ಸಾಸ್ವೆಹಳ್ಳಿ: ಸಮಾಜ ಸೇವೆಯ ಮೂಲಕ ಭಕ್ತರ ಬಂಧುವಾಗಿ ತ್ರಿವಿಧ ದಾಸೋಹದ ಮೂಲಕ ಖ್ಯಾತರಾಗಿದ್ದ ಲಿಂ. ಹಾಲಸ್ವಾಮೀಜಿಯವರ ಹಲವು ಜನಪರ ಕೆಲಸಗಳು ಈ ಕ್ಷೇತ್ರವನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು.

ಸಮೀಪದ ರಾಂಪುರ ಬೃಹನ್ಮಠದಲ್ಲಿ ಲಿಂಗೈಕ್ಯ ಹಾಲಸ್ವಾಮೀಜಿಯವರ ಕತೃಗದ್ದುಗೆಯ ಶಿಲಾನ್ಯಾಸ ಹಾಗೂ ಹಾಲಸ್ವಾಮಿ ಗೋಶಾಲೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀಗಳ ಮುಳ್ಳುಗದ್ದುಗೆಯ ಪವಾಡವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಶ್ರೀಗಳು ನಮ್ಮನ್ನು ಅಗಲಿದ್ದಾರೆ. ಅವರು ಬಿಟ್ಟು ಹೋಗಿರುವ ಆದರ್ಶಗನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆಯಬೇಕು ಎಂದರು.

ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಮಾತನಾಡಿ ಶ್ರೀಗಳು ರಾಜ್ಯಾದ್ಯಂತ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಶ್ರೀಗಳು ಪೂಜೆ-ಪುನಸ್ಕಾರ ಮಾಡಿಸಿ ಸಾವಿರಾರು ಜನ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತದನಂತರ ಆ ದಂಪತಿಗಳ ಮಕ್ಕಳಿಗೆ ಹಾಲಸ್ವಾಮಿ, ಹಾಲಪ್ಪ, ಹಾಲಮ್ಮ, ಎಂಬ ಹೆಸರನ್ನು ಇಟ್ಟಿರುವುದು ಜಗಜಾಹೀರಾತು ಆಗಿದೆ ಶ್ರೀಗಳನ್ನು ಕಳೆದುಕೊಂಡಿರುವುದು ನನಗೆ ವೈಯಕ್ತಿಕವಾಗಿ ತುಂಬಾ ನಷ್ಟವಾಗಿದೆ ನಾನು ಈ ಹಿಂದೆ ನಡೆದ ಚುನಾವಣೆಯಲ್ಲಿ ಸೋತಾಗ ನನ್ನನ್ನು ಕರೆದು ಶ್ರೀಗಳು ಚುನಾವಣೆಯಲ್ಲಿ ಸೋತಿದ್ದಿರ ಎಂದು ಮನಸ್ಸಿಗೆ ಹಚ್ಚಿಕೊಳ್ಳದೆ ಬೇಜಾರು ಆಗಬೇಡಿ ಮುಂದಿನ ದಿನಗಳಲ್ಲಿ ನಿಮಗೆ ಅವಕಾಶವಾಗುತ್ತದೆ ಎಂದು ಹೇಳಿದರು. ಶ್ರೀಗಳು ಎಲ್ಲರಿಗೂ ಸರ್ವರೋಗಕ್ಕೂ ಆಯುರ್ವೇದ ಔಷಧವನ್ನು ಜನಗಳಿಗೆ ಕೊಡುತ್ತಿದ್ದರು, ಅದನ್ನು ತೆಗೆದುಕೊಂಡ ಜನರ ಆರೋಗ್ಯ ಸುಧಾರಿಸುತ್ತಿತ್ತು. ನಮಗೆ ದುಃಖದ ಸಂಗತಿ ಅಂದರೆ ಅವರಿಗೆ ಶುಗರ್ ಮತ್ತು ಬಿಪಿ ಹೆಚ್ಚಾಗಿ ಕೊರೋನಾ ರೋಗದಿಂದ ಆಸ್ಪತ್ರೆಯಲ್ಲಿ ಒಬ್ಬಂಟಿಗರಾಗಿ ಆಸ್ಪತ್ರೆಯಲ್ಲಿ ನೋವಿನ ಯಾತನೆಯನ್ನು ಅನುಭವಿಸಿದ್ದನ್ನು ನೋಡಿದರೆ ನಮಗೆ ಕಣ್ಣೀರು ಬರುತ್ತದೆ ಎಂದರು. ಈಗಿರುವ ಮಠಾಧೀಶರುಗಳಿಗೆ 3ಕೋಟಿ ಆ ಮಠಕ್ಕೆ ಹಣ ಕಡಿಮೆಯಾದರೆ ನೀವು ಹೆದರಬೇಡಿ ಜನಗಳು ಸಹಾಯ ಮಾಡುತ್ತಾರೆ ಎಂದು ಶ್ರೀಗಳಿಗೆ ಧೈರ್ಯ ತುಂಬಿ ನಿಮ್ಮ ಬೆಂಬಲಕ್ಕೆ ನಾವು ಸದಾ ನಿಮ್ಮೊಂದಿಗೆ ಇರುತ್ತದೆ ಎಂದು
ಹೇಳಿದರು.

