ದಾವಣಗೆರೆ ಡಿ.01
ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ
ಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ಚುನಾವಣಾ
ವೇಳಾಪಟ್ಟಿ ಪ್ರಕಟಿಸಿದ್ದು, ಆಯೋಗದ ನಿರ್ದೇಶನದಂತೆ
ಸದಾಚಾರ ಸಂಹಿತೆಯು ನ.30 ರಿಂದ ಜಾರಿಗೆ ಬರಲಿದ್ದು ಚುನಾವಣಾ
ಪ್ರಕ್ರಿಯೆಯು ಮುಕ್ತಾಯಗೊಳ್ಳುವವರೆಗೆ ಅಂದರೆ
ಡಿ.31 ರ ಸಂಜೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ನೀತಿ ಸಂಹಿತೆಯು ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ
ಪ್ರದೇಶಕ್ಕೆ ಅನ್ವಯವಾಗಲಿದೆ. ಸದಾಚಾರ ಸಂಹಿತೆಯು ಪಟ್ಟಣ
ಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆ ಮತ್ತು
ಮಹಾನಗರಪಾಲಿಕೆಯ ವ್ಯಾಪ್ತಿಯ ಪ್ರದೇಶಗಳಿಗೆ
ಅನ್ವಯವಾಗಿವುದಿಲ್ಲ. ರಾಜ್ಯ ಚುನಾವಣಾ ಆಯೋಗದ
ನಿರ್ದೇಶನದಂತೆ ಸದಾಚಾರ ಸಂಹಿತೆಯನ್ನು
ಅನುಷ್ಠಾನಗೊಳಿಸಬೇಕಾಗಿರುವುದರಿಂದ ಜಿಲ್ಲೆಯ ಎಲ್ಲಾ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಅರೆಸರ್ಕಾರಿ,
ನಿಗಮ ಹಾಗೂ ಸಂಘ ಸಂಸ್ಥೆಗಳಿಗೆ ಸಂಬಂಧಿಸಿದ
ಪ್ರವಾಸಿಮಂದಿರ/ಅತಿಥಿ ಗೃಹಗಳನ್ನು ದಿ:30.11.2020ರಿಂದ ದಿ:
31.12.2020ರ ಸಂಜೆ 5 ಗಂಟೆಯವರೆಗೆ ಜಿಲ್ಲಾಡಳಿತದ ವಶಕ್ಕೆ
ಪಡೆಯಲಾಗಿದೆ.
ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರರು ಈ ಆದೇಶವನ್ನು
ಸಂಬಂಧಿಸಿದವರಿಗೆ ಜಾರಿಗೊಳಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ
ಬರುವ ಪ್ರವಾಸಿ ಮಂದಿರ/ಅತಿಥಿ ಗೃಹಗಳನ್ನು ಸ್ವಾಧೀನಕ್ಕೆ
ತೆಗೆದುಕೊಂಡು ರಾಜ್ಯ ಚುನಾವಣಾ ಆಯೋಗದ
ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಲು ನಿರ್ದೇಶಿಸಿರುತ್ತೇನೆ
ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.