ದಾವಣಗೆರೆ ಡಿ.01
ರಾಜ್ಯ ಚುನಾವಣಾ ಆಯೋಗವು ನ.30 ರಂದು ಗ್ರಾಮ
ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2020 ಕ್ಕೆ ಈ ಕೆಳಕಾಣಿಸಿದಂತೆ
ವೇಳಾಪಟ್ಟಿಯನ್ನು ಹೊರಡಿಸಲಾಗಿರುತ್ತದೆ.
ಚುನಾವಣಾ ವೇಳಾಪಟ್ಟಿ: 07.12.2020 ಮತ್ತು 11.12.2020
ಜಿಲ್ಲಾಧಿಕಾರಿಗಳು ಕ್ರಮವಾಗಿ ಮೊದಲನೇ ಮತ್ತು ಎರಡನೇ
ಹಂತದ ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ
ದಿನಾಂಕಗಳಾಗಿವೆ. ಡಿ.11 ಮತ್ತು ಡಿ.16 ಕ್ರಮವಾಗಿ ಮೊದಲನೇ
ಮತ್ತು ಎರಡನೇ ಹಂತದ ನಾಮಪತ್ರಗಳನ್ನು ಸಲ್ಲಿಸಲು
ಕಡೆಯ ದಿನಗಳಾಗಿವೆ. ಡಿ.12 ಮತ್ತು ಡಿ.17 ನಾಮಪತ್ರ
ಪರಿಶೀಲಿಸುವ ದಿನವಾಗಿದ್ದು, ಡಿ.14 ಮತ್ತು 19 ಉಮೇದುವಾರಿಕೆ
ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿದೆ. ಡಿ.22 ಮತ್ತು 27
ಮತದಾನ ಮತದಾನ ಅವಶ್ಯವಿದ್ದರೆ ಮತದಾನ
ನಡೆಸಬೇಕಾದ ದಿನಾಂಕ(ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ).
ಡಿ.24 ಮತ್ತು 29 ಮರು ಮತದಾನ ಇದ್ದಲ್ಲಿ ಮತದಾನದ
ದಿನ(ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ). ಡಿ.30 ಮತ ಎಣಿಕೆ
ದಿನ(ಬೆಳಿಗ್ಗೆ 8 ರಿಂದ ತಾಲ್ಲೂಕು ಕೇಂದ್ರಗಳಲ್ಲಿ). ಡಿ.31
ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ
ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನವಾಗಿದೆ.
ನ್ಯಾಮತಿ ತಾಲ್ಲೂಕಿನ ನ್ಯಾಮತಿ ಗ್ರಾಮಪಂಚಾಯಿತಿಯನ್ನು
ಪಟ್ಟಣಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ
ಹೊರಡಿಸಿರುವುದರಿಂದ ಈ ಗ್ರಾಮ ಪಂಚಾಯಿತಿನ್ನು
ಚುನಾವಣೆಯಿಂದ ಕೈಬಿಡಲಾಗಿದೆ.
ದಾವಣಗೆರೆ ತಾಲ್ಲೂಕಿನ ಬೇತೂರು, ಕನಗೊಂಡನಹಳ್ಳಿ,
ಕುಕ್ಕವಾಡ ಮತ್ತು ಮಾಯಕೊಂಡ ಗ್ರಾಮ
ಪಂಚಾಯಿತಿಗಳ ಅವಧಿಪೂರ್ಣಗೊಳ್ಳದೇ ಇರುವುದರಿಂದ ಈ
ಚುನಾವಣೆಯಿಂದ ಹೊರತುಪಡಿಸಲಾಗಿದೆ.
ಚುನಾವಣಾ ನಡೆಯುವ ಗ್ರಾಮಪಂಚಾಯಿತಿಗಳ ಸಂಖ್ಯಾ
ವಿವರ:
ಮೊದಲನೇ ಹಂತ:- ದಾವಣಗೆರೆ ತಾಲ್ಲೂಕು ಗ್ರಾ.ಪಂಗಳ
ಸಂಖ್ಯೆ 38, ಮತಗಟ್ಟೆಗಳ ಸಂಖ್ಯೆ 276, ಕ್ಷೇತ್ರಗಳ
ಸಂಖ್ಯೆ 213, ಸದಸ್ಯ ಸ್ಥಾನಗಳ ಸಂಖ್ಯೆ 581. ಹೊನ್ನಾಳಿ
ತಾಲ್ಲೂಕಿನ ಗ್ರಾ.ಪಂಗಳ ಸಂಖ್ಯೆ 29, ಮತಗಟ್ಟೆಗಳ
ಸಂಖ್ಯೆ 162, ಕ್ಷೇತ್ರಗಳ ಸಂಖ್ಯೆ 121, ಸದಸ್ಯ ಸ್ಥಾನಗಳ
ಸಂಖ್ಯೆ 341. ಜಗಳೂರು ತಾಲ್ಲೂಕಿನ ಗ್ರಾ.ಪಂಗಳ ಸಂಖ್ಯೆ
22, ಮತಗಟ್ಟೆಗಳ ಸಂಖ್ಯೆ 219, ಕ್ಷೇತ್ರಗಳ ಸಂಖ್ಯೆ 176,
ಸದಸ್ಯ ಸ್ಥಾನಗಳ ಸಂಖ್ಯೆ 397.