ಶ್ರೀಗಳ ಮಠದಲ್ಲಿ ಭಕ್ತರು ನೀಡಿದ ಅಧಿಕ ಸಂಖ್ಯೆಯಲ್ಲಿರುವ ಹಸುಕರುಗಳನ್ನು ಭಕ್ತರು ಹರಕೆಯ ರೂಪದಲ್ಲಿ ನೀಡಿದ್ದು, ಅವುಗಳ ಪೋಷಣೆಗೆ ಗೋಶಾಲೆ ನಿರ್ಮಾಣ ಮಾಡುವುದು ಲಿಂಗೈಕ್ಯ ಶ್ರೀಗಳ ಕನಸಾಗಿದ್ದು ಅವರ ಕನಸನ್ನು ನೆರೆವೇರಿಸಲಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಗುರುಗಳ ಭೌತಿಕ ಶರೀರ ಇಲ್ಲದೆ ಇರಬಹುದು, ಅವರು ನೀಡಿದ ಆಶಿರ್ವಚನ ಮಾರ್ಗದರ್ಶನ ನಮಗೆ ಇಂದು ದಾರಿ ದೀಪವಾಗಿದೆ. ಶ್ರೀಗಳು ಮಠಕ್ಕೆ ಮಾತ್ರ ಸೀಮಿತವಾಗಿರದೇ, ಸಮಾಜದ ಸೇವೆಗಳಲ್ಲಿ ಸದಾ ತೊಡಗಿಸಿಕೊಂಡಿದ್ದರು. ಸಮಾಜದ ಕೆಲವು ವ್ಯವಸ್ಥೆಗಳು ಬದಲಾಗಬೇಕು. ಭಾರತ ಕೃಷಿ ಪ್ರಧಾನವಾದ ದೇಶ ರೈತರು ಈ ದೇಶದ ಬೆನ್ನೆಲಬು ರೈತರ ಬೆನ್ನೆಲಬು ಮುರಿಯುವ ಕೆಲಸವಾಗುತ್ತಿದೆ. ರೈತರ ಆತ್ಮಹತ್ಯೆ ನಡೆಯುತ್ತಿದೆ. ಅನ್ನ ನೀಡುವ ರೈತರಿಗೆ ನಮ್ಮನಾಳುವ ಸರ್ಕಾರಗಳು ಬೆಂಬಲ ಬೆಲೆ ನೀಡುವುದರ ಜೊತೆಗೆ ಆರ್ಥಿಕ ನೆರವು ನೀಡುವ ಕೆಲಸವಾಗಬೇಕು ಇದು ಶ್ರೀಗಳ ಆಶಯವಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಶುಭ ಸಂದೇಶ ಕಳುಹಿಸಿದ್ದರು. ಸಂಸದ ಜಿ.ಎಂ ರಾಘವೇಂದ್ರ ಶುಭ ಸಂದೇಶದಲ್ಲಿ ರಾಜ್ಯ ಸರ್ಕಾರವು ರೂ 1 ಕೋಟಿ ಬಿಡುಗಡೆ ಮಾಡಿದೆ ಹಾಗೂ ಮಠದ ಅಭಿವೃದ್ಧಿಗೆ 10 ಲಕ್ಷವನ್ನು ವೈಯಕ್ತಿಕವಾಗಿ ದೇಣಿಗೆ ನಿಡುವುದಾಗಿ ತಿಳಿಸಿದ್ದರು.

ಮಾಯಕೊಂಡ ಶಾಸಕ ಪ್ರೋ.ಲಿಂಗಣ್ಣ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್ ನಾಯ್ಕ್, ಮಾಜಿ ಶಾಸಕ ಡಿ.ಜಿ ಶಾಂತನಗೌಡರು, ಉತ್ತರ ಕರ್ನಾಟಕ ಪ್ರಾಂತ್ಯದ ಪ್ರಚಾರಕ ಮುನಿಯಮ್ಮ ಮಾತನಾಡಿದರು. ಅಧ್ಯಕ್ಷತೆಯನ್ನು ರಾಂಪುರ ಬೃಹನ್ಮಠದ ಸದ್ಗುರು ಶಿವಕುಮಾರ ಹಾಲಸ್ವಾಮಿ ವಹಿಸಿದ್ದರು.

ಜಿ.ಪಂ ಸ್ಥಾಯಿ ಮತ್ತು ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ವೀರಶೇಖರಪ್ಪ, ಮಾಜಿ ಜಿ.ಪಂ ಅಧ್ಯಕ್ಷೆ ಹಾಲಿ ಸದಸ್ಯೆ ಉಮಾ ರಮೇಶ್, ತಾ.ಪಂ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಕೆ.ಎಲ್ ರಂಗನಾಥ್, ತಾ.ಪಂ ಸದಸ್ಯ ಅಬೀದ್ ಆಲಿ ಖಾನ್, ಮಾಜಿ ಜಿ.ಪಂ ಸದಸ್ಯ ಎ.ಆರ್ ಚಂದ್ರಶೇಖರ್, ಶ್ರೀಗಳ ಕತೃಗದ್ದುಗೆ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *