ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ಜೆ.ಎಚ್ ಪಟೇಲ್ ಫೌಂಡೇಶನ್ ವತಿಯಿಂದ ಕರ್ನಾಟಕ ಕಲ್ಯಾಣ ಪಾದಯಾತ್ರೆಯನ್ನು ಸಂಯುಕ್ತ ಜನತಾದಳ ಮತ್ತು ಸರ್ವ ರಾಜಕೀಯ ಪಕ್ಷಗಳ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ಜೆಡಿಯು ರಾಜ್ಯಾಧ್ಯಕ್ಷರಾದ ಶ್ರೀ ಮಹಿಮಾ ಜೆ ಪಟೇಲ್ ರವರು ಸಹಜ ಸಮೃದ್ಧಿ ಕಡೆಗೆ ಜೊತೆಯಾಗಿ ನಡೆಯುವ ಬನ್ನಿ ಪಾದಯಾತ್ರೆಯನ್ನು. ದಿನಾಂಕ ನವೆಂಬರ್ 27ರ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿರುವ ಜೆಎಚ್ ಪಟೇಲ್ ರವರ ಸಮಾಧಿಯಿಂದ ಪ್ರಾರಂಭಗೊಂಡು ಈ ಪಾದಯಾತ್ರೆಗೆ ಜೆ ಹೆಚ್ ಪಟೇಲ್ ರವರ ಅನುಯಾಯಿಗಳು ಮತ್ತು ಮಹಿಮಾ ಪಟೇಲ್ ರವರ ಅಭಿಮಾನಿಗಳು ಪಾದಯಾತ್ರೆಗೆ ಬರುವವರಿಗೆ ಸ್ವಾಗತ. ದಿನಾಂಕ ಡಿಸೆಂಬರ್ 11- 12 -2020ರಂದು ಬಸವಣ್ಣನವರ ಐಕ್ಯಸ್ಥಳ ವಾದ ಕೂಡಲಸಂಗಮದಲ್ಲಿ ಪಾದಯಾತ್ರೆ ಕೊನೆಗೊಳ್ಳುವುದು ಎಂದು ಮಾಜಿ ಶಾಸಕರಾದ ಮಹಿಮಾ ಜೆ ಪಟೇಲ್ ರವರು ಆನ್ಲೈನ್ ಮೂಲಕ ಎಬಿಸಿ ನ್ಯೂಸ್ ಚಾನಲ್ ರವರಿಗೆ ತಿಳಿಸಿದರು. ಜೆಡಿಯು ಪಕ್ಷದ ದ್ಯೇಯೂದ್ದೇಶಗಳು ಈ ಕೆಳಗಿನಂತಿವೆ
(1) ಕೇಂದ್ರೀಕೃತ ರಾಜಕಾರಣದ ಬದಲು ವಿಕೇಂದ್ರೀಕೃತ ಗ್ರಾಮೀಣ ರಾಜಕಾರಣ

2.ಯಶಸ್ಸಿನಿಂದ – ಧೃಢತೆಯ ಕಡೆಗೆ

3) ಬ್ರಹಾತ್ ಕೈಗಾರಿಕಾ ಉದ್ದಿಮೆಗಳ ಕಡೆಯಿಂದ ಗ್ರಾಮೀಣ ಕರಕುಶಲ ಕೈಗಾರಿಕೆ ಉದ್ದಿಮೆಗಳ ಕಡೆಗೆ

4.ವಾಣಿಜ್ಯ ಕಡಿತ ಕೃಷಿಗಿಂತ ಸಂಸ್ಕಾರಯುತ ಕೃಷಿಯೆಡೆಗೆ

(5) ಮನುಷ್ಯನ ದುರಾಸೆ ಜೀವನದ ಕಡೆಯಿಂದ ಪರಿಸರ ಪ್ರೇಮಿ ಜೀವನದ ಕಡೆ

  1. ಸ್ಪರ್ಧಾತ್ಮಕತೆ (ಪೈಪೋಟಿ)ಗಿಂತ ಸಹಕಾರದ ಕಡೆಗೆ

7.ಗೊಂದಲದ ಗೂಡಾದ ಅಧುನಿಕತೆಗಿಂತ ಸರಳಿ ಕೃತ ಸಹಕಾರದ ಜೀವನ

8.ಕಗ್ಗಂಟಿನ ಜೀವನದಿಂದ ಸರಳೀಕೃತ ಜೀವನದಕಡೆಗೆ

9.ಗಣಕೀಕೃತ ಭಾರತಕ್ಕಿಂತ ಗ್ರಾಮೀಣ ಭಾರತ ಚೆನ್ನ

10.ಯಾಂತ್ರೀಕೃತ ಕೃಷಿಗಿಂತ ವಿಷಯಾಧಾರಿತ ಜೀವನಕ್ರಮದ ಕೃಷಿ ಪದ್ದತಿ ಕಡೆಗೆ

11.ಆಡಂಬರದ ದೊಡ್ಡತನಕ್ಕಿಂತ ಚಿಕ್ಕದಾದರು, ಚೊಕ್ಕದಾದ ನೋಟ ಚಂದ

12.ಸಂವೇದನಾ ರಹಿತ ವಿಜ್ಞಾನ ನಕ್ಕಿಂತ, ಸಂವೇದನಾ ಶೀಲ ವಿಜ್ಞಾನ ಮುಖ್ಯ

13.ಒದಕೆಗಿಂತ ಒಗ್ಗಟ್ಟಿನ ಅವಶ್ಯಕತೆ ಹೆಚ್ಚು ಇದೆ

14.ಒಂಟಿ ಕುಟುಂಬದಿಂದ ಒಗ್ಗಟ್ಟು ಕುಟುಂಬದ ಕಡೆ

15.ವೈಯಕ್ತಿಕ ನಿರ್ಧಾರ ಅಥವಾ ನಿಲುವಿಗಿಂತ ಒಮ್ಮತದ ನಿರ್ಧಾರ ಅಥವಾ ಅಭಿಪ್ರಾಯ ಮುಖ್ಯ

16.ಒಣ ವಿಧ್ಯೆಯ ಕಡೆಯಿಂದ ಜ್ಞಾನದ ಕಡೆಗೆ

17.ಬಾಹ್ಯ ಶೋಧನೆಯಿಂದ ಅಂತರದ ಪರಿಶೋಧನೆ ಕಡೆಗೆ

18.ರಾಕ್ಷನೀ ಆರ್ಥಿಕತೆ ಕಡೆಯಿಂದ ಪಾವಿತ್ರ್ಯ ಆರ್ಥೀಕತೆಯ ಕಡೆಗೆ

19.ಯಾಂತ್ರಿಕತೆಯ ಕಡೆಯಿಂದ ಕರಕುಶಲತೆಯ ಕಡೆಗೆ

20.ನಿರ್ಗಮನದಿಂದ ಬದುಕಿನೆಡೆಗೆ ಪಯಣ

21.ಇಡೀ ಭೂ ಮಂಡಲವೇ ನಮ್ಮ ಕುಟುಂಬ ಎಂಬ ತತ್ವದ ಕಡೆ

22.ತಾರ್ಕಿಕತೆಯಿಂದ ಆಧ್ಯಾತ್ಮಿಕತೆ ಕಡೆಗೆ.

Leave a Reply

Your email address will not be published. Required fields are marked *