ ಸಂಯೋಜನಾಧಿಕಾರಿ
ಜೈನಹಳ್ಳಿ ಸತ್ಯನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.