ದಾವಣಗೆರೆ ನ.30
ಪ್ರಸಕ್ತ ಹಿಂಗಾರಿಗೆ ರಾಗಿ ಮತ್ತು ಅಲಸಂದೆ ಬಿತ್ತನೆ
ಮಾಡಲು ಅವಕಾಶವಿದ್ದು, ಬಿತ್ತನೆ ಮಾಡುವಂತಹ ರೈತರು
ತುಂತುರು ನೀರಾವರಿ ಘಟಕ ಸೌಲಭ್ಯವನ್ನು
ಪಡೆದುಕೊಳ್ಳಲು ಅವಕಾಶವಿರುತ್ತದೆ.
ಆದ್ದರಿಂದ ಎಲ್ಲಾ ವರ್ಗದ ರೈತರು ಶೇ.90 ರಿಯಾಯಿತಿ
ದರದಲ್ಲಿ ಪಡೆಯಲು ಪಹಣಿ, ಆಧಾರ್ ಕಾರ್ಡ್ ಜೆರಾಕ್,್ಸ ಬ್ಯಾಂಕ್
ಪಾಸ್ ಪುಸ್ತಕದ ಜೆರಾಕ್ಸ್, 2 ಭಾವಚಿತ್ರ, 20 ರೂಪಾಯಿಗಳ ಛಾಪಾ
ಕಾಗದ (ಅಫಿಡವಿಟ್), ಕೊಳವೆ ಬಾವಿ ದೃಢೀಕರಣ ಪತ್ರ, ಬೆಳೆ
ದೃಢೀಕರಣ ಚೆಕ್ಬಂಧಿ, ಪ.ಜಾತಿ/ಪ.ಪಂಗಡದವರಾಗಿದ್ದರೆ ಜಾತಿ
ಪ್ರಮಾಣ ಪತ್ರ ದಾಖಲಾತಿಗಳೊಂದಿಗೆ ಸಲ್ಲಿಸಬೇಕೆಂದು
ಮತ್ತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ
ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಪ್ರಕಟಣೆ ತಿಳಿಸಿದೆ.