ದಾವಣಗೆರೆ ಡಿ.05
ಲೋಕ ಅದಾಲತ್ ಮೂಲಕ ಪಕ್ಷಗಾರರು ರಾಜಿಯಾಗಬಲ್ಲ
ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ
ಸುಲಭವಾಗಿ ಮತ್ತು ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇ
ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು ಇದೇ ಡಿ.19 ರ ಶನಿವಾರದಂದು
ಆಯೋಜಿಸಲಾಗಿರುವ ಇ-ಲೋಕ ಅದಾಲತ್‍ನಲ್ಲಿ ಹೆಚ್ಚಿನ
ಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ಪ್ರಕರಣಗಳನ್ನು
ಇತ್ಯರ್ಥಪಡಿಸಿಕೊಳ್ಳಬೇಕೆಂದು ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರಾದ ಕೆ.ಬಿ.ಗೀತಾ ತಿಳಿಸಿದರು
     ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ
ನಿರ್ದೇಶನದಂತೆ ಡಿ.19 ರಂದು ಜಿಲ್ಲೆಯಲ್ಲಿ
ಇ-ಅದಾಲತ್ ಆಯೋಜಿಸಿರುವ ಹಿನ್ನೆಲೆ ಮಾಧ್ಯಮಗಳ ಮೂಲಕ
ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕರೆಯಲಾಗಿದ್ದ
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
     ಕೋವಿಡ್ ಹಿನ್ನೆಲೆಯಲ್ಲಿ ಪಕ್ಷಗಾರರು ಇ-ಲೋಕ ಅದಾಲತ್‍ನಲ್ಲಿ
ವಿಡಿಯೋ ಕಾನ್ಫರೆನ್ಸ್, ವಿಡಿಯೋ ಕಾಲ್ ಮೂಲಕ ಹಾಗೂ ಕೋವಿಡ್
ಟೆಸ್ಟ್ ಮಾಡಿಸಿಕೊಂಡು ನ್ಯಾಯಾಲಯಕ್ಕೆ ಕೂಡ ಹಾಜರಾಗಿ ತಮ್ಮ
ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಬಹುದು. ಕಳೆದ ಬಾರಿ ಸೆ.9 ರಂದು
ವಿಡಿಯೋ ಕಾನ್ಫರೆನ್ಸ್, ಮೊಬೈಲ್ ವಿಡಿಯೋ ಕಾಲ್ ಮೂಲಕ ಸೇರಿದಂತೆ
ನಡೆದ ಬೃಹತ್ ಇ-ಲೋಕ್ ಅದಾಲತ್‍ನಲ್ಲಿ ಅತ್ಯಂತ ಹೆಚ್ಚಿನ
ಪ್ರಕರಣಗಳು ಇತ್ಯರ್ಥಗೊಂಡವು. ಈ ಬೃಹತ್ ಇ-ಲೋಕ್ ಅದಾಲತ್
ನಲ್ಲಿ ಜಿಲ್ಲೆಯಲ್ಲಿ 1492 ಪ್ರಕರಣಗಳು ಇತ್ಯರ್ಥಗೊಂಡು
ರೂ.4,47,22,331/-ಗಳ ಪರಿಹಾರ ಒದಗಿಸಲಾಗಿದ್ದು ಇದಕ್ಕೆ

ಸಹಕರಿಸಿದ ಎಲ್ಲ ಕಕ್ಷಿಗಾರರು ಮತ್ತು ವಕೀಲರಿಗೆ
ಅಭಿನಂದಿಸುತ್ತೇನೆ ಎಂದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ
ಕಾರ್ಯಕಾರಿ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ
ಅರವಿಂದ್‍ಕುಮಾರ್‍ರವರು ಡಿ.19 ರಂದು ಬೃಹತ್ ಇ-ಲೋಕ್
ಮೂಲಕ ಅತಿ ಹೆಚ್ಚು ಪ್ರಕರಣ ವಿಲೇವಾರಿ ಮಾಡಿ ಸಾರ್ವಜನಿಕರಿಗೆ
ಅನುಕೂಲ ಮಾಡಿಕೊಡಬೇಕೆಂದು ಉದ್ದೇಶಿಸಿದ್ದು, ಈ ಪ್ರಕಾರವಾಗಿ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲೆಯಲ್ಲಿರುವ ಎಲ್ಲಾ
ಕಾನೂನು ತಾಲ್ಲೂಕು ಸೇವಾ ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ
ಬರುವ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಇ-ಲೋಕ್ ಅದಾಲತ್
ನಡೆಸುವ ಬಗ್ಗೆ ವ್ಯವಸ್ಥೆಯಗಳನ್ನು ಮಾಡಿಕೊಂಡಿರುತ್ತವೆ
ಎಂದು ಮಾಹಿತಿ ನೀಡಿದರು.
