ಆಡಳಿತ ಯಂತ್ರ ಮನೆ ಬಾಗಿಲಿಗೆ ಬರಲಿದೆ – ಭೈರತಿ ಬಸವರಾಜ
ದಾವಣಗೆರೆ ನ.25
‘ಮನೆ ಬಾಗಿಲಿಗೆ ಮಹಾನಗರಪಾಲಿಕೆ’ ಎಂಬ ವಿನೂತನ
ಕಾರ್ಯಕ್ರಮದಿಂದ ಆಡಳಿತ ಯಂತ್ರವೇ ತಮ್ಮ ಮನೆ ಬಾಗಿಲಿಗೆ
ಬಂದು ಸೇವೆ ನೀಡಲಿರುವುದು ಸಂತಸದಾಯಕ ವಿಚಾರ ಎಂದು ಜಿಲ್ಲಾ
ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಹೇಳಿದರು.
ದಾವಣಗೆರೆ ಮಹಾನಗರಪಾಲಿಕೆ ವತಿಯಿಂದ ಗಾಂಧಿನಗರದ
ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಇಂದು ಆಯೋಜಿಸಿದ್ದ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೂಲಭೂತ ಸೌಕರ್ಯ
ಒದಗಿಸುವ ದಿಸೆಯಲ್ಲಿ ದಾವಣಗೆರೆ ಮಹಾನಗರಪಾಲಿಕೆ
ಮುಂಚೂಣಿಯಲ್ಲಿದ್ದು ಇದೇ ರಾಷ್ಟ್ರದಲ್ಲಿಯೇ ಇದು ಮೊದಲ
ಕಾರ್ಯಕ್ರಮ ಎಂದರೂ ತಪ್ಪಾಗಲಾರದು. ಆ ಮೂಲಕ ಜನರು
ಪಾಲಿಕೆ ಕಛೇರಿಗೆ ಅಲೆಯುವುದು ತಪ್ಪುವುದರ ಜೊತೆಗೆ
ಕಾಲಮಿತಿಯೊಳಗೆ ತಮ್ಮ ಕೆಲಸಗಳಾಗಲಿವೆ. ಸಾರ್ವಜನಿಕರು
ಯಾರೇ ಮಧ್ಯವರ್ತಿಗಳನ್ನು ಅವಲಂಬಿಸಬೇಕಿಲ್ಲ. ಜನನ ಮರಣ
ಪ್ರಮಾಣ ಪತ್ರದಿಂದಿಡಿದು ಖಾತಾ ಎಕ್ಸ್‍ಟ್ರಾಕ್ಟ್, ಕಟ್ಟಡ ನವೀಕರಣ,
ಕುಡಿಯುವ ನೀರು ಬೀದಿ ದೀಪದಂತಹ ಸೌಲಭ್ಯಗಳು
ದೊರೆಯುವುದರಿಂದ ದಾವಣಗೆರೆ ಜನತೆ ಸುಖ ಸಂತೋಷ
ನೆಮ್ಮದಿಯಿಂದ ಇರಬಹುದಾಗಿದೆ.
ಈಗಾಗಲೇ ಮಹಾನಗರಪಾಲಿಕೆಗೆ ರಾಜ್ಯ ಸರ್ಕಾರ ರೂ.125 ಕೋಟಿ
ಬಿಡುಗಡೆ ಮಾಡಿದ್ದು ಅದಕ್ಕಾಗಿ ನಾನು ಮಾನ್ಯ
ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ಆಡಳಿತ ಯಂತ್ರ
ಮತ್ತಷ್ಟು ಚುರುಕು ಪಡೆದು ಪ್ರತಿ ವಾರ್ಡ್ ಮಟ್ಟದಲ್ಲಿ ಇಂತಹ
ಕಾರ್ಯಕ್ರಮಗಳಾಗಿ ಎಲ್ಲರಿಗೂ ಸೌಲಭ್ಯಗಳು ಸಿಗಲಿ ಎಂದು
ಆಶಿಸಿದರು.
ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸುವ
ದಿಸೆಯಲ್ಲಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗಿದೆ. ಅವರೂ
ಕೂಡ ಸಮ್ಮತಿಸಿದ್ದು ದಾವಣಗೆರೆ ನಗರವನ್ನು ಸುಸಜ್ಜಿತ
ಜಿಲ್ಲಾಸ್ಪತ್ರೆ ಆಗಲಿದೆ ಎಂದರು.
ಕೊರೊನಾ ಪ್ರಕರಣಗಳು ಇಳಿಗೆ ಕಾಣುತ್ತಿದ್ದು ಸಾವಿನ
ಪ್ರಮಾಣವೂ ತಗ್ಗುತ್ತಿದೆ. ಇದೂ ಕೂಡ ಒಳ್ಳೆಯ ಬೆಳೆವಣಿಗೆ.
ಅದಕ್ಕಾಗಿ ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದೆ. ಹಾಗಾಗಿ ಜಿಲ್ಲೆಯನ್ನು
ಕೊರೊನಾ ಮುಕ್ತ ಮಾಡಲು ತಮ್ಮೆಲ್ಲರ ಸಹಕಾರ ಮ ುಖ್ಯ
ಅಂದರು.
