ದಾವಣಗೆರೆ ನ.26
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿವೃತ್ತ ನೌಕರರು ಜೀವಿತ
ಪ್ರಮಾಣ ಪತ್ರ ಪಡೆಯಲು ಇನ್ನು ಮುಂದೆ ಬ್ಯಾಂಕಿಗೆ
ಅಲೆದಾಡಬೇಕಾಗಿಲ್ಲ. ಅಂಚೆ ಇಲಾಖೆಯು ಪೋಸ್ಟಲ್ ಪೇಮೆಂಟ್ ಬ್ಯಾಂಕ್
ಮೂಲಕ ಅಂಚೆ ಸಿಬ್ಬಂದಿಗಳ ಬಳಿಯಿರುವ ಮೈಕ್ರೊ ಎ.ಟಿ.ಎಂ
ಯಂತ್ರದ ಮೂಲಕವೇ ವಿತರಿಸುತ್ತಾರೆ.
ಇದರಿಂದ ಪಿಂಚಣಿದಾರರು ಬ್ಯಾಂಕ್ ಎದುರು ಕ್ಯೂ ನಿಂತು ಅರ್ಜಿ ಭರ್ತಿ
ಮಾಡಿ ಜೀವಿತ ಪ್ರಮಾಣ ಪತ್ರ ಪಡೆಯಲು ಪಡುತ್ತಿದ್ದ ಕಷ್ಟ
ಕೊನೆಗೊಳ್ಳಲಿದೆ.
ಅಂಚೆ ಇಲಾಖೆಯು ತಮ್ಮ ವಿಶಾಲವಾದ ಜಾಲವ್ಯವಸ್ಥೆ ಮತ್ತು ಎಲ್ಲಾ
ಕಡೆ ತಲುಪುವ ಪೋಸ್ಟ್ಮನ್ಗಳು ಬಯೋಮೆಟ್ರಿಕ್ ಮೂಲಕ
ಹೆಬ್ಬೆಟ್ಟಿನ ಮಾದರಿ ಸಂಗ್ರಹಿಸಿ ಖಾತೆ ಲಿಂಕ್ ಮಾಡುತ್ತಾರೆ. ಲಿಂಕ್ ಆದ
ನಂತರ ಡಿಜಿಟಲ್ ಪ್ರಮಾಣ ಪತ್ರವನ್ನು ಬ್ಯಾಂಕಿಗೆ
ಕಳುಹಿಸಿಕೊಡಲಾಗುತ್ತದೆ. ಈ ಪ್ರಕ್ರಿಯೆಗೆ ರೂ.70 ಶುಲ್ಕ
ವಿಧಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಪ್ರದೇಶದ
ಪೋಸ್ಟ್ಮನ್ಗಳನ್ನು ಸಂಪರ್ಕಿಸಬಹುದೆಂದು ಚಿತ್ರದುರ್ಗ
ವಿಭಾಗದ ಅಂಚೆ ಅಧೀಕ್ಷಕರಾದ ವಿರೂಪಾಕ್ಷಪ್ಪ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.