ಇ-ಲೋಕ ಅದಾಲತ್: ಈ ಬಾರಿ ರಾಜ್ಯ ಕಾನೂನು ಸೇವೆಗಳ
ಪ್ರಾಧಿಕಾರವು ರಾಜ್ಯಾದ್ಯಂತ ತಂತ್ರಜ್ಞಾನವನ್ನು
ಬಳಸಿಕೊಂಡು ಇ-ಲೋಕ ಅದಾಲತ್‍ನ್ನು ಆಯೋಜಿಸಿದೆ. ಇ-ಲೋಕ
ಅದಾಲತ್‍ನ ಪ್ರತಿಯೊಂದು ಪೀಠಲ್ಲಿ ಒಬ್ಬರು ಹಾಲಿ ನ್ಯಾಯಾಧೀಶರು
ಹಾಗೂ ಒಬ್ಬರು ಪರಿಣಿತ ವಕೀಲರು ಸಂಧಾನಕಾರರಿದದು,
ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ ಇರುವ ಹಾಗೂ ಇನ್ನೂ ದಾಖಲು
ಮಾಡದೇ ಇರುವ ರಾಜಿಯಾಗುವಂತಹ ಎಲ್ಲ ಪ್ರಕರಣಗಳಲ್ಲಿ
ಪಕ್ಷಗಾರರು ಈ ಪೀಠಗಳ ಮೂಲಕ ತಮ್ಮ ಮನೆಯಿಂದಲೇ
ಅಥವಾ ತಮ್ಮ ವಕೀಲರ ಕಚೇರಿಯ ಮೂಲಕ ಪ್ರಕರಣಗಳಲ್ಲಿ
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿ ಪ್ರಕರಣಗಳನ್ನು
ಇತ್ಯರ್ಥಪಡಿಸಕೊಳ್ಳಬಹುದು ಎಂದರು.
ವಾಜ್ಯ ಪೂರ್ವ ಮತ್ತು ರಾಜೀ ಪ್ರಕರಣಗಳ ಇತ್ಯರ್ಥ ಸಾಧ್ಯ: 
ಅಪಘಾತಕ್ಕೆ ಸಂಬಂಧಿಸಿದ ಪರಿಹಾರ ಪ್ರಕರಣಗಳು, ಪಾಲುವಿಭಾಗ
ಕೋರಿ ಸಲ್ಲಿಸುವ ದಾವೆಗಳು, ಚೆಕ್ಕು ಅಮಾನ್ಯದ
ಪ್ರಕರಣಗಳು ಯು/ಎಸ್ 138 ಎನ್‍ಐ ಆಕ್ಟ್, ಬ್ಯಾಂಕ್ ವಸೂಲಾತಿ
ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ
ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ
ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು,
ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಮೈಂಟನೆನ್ಸ್
ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಜೀವನಾಂಶದ ಅರ್ಜಿ
ಪ್ರಕರಣಗಳು, ಕೌಟುಂಬಿಕ(ವಿಚ್ಚೇದನವನ್ನು ಹೊರತುಪಡಿಸಿ)
ಕಲಹಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳ್ನು
ಇತ್ಯರ್ಥಪಡಿಸಬಹುದು.
ನ್ಯಾಯಾಲಯದಲ್ಲಿ ಬಾಕಿ ಇರುವ
ಪ್ರಕರಣಗಳು: ರಾಜೀಯಾಗಬಲ್ಲ ಅಪರಾಧಿಕ
ಪ್ರಕರಣಗಳು, ಭೂಸ್ವಾದೀನ ಪ್ರಕರಣಗಳು, ವೇತನ
ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು

ಹಾಗೂ ಪಿಂಚಣಿ ಪ್ರಕರಣಗಳು,ಕಂದಾಯ ಪ್ರಕರಣಗಳು (
ಜಿಲ್ಲಾ ಹಾಗೂ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿ ಇರುವ
ಪ್ರಕರಣಗಳು ಮಾತ್ರ), ಸಿವಿಲ್ ಪ್ರಕರಣಗಳನ್ನು ( ಬಾಡಿಗೆ,
ಅನುಭೋಗದ ಹಕ್ಕುಗಳ ನಿರ್ಬಂಧಾಜ್ಞೆ ಮೊಕದ್ದಮೆಗಳು)
ಲೋಕ ಅದಾಲತ್‍ನಲ್ಲಿ ಬಗೆಹರಿಸಲಾಗುವುದು. ಈ ದಿನಾಂಕಗಳ
ಹೊರತಾಗಿಯೂ ಸತತವಾಗಿ ನಡೆಯುವ ಲೋಕ ಅದಾಲತ್
ಮುಖಾಂತರ ಕೂಡ ಕಕ್ಷಿದಾರರು ಪ್ರಕರಣಗಳನ್ನು
ಇತ್ಯರ್ಥಪಡಿಸಿಕೊಳ್ಳಬಹುದು.