ಎರಡನೇ ಹಂತದ:- ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ
ಗ್ರಾ.ಪಂಗಳ ಸಂಖ್ಯೆ 24, ಮತಗಟ್ಟೆಗಳ ಸಂಖ್ಯೆ 179,
ಕ್ಷೇತ್ರಗಳ ಸಂಖ್ಯೆ 133, ಸದಸ್ಯ ಸ್ಥಾನಗಳ ಸಂಖ್ಯೆ 378.
ಚನ್ನಗಿರಿ ತಾಲ್ಲೂಕಿನ ಗ್ರಾ.ಪಂಗಳ ಸಂಖ್ಯೆ 61,
ಮತಗಟ್ಟೆಗಳ ಸಂಖ್ಯೆ 368, ಕ್ಷೇತ್ರಗಳ ಸಂಖ್ಯೆ 295,
ಸದಸ್ಯ ಸ್ಥಾನಗಳ ಸಂಖ್ಯೆ 735. ನ್ಯಾಮತಿ ತಾಲ್ಲೂಕಿನ
ಗ್ರಾ.ಪಂಗಳ ಸಂಖ್ಯೆ 17, ಮತಗಟ್ಟೆಗಳ ಸಂಖ್ಯೆ 96,
ಕ್ಷೇತ್ರಗಳ ಸಂಖ್ಯೆ 72, ಸದಸ್ಯ ಸ್ಥಾನಗಳ ಸಂಖ್ಯೆ 196
ಇರುತ್ತದೆ.
ಮತದಾರರ ವಿವರ (ದಿನಾಂಕ:11.08.2020ರ ಅಂತ್ಯಕ್ಕೆ):
ಜಿಲ್ಲೆಯಲ್ಲಿ ಒಟ್ಟು 423484 ಪುರುಷ, 414243 ಮಹಿಳೆ ಸೇರಿ ಒಟ್ಟು
837727 ಮತದಾರರಿದ್ದಾರೆ. ದಾವಣಗೆರೆ ತಾಲ್ಲೂಕಿನ ಪುರುಷ
ಮತದಾರರ ಸಂಖ್ಯೆ 90975, ಮಹಿಳೆ ಮತದಾರರ ಸಂಖ್ಯೆ
89906 ಒಟ್ಟು 180881. ಹರಿಹರ ತಾಲ್ಲೂಕಿನ ಪುರುಷ
ಮತದಾರರ ಸಂಖ್ಯೆ 58649, ಮಹಿಳೆ ಮತದಾರರ ಸಂಖ್ಯೆ
57359 ಒಟ್ಟು 116008. ಹೊನ್ನಾಳಿ ತಾಲ್ಲೂಕಿನ ಪುರುಷ
ಮತದಾರರ ಸಂಖ್ಯೆ 54480, ಮಹಿಳೆ ಮತದಾರರ ಸಂಖ್ಯೆ
53339 ಒಟ್ಟು 107819. ನ್ಯಾಮತಿ ತಾಲ್ಲೂಕಿನ ಪುರುಷ
ಮತದಾರರ ಸಂಖ್ಯೆ 31800, ಮಹಿಳೆ ಮತದಾರರ ಸಂಖ್ಯೆ
31005 ಒಟ್ಟು 62805. ಚನ್ನಗಿರಿ ತಾಲ್ಲೂಕಿನ ಪುರುಷ
ಮತದಾರರ ಸಂಖ್ಯೆ 121322, ಮಹಿಳೆ ಮತದಾರರ ಸಂಖ್ಯೆ
118169 ಒಟ್ಟು 239491. ಜಗಳೂರು ತಾಲ್ಲೂಕಿನ ಪುರುಷ
ಮತದಾರರ ಸಂಖ್ಯೆ 66258, ಮಹಿಳೆ ಮತದಾರರ ಸಂಖ್ಯೆ
64465 ಒಟ್ಟು 130723.
ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ
ವಿವರ: ದಾವಣಗೆರೆ ತಾಲ್ಲೂಕಿನ 38 ಚುನಾವಣಾಧಿಕಾರಿ ಹಾಗೂ 38
ಸಹಾಯಕ ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ಹರಿಹರ
ತಾಲ್ಲೂಕಿನ 24 ಚುನಾವಣಾಧಿಕಾರಿ ಹಾಗೂ 25 ಸಹಾಯಕ
ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ಹೊನ್ನಾಳಿ
ತಾಲ್ಲೂಕಿನಲ್ಲಿ 29 ಚುನಾವಣಾಧಿಕಾರಿ ಹಾಗೂ 29 ಸಹಾಯಕ
ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ನ್ಯಾಮತಿ
ತಾಲ್ಲೂಕಿನ 17 ಚುನಾವಣಾಧಿಕಾರಿ ಹಾಗೂ 17 ಸಹಾಯಕ
ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ಚನ್ನಗಿರಿ
ತಾಲ್ಲೂಕಿನಗೆ 61 ಚುನಾವಣಾಧಿಕಾರಿ ಹಾಗೂ 64 ಸಹಾಯಕ
ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ಜಗಳೂರು
ತಾಲ್ಲೂಕಿಗೆ 22 ಚುನಾವಣಾಧಿಕಾರಿ ಹಾಗೂ 23 ಸಹಾಯಕ
ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.