ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಟೌನಿನಲ್ಲಿ ವಿವಿಧ ಕನ್ನಡ ಪರ ಕನ್ನಡ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಹಾಗೂ ರೈತ ಪರ ಸಂಘಟನೆಗಳು ಒಟ್ಟಾಗಿ ಸೇರಿ ಮರಾಠ ಅಭಿವೃದ್ಧಿ ನಿಗಮ ರದ್ದು ಪಡಿಸುವಂತೆ ಇಂದು ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಧಿಡಿರೆಂದು ಯಾವುದೇ ಕನ್ನಡ ಪರ ಸಂಘಟನೆಗಳ ಮತ್ತು ಕನ್ನಡ ಸಾಹಿತಿ ಲೇಖಕರ ಮತ್ತು ಸಮಸ್ತ ಕನ್ನಡಿಗರ ಅಭಿಪ್ರಾಯಗಳನ್ನು ಸಂಗ್ರಹಿಸದೇ, ಚರ್ಚಿಸದೇ, ಸರ್ವಾಧಿಕಾರಿ ವರ್ತನೆಯಿಂದ ರಾಜ್ಯ ಸರ್ಕಾರವು ಏಕಾಏಕಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲು ಆದೇಶ ಹೊರಡಿಸಿರುವುದು ಅತ್ಯಂತ ಖಂಡನೀಯವಾದ ಅಂಶವಾಗಿದೆ.
ಕನ್ನಡ ನೆಲ ಜಲ ಮತ್ತು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಕನ್ನಡಿಗರ ಮೇಲೆ ಸದಾ ಕ್ಯಾತೆ ತಗಿಯುತ್ತಿರುವ ಮರಾಠ ಸಂಘಟನೆಗಳಿಗೆ ಓಲೈಸಲು ಈ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವುದರಿಂದ ಕನ್ನಡ ನಾಡಿನಲ್ಲಿ ಕನ್ನಡಿಗರ ಮೇಲೆ ಇನ್ನು ಮುಂದೆ ಸದಾ ದೌರ್ಜನ್ಯಕ್ಕೆ ರಾಜ್ಯ ಸರ್ಕಾರವು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಇಂದು ಈ ಸರ್ಕಾರವು ಕೈಗೊಂಡ ಸರ್ವಾಧಿಕಾರಿ ನೀತಿಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್‌ಗೆ ಹೊನ್ನಾಳಿ ತಾಲ್ಲೂಕಿನ ಸಮಸ್ತ ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿ ಈ ಕೂಡಲೇ ಕರ್ನಾಟಕ ಸರ್ಕಾರವು ತೆಗೆದುಕೊಂಡ ನಿರ್ಣಯ ಮರಾಠ ಅಭಿವೃದ್ಧಿ ನಿಗಮವನ್ನು ರದ್ದು ಪಡಿಸಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ಇಂದ ಆಗ್ರಹಿಸುತ್ತಿದ್ದೇವೆ ಮತ್ತು ಈ ಬಂದ್‌ಗೆ ಹೊನ್ನಾಳಿ ತಾ! ಸಮಸ್ತ ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಒಕ್ಕೊರಲಿನಿಂದ ಸರ್ಕಾರದ ಈ ನೀತಿಯನ್ನು ಖಂಡಿಸುತ್ತವೆ. ಈ ಕೂಡಲೇ ರಾಜ್ಯ ಸರ್ಕಾರವು ಸ್ಥಾಪಿಸಿದ ಮರಾಠ ಅಭಿವೃದ್ಧಿ ನಿಗಮವನ್ನು ರದ್ದುಪಡಿಸಬೇಕೆಂದು ಹೊನ್ನಾಳಿ ತಾಲೂಕಿನ ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು:- ಕತ್ತಿಗಿ ನಾಗರಾಜ್, ಮಡಿವಾಳ್ ಚಂದ್ರು, ಕನ್ನಡ ಪರ ಸಂಘಟನೆಯ ಅಧ್ಯಕ್ಷರುಗಳಾದ ಶ್ರೀನಿವಾಸ್, ಕರವೇ ವಿನಯ್ ವಗ್ಗರ್ , ದಿಡಗೂರು ತಮ್ಮಣ್ಣ, ಜಗದೀಶ್ ಹೆಚ್ ಕಡದಕಟ್ಟೆ ,ರೈತ ಮುಖಂಡರುಗಳು ಮತ್ತು ರಾಜು ಕಡೆಗಣ್ಣರ್ ಇನ್ನೂ ಮುಂತಾದವರು ಸಹ ಭಾಗಾಯಾಗಿದ್ದರು.