ಕೋವಿಡ್ ಹಿನ್ನೆಲೆ ಅನುಕೂಲ : ಕೋವಿಡ್ ಸಂದರ್ಭದಲ್ಲಿ ಆದಾಯ
ಕಡಿಮೆ ಇರುವಂತಹ ಈ ಪರಿಸ್ಥಿತಿಯಲ್ಲಿ ತಮ್ಮ ವ್ಯಾಜ್ಯಗಳನ್ನು ಇ-
ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಂಡರೆ ಕಕ್ಷಿಗಾರರಿಗೆ
ಮತ್ತು ವಕೀಲರಿಗೆ ಹೆಚ್ಚಿನ ಅನುಕೂಲ ಇದೆ. ಇ-ಲೋಕ್ ಅದಾಲತ್‍ನಲ್ಲಿ
ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಪ್ರಕರಣಗಳಿಗೆ
ನ್ಯಾಯಾಲಯಗಳ ಸಂಪೂರ್ಣ ಶುಲ್ಕ ಮರುಪಾವತಿ
ಮಾಡಲಾಗುವುದು. ವ್ಯಾಜ್ಯಪೂರ್ವ ಪ್ರಕರಣಗಳಿಗೆ
ನ್ಯಾಯಾಲಯಗಳ ಶುಲ್ಕ ಕೊಡಬೇಕಾಗಿಲ್ಲ. ಹಾಗೂ ಇಲ್ಲಿ
ಇತ್ಯರ್ಥವಾಗುವ ಪ್ರಕರಣಗಳಿಗೆ ಮೇಲ್ಮನವಿ ಇರುವುದಿಲ್ಲ. ರಿವಿಜನ್
ಅರ್ಜಿ ಇರುವುದಿಲ್ಲ ಮತ್ತು ಪಕ್ಷಗಾರರು ಒಪ್ಪಿ ರಾಜಿ
ಆಗುವುದರಿಂದ ಸೌಹಾರ್ದತೆ ಹೆಚ್ಚುತ್ತದೆ. ಇದು ಒಂದು ಉತ್ತಮ
ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಿದೆ ಎಂದರು.
       ರಾಜಿ ಆಗುವುದರಿಂದ ಕಕ್ಷಿದಾರ ಹಾಗೂ ನ್ಯಾಯಾಲಯದ
ಸಮಯ ಉಳಿತಾಯ ಆಗುತ್ತದೆ. ಕಕ್ಷಿದಾರರಿಗೆ ಸಂಪೂರ್ಣ ಶುಲ್ಕ
ಮರುಪಾವತಿ ಆಗುವುದರಿಂದ ಹಣವೂ ಉಳಿತಾಯ ಆಗುತ್ತದೆ.
ಜೊತೆಗೆ ವಕೀಲರಿಗೂ ಅನುಕೂಲವಾಗುತ್ತದೆ ಹಾಗೂ ಈ
ನ್ಯಾಯಾಲಯದ ತೀರ್ಪೇ ಅಂತಿಮವಾಗಿದ್ದು ಪಕ್ಷಗಾರರು ಅಪೀಲು
ಹೋಗಲು ಅವಕಾಶವಿರುವುದಿಲ್ಲ. ಜೊತೆಗೆ ಇಬ್ಬರೂ
ಪಕ್ಷಗಾರರ ಸಂಧಾನದಿಂದ ಪ್ರಕರಣ ರಾಜೀಯಾಗುವ ಕಾರಣ
ಇಬ್ಬರ ನಡುವೆ ಇದ್ದ ದ್ವೇಷ ದೂರವಾಗಿ ಸಾಮರಸ್ಯ
ಸಾಧ್ಯವಾಗುತ್ತದೆ.
