ದಾವಣಗೆರೆ ಡಿ.05
ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ
ಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ಚುನಾವಣಾ
ವೇಳಾಪಟ್ಟಿ ಪ್ರಕಟಿಸಿದ್ದು, ಆಯೋಗದ ನಿರ್ದೇಶನದಂತೆ
ಸದಾಚಾರ ಸಂಹಿತೆಯು ನ.30 ರಿಂದ ಜಾರಿಗೆ ಬಂದಿದ್ದು ಚುನಾವಣಾ
ಪ್ರಕ್ರಿಯೆಯು ಮುಕ್ತಾಯಗೊಳ್ಳುವವರೆಗೆ ಅಂದರೆ
ಡಿ.31 ರ ಸಂಜೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ನೀತಿ ಸಂಹಿತೆಯು ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ
ಪ್ರದೇಶಕ್ಕೆ ಅನ್ವಯವಾಗಲಿದೆ. ಸದಾಚಾರ ಸಂಹಿತೆಯು ಪಟ್ಟಣ
ಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆ ಮತ್ತು
ಮಹಾನಗರಪಾಲಿಕೆಯ ವ್ಯಾಪ್ತಿಯ ಪ್ರದೇಶಗಳಿಗೆ
ಅನ್ವಯವಾಗಿವುದಿಲ್ಲ. ಚುನಾವಣಾ ನೀತಿ ಸಂಹಿತೆಯು
ಜಾರಿಯಲ್ಲಿರುವ ಪ್ರಯುಕ್ತ ಜಿಲ್ಲಾ ಪಂಚಾಯತ್
ಅಧ್ಯಕ್ಷರು, ಉಪಾಧ್ಯಕ್ಷರು, ಚನ್ನಗಿರಿಯ ತುಮ್‍ಕೋಸ್
ಅಧ್ಯಕ್ಷರು, ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ,
ಜಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ
ಅಧ್ಯಕ್ಷರ ಸರ್ಕಾರಿ ವಾಹನಗಳನ್ನು ಅಧಿಗ್ರಹಣ
ಮಾಡಲಾಗಿದೆ.
ಅಧಿಗ್ರಹಣ ಮಾಡಲಾದ ವಾಹನಗಳನ್ನು ಕೊಡಲೇ
ಸಂಬಂಧಿಸಿದ ಅಧಿಕಾರಿಗಳು ಬಿಡುಗಡೆ ಮಾಡಿ, ಡಿ.01 ರಂದು
ಬೆಳಿಗ್ಗೆ 8 ಗಂಟೆಯೊಳಗೆ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ
ಸಂಬಂಧಿಸಿದ ತಾಲ್ಲೂಕು ತಹಶೀಲ್ದಾರರಲ್ಲಿ ವರದಿ
ಮಾಡಿಕೊಳ್ಳುವಂತೆ ಸಂಬಂಧಿಸಿದ ವಾಹನ ಚಾಲಕರಿಗೆ ಸೂಚನೆ
ನೀಡಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಆದೇಶಿಸಿದ್ದಾರೆ.