ದಾವಣಗೆರೆ ಡಿ.04
ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ –
2020 ನಿಗದಿಯಾಗಿದ್ದು, ಇಂತಹ ಸಂದರ್ಭದಲ್ಲಿ ನಕಲಿ ಮದ್ಯ,
ಕಲಬೆರಿಕೆ ಸೇಂದಿ, ಕಳ್ಳಭಟ್ಟಿ ಸಾರಾಯಿಗಳನ್ನು ಅಕ್ರಮವಾಗಿ
ತಯಾರಿಸಿ ಮಾರಾಟ ಮಾಡುವ ಸಾಧ್ಯತೆ ಹೆಚ್ಚಿದ್ದು, ಅನಧಿಕೃತ
ಸ್ಥಳಗಳಲ್ಲಿ ಅಕ್ರಮ/ನಕಲಿ/ಕಲಬೆರಿಕೆ ಮದ್ಯ ಮತ್ತು
ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಮಾರಾಟ, ಸೇವನೆ, ಸಾಗಾಣಿಕೆ,
ಸ್ವಾಧೀನತೆ ಮಾಡುವುದು ಕರ್ನಾಟಕ ಅಬಕಾರಿ ಕಾಯ್ದೆ 1965 ರ
ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಅನಧಿಕೃತ ಸ್ಥಳಗಳಲ್ಲಿ ತಯಾರಿಸಲ್ಪಡುವ ಮತ್ತು
ಮಾರಾಟ ಮಾಡಲಾಗುವ ಅಕ್ರಮ/ನಕಲಿ/ಕಲಬೆರಿಕೆ
ಮದ್ಯ ಮತ್ತು ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಕ್ರಮ
ಅಬಕಾರಿ ಪದಾರ್ಥಗಳ ಇವುಗಳ ಸೇವನೆಯಿಂದ ಆರೋಗ್ಯದ
ಮೇಲೆ ಗಂಭೀರ ಸ್ವರೂಪದ
ಪರಿಣಾಮಗಳುಂಟಾಗುವುದರ ಜೊತೆಗೆ ಅಮೂಲ್ಯವಾದ
ಜೀವವನ್ನು ಕಳೆದುಕೊಳ್ಳ್ಳುವ ಸಂಭವವಿರುತ್ತದೆ.
ಆದ್ದರಿಂದ ಸಾರ್ವಜನಿಕರು ಅನಧಿಕೃತ ಸ್ಥಳಗಳಲ್ಲಿ
ತಯಾರಿಸಲ್ಪ್ಟಡುವ ಮತ್ತು ಮಾರಾಟ
ಮಾಡಲಾಗುವ ಅಕ್ರಮ/ನಕಲಿ/ಕಲಬೆರಿಕೆ ಮದ್ಯ ಮತ್ತು
ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಕ್ರಮ ಅಬಕಾರಿ
ಪದಾರ್ಥಗಳನ್ನು ಸೇವಿಸಬಾರದೆಂದು ಈ ಮೂಲಕ
ಎಚ್ಚರಿಸಲಾಗಿದೆ.
ಆದ್ದರಿಂದ ಇಂತಹ ಕೃತ್ಯಗಳು ಕಂಡು ಬಂದಲ್ಲಿ ಈ
ಕೆಳಕಂಡ ವ್ಯಾಪ್ತಿಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ
ನೀಡಬೇಕೆಂದು ಸಾರ್ವಜನಿಕರಲ್ಲಿ ತಿಳಿಯಪಡಿಸಲಾಗಿದೆ. ಅಲ್ಲದೇ
ಇಂತಹ ಕೃತ್ಯಕ್ಕೆ ಸಂಬಂಧಿಸಿದಂತೆ ವ್ಯಾಪ್ತಿಯ ಪೊಲೀಸ್
ಅಧಿಕಾರಿಗಳಿಗೂ ಹಾಗೂ ತಹಶೀಲ್ದಾರರುಗಳಿಗೂ ಸಹ ಮಾಹಿತಿ
ನೀಡಬೇಕೆಂದು ಕೋರಲಾಗಿದೆ. ಮಾಹಿತಿದಾರರ ಹೆಸರು, ಇತ್ಯಾದಿ
ವಿವರಗಳನ್ನು ಗೌಪ್ಯವಾಗಿಡಲಾಗುವುದು ಮತ್ತು
ಮಾಹಿತಿದಾರರು ಸೂಕ್ತ ಬಹುಮಾನಕ್ಕೆ ಅರ್ಹರು.
