ದಾವಣಗೆರೆ ಡಿ. 03
ಜಿಲ್ಲಾ ಪಂಚಾಯತ್ ವತಿಯಿಂದ ನಿರ್ಮಿಸಲಾಗಿರುವ ಪಂಚಾಯತ್ ರಾಜ್
ಇಂಜಿನಿಯರಿಂಗ್ ಇಲಾಖೆ ಕಚೇರಿ ಕಟ್ಟಡದ ಉದ್ಘಾಟನೆ, ದೀನ್ ದಾಯಾಳ್
ಉಪಾಧ್ಯಾಯ ಪಂಚಾಯತಿ ಸಶಕ್ತೀಕರಣ ಪುರಸ್ಕಾರದಡಿ ಜಿ.ಪಂ. ಗೆ
ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನದಡಿ
ನಿರ್ಮಿಸುತ್ತಿರುವ ‘ಸಂಜೀವಿನಿ ಸ್ತ್ರೀ-ಶಕ್ತಿ ಸ್ವ-ಸಹಾಯ ಸಂಘಗಳ
ಉತ್ಪನ್ನ ಮಾರಾಟ ಮಳಿಗೆಗಳ ಶಂಕುಸ್ಥಾಪನೆ ಹಾಗೂ ತಾಲ್ಲೂಕು
ಪಂಚಾಯತ್ ಕಟ್ಟಡದ ಶಂಕುಸ್ಥಾಪನೆ ಸಮಾರಂಭ ಡಿ. 04 ರಂದು
ಬೆಳಿಗ್ಗೆ 10 ಗಂಟೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಚೇರಿ
ಆವರಣದಲ್ಲಿ ನಡೆಯಲಿದೆ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಚೇರಿ ಕಟ್ಟಡದ ಉದ್ಘಾಟನೆ
ಹಾಗೂ ತಾಲ್ಲೂಕು ಪಂಚಾಯತ್ ಕಟ್ಟಡದ ಶಂಕುಸ್ಥಾಪನೆಯನ್ನು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.
ಈಶ್ವರಪ್ಪ ಅವರು ನೆರವೇರಿಸುವರು. ‘ಸಂಜೀವಿನಿ ಸ್ತ್ರೀ-ಶಕ್ತಿ ಸ್ವ-
ಸಹಾಯ ಸಂಘಗಳ ಉತ್ಪನ್ನ ಮಾರಾಟ ಮಳಿಗೆಗಳ
ಶಂಕುಸ್ಥಾಪನೆಯನ್ನು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ
ಸಚಿವ ಬಿ.ಎ. ಬಸವರಾಜ ಅವರು ನೆರವೇರಿಸುವರು. ದಾವಣಗೆರೆ ಉತ್ತರ
ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸುವರು.
ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರು ಹಾಗೂ ಮುಖ್ಯಮಂತ್ರಿಗಳ
ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಜಿ.ಪಂ. ಅಧ್ಯಕ್ಷೆ
ದೀಪಾ ಜಗದೀಶ್, ಶಾಸಕರು ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ
ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ, ಶಾಸಕರು
ಹಾಗೂ ಕೆಎಸ್‍ಡಿಎಲ್ ನಿಗಮದ ಅಧ್ಯಕ್ಷ ಕೆ. ಮಾಡಾಳ್ ವಿರೂಪಾಕ್ಷಪ್ಪ,

ಶಾಸಕರು ಹಾಗೂ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ
ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ.ಎನ್. ಲಿಂಗಣ್ಣ, ಶಾಸಕರುಗಳಾದ
ಶಾಮನೂರು ಶಿವಶಂಕರಪ್ಪ, ಎಸ್. ರಾಮಪ್ಪ, ವಿಧಾನಪರಿಷತ್
ಸದಸ್ಯರುಗಳಾದ ಜಿ. ರಘು ಆಚಾರ್, ಆರ್. ಪ್ರಸನ್ನ ಕುಮಾರ್,
ಲಹರ್‍ಸಿಂಗ್ ಸಿರೋಯಾ, ಮೋಹನ್‍ಕುಮಾರ್ ಕೊಂಡಜ್ಜಿ, ಕೆ.ಪಿ. ನಂಜುಂಡಿ
ವಿಶ್ವಕರ್ಮ, ರವಿಕುಮಾರ್ ಎಸ್, ರುದ್ರೇಗೌಡ ಎಸ್., ಡಾ. ತೇಜಸ್ವಿನಿಗೌಡ,
ಆಯನೂರು ಮಂಜನಾಥ, ಎಸ್.ಎಲ್. ಭೋಜೇಗೌಡ, ಡಾ. ವೈ.ಎ.
ನಾರಾಯಣಸ್ವಾಮಿ, ಚಿದಾನಂದ ಎಂ. ಗೌಡ. ಮಹಾನಗರಪಾಲಿಕೆ ಮಹಾಪೌರ
ಬಿ.ಜಿ. ಅಜಯ್‍ಕುಮಾರ್, ದೂಡಾ ಅಧ್ಯಕ್ಷ ಎನ್.ಹೆಚ್. ಶಿವಕುಮಾರ್, ಜಿ.ಪಂ.
ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ತಾ.ಪಂ. ಅಧ್ಯಕ್ಷೆ
ಮಮತ ಮಲ್ಲೇಶಪ್ಪ, ತಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ
ಬಸವಂತಪ್ಪ ಸೇರಿದಂತೆ ಉನ್ನತ ಅಧಿಕಾರಿಗಳು, ಗಣ್ಯರು
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

Leave a Reply

Your email address will not be published. Required fields are marked *