ಸಂಸದರಾದ ಜಿ.ಎಂ.ಸಿದ್ದೇಶ್ವರ ಮಾತನಾಡಿ ಕೊರೊನಾದಿಂದ ಪಾಲಿಕೆ
ಕೆಲಸಗಳಿಗೆ ಹಿನ್ನೆಡೆಯಾಗಿತ್ತು. ಈಗ ಮತ್ತೆ ಕಾಮಗಾರಿಗಳು
ವೇಗ ಪಡೆಯಲಿವೆ. ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ
ಕಾಮಗಾರಿಗಳನ್ನು ಬೇಗ ಬೇಗ ಪೂರ್ಣಗೊಳಿಸಬೇಕು ಹಾಗೂ
ನಗರದಲ್ಲಿ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಬೇಕು. ಆಯಾ ವಾರ್ಡ್‍ನ
ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಗಿಡಗಳ ಆರೈಕೆಯತ್ತ
ಗಮನ ನೀಡಬೇಕೆಂದರು.
ಇಂದು ಎಲ್ಲರೂ ಪಕ್ಷಬೇಧ ಮರೆತು ಕಾರ್ಯ ನಿರ್ವಹಿಸಿದರೆ
ನಗರದ ಅಭಿವೃದ್ದಿ ಸಾಧ್ಯ. ಪಾಲಿಕೆಯಲ್ಲಿ ತಡವಾಗುತ್ತಿದ್ದ ಕಟ್ಟಡ
ಪರವಾನಗಿ, ಖಾತೆ ಬದಲಾವಣೆ ಮುಂತಾದ ಕೆಲಸಗಳು ಬಹಳ ಬೇಗ
ಆಗಲಿವೆ. ಪಾಲಿಕೆ ವಿನೂತನ ಕಾರ್ಯಕ್ರ ಆಯೋಜಿಸಿದ್ದು ಯಶ ಕಾಣಲಿ
ಎಂದರು.
ಮಹಾನಗರಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್ ಮಾತನಾಡಿ,
ಮಹಾತ್ಮಾ ಗಾಂಧಿ ಗ್ರಾಮ ವಿಕಾಸ ಯೋಜನೆಯಡಿ ದಾವಣಗೆರೆ
ಮಹಾನಗರಪಾಲಿಕೆಗೆ ರೂ.125 ಕೋಟಿ ಹಣ ಬಂದಿದ್ದು, ನಗರ ಹೆಚ್ಚು
ಅಭಿವೃದ್ದಿ ಕಾಣಲಿದೆ. ನಗರದಾದ್ಯಂತ 21 ಸಾವಿರ ಬೀದಿ ದೀಪಗಳಿದ್ದು
ಅವುಗಳನ್ನು ಎಲ್.ಇ.ಡಿ ದೀಪಗಳನ್ನಾಗಿ ಪರಿವರ್ತಿಸಲಾಗುತ್ತಿದೆ.
ಇದರಿಂದ 80 ಕ್ಷ ಬರುತ್ತಿದ್ದ ಒಂದು ತಿಂಗಳ ವಿದ್ಯುತ್ ಬಿಲ್‍ನಲ್ಲಿ 50 ಲಕ್ಷ
ಉಳಿತಾಯ ಆಗಲಿದೆ. ಇದರೊಂದಿಗೆ 1 ಲಕ್ಷ ಗಿಡಗಳನ್ನು ನೆಡಲು
ಕಾರ್ಯಕ್ರಮ ರೂಪಿಸಿದ್ದು 1500 ಹಣ್ಣಿನ ಗಿಡ ನೆಡಲಾಗುತ್ತಿದೆ.
ಇದರಿಂದ ಪಕ್ಷಿಗಳಿಗೆ ಯಥೇಚ್ಚ ಆಹಾರ ದೊರೆಯಲಿದೆ. ಜೂನ್
ತಿಂಗಳಲ್ಲಿ 95200 ಗಿಡಗಳನ್ನು ನೆಡಲಾಗುತ್ತಿದ್ದು ಹಸಿರು
ದಾವಣಗೆರೆ ಆಗಲಿದೆ.
ಹೀಗಾಗಿ ದಾವಣಗೆರೆ ಅಭಿವೃದಿಗೆ ಪ್ರತಿ ವಾರ್ಡ್‍ಗೆ ಕನಿಷ್ಟ ರೂ.10
ಕೋಟಿಯಂತೆ ಹಣ ನೀಡಿದರೆ ಸಮಗ್ರವಾಗಿ ಅಭಿವೃದ್ದಿ
ಮಾಡಬಹುದಾಗಿದೆ.. ಹಾಗಾಗಿ ಸರ್ಕಾರಿ ಹೆಚ್ಚು ಅನುದಾನ ನೀಡಬೇಕು
ಎಂದರು.
ಶಾಸಕರಾದ ಎಸ್.ಎ.ರವೀಂದ್ರನಾಥ ಮಾತನಾಡಿ, ಕೇವಲ ಪ್ರಚರಕ್ಕಾಗಿ
ಕಾರ್ಯಕ್ರಮ ಆಗದೇ ಅಭಿವೃದ್ದಿಯ ಕಾರ್ಯಗಳಾಗಬೇಕು,
ಅದಕ್ಕೆ ಸಾರ್ವಜನಿಕರೂ ಸಹಕಾರ ನೀಡಬೇಕೆಂದರು.
ವೇದಿಕೆಯಲ್ಲಿ ಉಪ ಮಹಾಪೌರರಾದ ಸೌಮ್ಯ ನರೇಂದ್ರಕುಮಾರ್,
ದೂಢಾ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಇರೋಧ
ಪಕ್ಷದ ನಾಯಕ ನಾಗರಾಜು, ಗಾಂಧಿನಗರ ಪಾಲಿಕೆ ಸದಸ್ಯ
ಜಿ.ಡಿ.ಪ್ರಕಾಶ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಹೆಚ್ಚುವರಿ ಪೊಲೀಸ್
ವರಿಷ್ಟಾಧಿಕಾರಿ ರಾಜೀವ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ
ಮುದಜ್ಜಿ ಇದ್ದರು.