ಅಬಕಾರಿ ಉಪ ಆಯುಕ್ತರ ಕಚೆÉೀರಿ, ದಾವಣಗೆರೆ ದೂ.ಸಂ
08192-235316, ಮೊ.ಸ 9449597061, 9449597063, 9449597064,
8762857022. ಅಬಕಾರಿ ಉಪ ಅಧೀಕ್ಷಕರ ಕಚೇರಿ, ದಾವಣಗೆರೆ, ಉಪ
ವಿಭಾಗ, ದಾವಣಗೆರೆ (ದಾವಣಗೆರೆ, ಹರಿಹರ ಮತ್ತು ಜಗಳೂರು
ತಾಲ್ಲೂಕು ವ್ಯಾಪ್ತಿ)ದೂ.ಸಂ: 08192-225042, 9449597064,
9449597065. ಅಬಕಾರಿ ಉಪ ಅಧೀಕ್ಷಕರ ಕಚೇರಿ, ಹೊನ್ನಾಳಿ ಉಪ
ವಿಭಾಗ, ಹೊನ್ನಾಳಿ (ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ
ತಾಲ್ಲೂಕು ವ್ಯಾಪ್ತಿ) ದೂ.ಸಂ: 08188-295202, 9449597066,
9449597067.
ಅಬಕಾರಿ ನಿರೀಕ್ಷಕರ ಕಚೇರಿ, ದಾವಣಗೆರೆ ವಲಯ ನಂ.1,
ದಾವಣಗೆರೆ (ದಾವಣಗೆರೆ ವಲಯ ನಂ.1 ವ್ಯಾಪ್ತಿ) ದೂ.ಸಂ: 08192-
224177 ಮೊ.ನಂ. 7795323230, 9448532551. ಅಬಕಾರಿ ನಿರೀಕ್ಷಕರ
ಕಚೇರಿ, ಹರಿಹರ ವಲಯ, ಹರಿಹರ(ಹರಿಹರ ಮತ್ತು
ಜಗಳೂರು ತಾಲ್ಲೂಕು ವ್ಯಾಪ್ತಿ) ದೂ.ಸಂ: 08192-242166
ಮೊ.ಸಂ: 8861411339, 9663708351, 8762857022. ಅಬಕಾರಿ
ನಿರೀಕ್ಷಕರ ಕಚೇರಿ, ದಾವಣಗೆರೆ ವಲಯ ನಂ.2,
ದಾವಣಗೆರೆ(ದಾವಣಗೆರೆ ವಲಯ ನಂ.2 ವ್ಯಾಪ್ತಿ) ದೂ.ಸಂ: 08192-
221150, ಮೊ.ನಂ: 9663527579, 9663708351. ಅಬಕಾರಿ ನಿರೀಕ್ಷಕರ
ಕಚೇರಿ, ಹೊನ್ನಾಳಿ ವಲಯ, ಹೊನ್ನಾಳಿ(ಹೊನ್ನಾಳಿ ಮತ್ತು
ನ್ಯಾಮತಿ ತಾಲ್ಲೂಕು ವ್ಯಾಪ್ತಿ) ದೂ.ಸಂ: 08188-252120,
ಮೊ.ನಂ: 9449686222, 8792763238. ಅಬಕಾರಿ ನಿರೀಕ್ಷಕರ ಕಚೇರಿ,
ಚನ್ನಗಿರಿ ವಲಯ, ಚನ್ನಗಿರಿ (ಚನ್ನಗಿರಿ ತಾಲ್ಲೂಕು ವ್ಯಾಪ್ತಿ)ದೂ.ಸಂ:
08189-229445, ಮೊ.ಸಂ: 9380891915 8792763238
ಸಂಪರ್ಕಿಸಬಹುದೆಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್
ಬಿ.ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.