ಕೋವಿಡ್ ಹಿನ್ನೆಲೆಯಲ್ಲಿ ಕಕ್ಷಿದಾರರಿಗೆ ನಗರದ ಪಾಲಿಕೆ
ರಂಗಮಂದಿರ ಮತ್ತು ಆಯುಷ್ ಇಲಾಖೆಯಲ್ಲಿ ರ್ಯಾಪಿಡ್ ಆಂಟಿಜೆನ್
ಟೆಸ್ಟ್‍ಗೆ ಅವಕಾಶ ಮಾಡಿಲಾಗಿದೆ. ವಿಡಿಯೋ ಕಾನ್ಫರೆನ್ಸ್, ವಿಡಿಯೋ ಕಾಲ್
ಮೂಲಕ ಕೂಡ ಅದಾಲತ್‍ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಈ ಬಾರಿ
ಪಾರ್ಟಿಷನ್‍ನಂತಹ ಪ್ರಕರಣಗಳಿಗೆ ಹೆಚ್ಚಿನ ಒತ್ತು ನೀಡಿದ್ದು,
ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ಇತ್ಯರ್ಥಪಡಿಸುವ ಆಶಯ
ಹೊಂದಲಾಗಿದೆ.
                                         -ಗೀತಾ. ಕೆ.ಬಿ, ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರು,

    ಇ-ಲೋಕ ಅದಾಲತ್ ನಲ್ಲಿ ಭಾಗಿಯಾಗಲು ಆಸಕ್ತ ಕಕ್ಷಿಗಾರರು
ಹೆಚ್ಚಿನ ಮಾಹಿತಿಗಾಗಿ ಇಮೇಲ್ ಜಟsಚಿಜಚಿvಚಿಟಿgeಡಿe@gmಚಿiಟ.ಛಿom ಮತ್ತು
ದೂರವಾಣಿ ಸಂಖ್ಯೆ 08192-296364, 996492792 ಮೂಲಕ ಜಿಲ್ಲೆಯ
ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯನ್ನು
ಸಂಪರ್ಕಿಸಬಹುದಾಗಿದ್ದು, ಸಾರ್ವಜನಿಕರು ತಮ್ಮ
ಪ್ರಕರಣಗಳನ್ನು ಪರಿಹರಿಸಿಕೊಳ್ಳಬೇಕೆಂದು ಮನವಿ
ಮಾಡಿದರು.
   ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್ ಮಾತನಾಡಿ,
ಲೋಕ ಅದಾಲತ್‍ಗೆ ವಕೀಲರ ಸಂಘದ ಸಹಕಾರ ಎಂದಿಗೂ ಇದೆ.
ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಇತ್ಯರ್ಥವಾಗಲು ಈ
ಬಾರಿಯೂ ವಕೀಲರ ಸಹಕಾರ ಇದ್ದೇ ಇದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ
ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ
ಸಾಬಪ್ಪ ಮಾತನಾಡಿ, ಬಡವರ್ಗದವರಿಗೆ ಅನುಕೂಲವಾಗುವ ಈ
ಲೋಕಅದಾಲತ್ ಬಗ್ಗೆ ಹೆಚ್ಚಿನ ಪ್ರಚಾರದ ಅವಶ್ಯಕತೆ ಇದ್ದು
ಮಾಧ್ಯಮದವರು ಇ-ಲೋಕ ಅದಾಲತ್ ಬಗ್ಗೆ ಹೆಚ್ಚಿನ ಪ್ರಚಾರ
ನೀಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ
ಎಲ್.ಹೆಚ್.ಅರುಣ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ಬಾರಿ
ಲೋಕ ಅದಾಲತ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ
ಪ್ರಕರಣಗಳು ಇತ್ಯರ್ಥವಾಗುತ್ತಿದ್ದು ಜಿಲ್ಲೆ ಸತತ ಮೂರು
ವರ್ಷಗಳಿಂದ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಹಾಗೂ
ಹೆಚ್ಚಿನ ಸಂಖ್ಯೆಯಲ್ಲಿ, ಸಕ್ರಿಯವಾಗಿ ಕಾನೂನು ಅರಿವು
ಕಾರ್ಯಕ್ರಮ ಆಯೋಜಿಸುವಲ್ಲಿ ಕೂಡ ನಮ್ಮ ಜಿಲ್ಲೆ ಮೂರು
ವರ್ಷಗಳಿಂದ ಪ್ರಥಮ ಸ್ಥಾನದಲ್ಲಿದೆ ಎಂದರು.

Leave a Reply

Your email address will not be published. Required fields are marked *