ದಾವಣಗೆರೆ ಜಿಲ್ಲೆಯ ದಾವಣಗೆರೆ ದಿ ಡಿ.6 ದಾವಣಗೆರೆ ಪತ್ರಿಕಾ ಭವನದಲ್ಲಿ ದಾವಣಗೆರೆ ಜಿಲ್ಲೆಯ ಬಿ.ಜೆ.ಪಿ ಅಲ್ಪಸಂಖ್ಯಾತರ ಮುಖಂಡರಾದ ಎಸ್ ಮಜೀದ್ ಖಾನ್ ಪತ್ರಿಕಾ ಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದೆ
ಐ.ಎಂ.ಎ. ಕೇಸಿನ ರುವಾರಿ ಮನ್ಸೂರ್ ಅಲಿಖಾನ್ ಸಂಸ್ಥೆಯು ರಾಜ್ಯದ ಅನೇಕ ಜನರಿಗೆ ಅದರಲ್ಲೂ ಸುಮಾರು 90 %ರಷ್ಟು ಅಲ್ಪಸಂಖ್ಯಾತರಿಗೆ ಕೊಟ್ಯಾಂತರ ರೂಪಾಯಿಗಳನ್ನು ವಂಚಿಸಿರುವ ವಿಷಯ ಈಗಾಗಲೇ ತಮ್ಮ ಗಮನಕ್ಕೆ ಬಂದಿರುವ ವಿಷಯವಾಗಿರುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೇಮಿಸಿರುವ ಐ.ಎ.ಎಸ್.ಆಫೀಸರ್ ಆಗಿರುವ ಶ್ರೀ ಹರ್ಷಗುಪ್ತರವರು ವಿಚಾರಣೆಯನ್ನು ನಡೆಸುತ್ತಿದ್ದು, ಈಗಾಗಲೇ 50 ರಷ್ಟು ಸಮಸ್ಯೆಯನ್ನು ಬಗೆಹರಿಸಿದ್ದು, ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವವರು ಆನ್ಲೈನ್ ಮುಖಾಂತರ ಅಂದರೆ ಅಟಲ್ ಜೀ ಸೇವಾ ಕೇಂದ್ರ ಹಾಗೂ ದಾವಣಗೆರೆ- 1ಮೂಲಕ ಆಧಾರ್ ಕಾರ್ಡ್ ಮತ್ತು ಕ್ಲೈಟ್ ಐ.ಡಿ.ನಂ ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಾವು ವಿನಂತಿಸಿಕೊಳ್ಳುವುದೇನೆಂದರೆ, ಇನ್ನೂ ಉಳಿದಿರುವ ಬಾಕಿ ಮೊತ್ತವನ್ನು ಹೂಡಿಕೆದಾರರಿಗೆ ಮರಳಿ ನೀಡಬೇಕೆಂದರೆ, ಮನ್ಸೂರ್ ಆಲಿಖಾನ್ ಮಾವನಾದ ಅಬ್ಬಾಸ್ ಖಾನ್ ಇವನು ದುಬೈನಲ್ಲಿದ್ದು, ಅವನನ್ನು ಕರೆದುಕೊಂಡು ತನಿಖೆ ಕೈಗೊಂಡರೆ, ಉಳಿದ ಹಣ ವಾಪಸ್ ಬಂದು ಎಲ್ಲರಿಗೂ ನ್ಯಾಯದೊರಕಿಸಿಕೊಟ್ಟಂತೆ ಆಗುತ್ತದೆ. ಇದು ಎಲ್ಲಾ ಅಲ್ಪಸಂಖ್ಯಾತ ಹೂಡಿಕೆದಾರರಿಗೆ ಬಿ.ಜೆ.ಪಿ. ದೊರಕಿಸಿಕೊಟ್ಟ ನ್ಯಾಯವಾಗಿರುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಎಲ್ಲ ಹೂಡಿಕೆದಾರರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಹಾಗೂ ನಮಗೆಲ್ಲ ಮಾರ್ಗದರ್ಶನ ಮಾಡಿ, ಸಹಕಾರ ನೀಡಿದಂತಹ ಜನಪ್ರಿಯ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಂ.ಸಿದ್ದೇಶ್ವರ್‌, ಉತ್ತರ ವಿಧಾನಸಭಾ ಶಾಸಕರಾದ ಶ್ರೀ ಎಸ್.ಎ.ರವೀಂದ್ರನಾಥ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ವೀರೇಶ್ ಹನಗವಾಡಿ ಹಾಗೂ ಮಾಜಿ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾಧವ್ ರವರುಗಳಿಗೆ ದಾವಣಗೆರೆ ಜಿಲ್ಲೆಯ ಅಲ್ಪಸಂಖ್ಯಾತರ ಬಿ.ಜೆ.ಪಿ ಮುಖಂಡರಾದ ಎಸ್ ಅಬ್ದುಲ್ ಮಜೀದ್ ಖಾನ್ ಇನ್ನೂ ಇನ್ನಿತರಿಗೆ ಧನ್ಯವಾದಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *