ದಾವಣಗೆರೆ ಡಿ.05
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ
ವತಿಯಿಂದ ಭಾನುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‍ರವರ 64ನೇ
ಮಹಾಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಹಾಗೂ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು
ಡಾ.ಬಿ.ಆರ್.ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಪುಷ್ಪ ನಮನ
ಸಲ್ಲಿಸಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ನಾವೆಲ್ಲ ಒಂದಲ್ಲ ಒಂದು
ರೀತಿಯಲ್ಲಿ ಅಂಬೇಡ್ಕರ್ ಎಂಬ ಮಹಾನ್ ಚೇತನಕ್ಕೆ ಋಣಿಯಾಗಿದ್ದೇವೆ.
ಮತ್ತು ಎಂದಿಗೂ ಋಣಿಯಾಗಿರುತ್ತೇವೆ. ನಾವೆಲ್ಲ ಆ ಚೇತನ
ನಡೆದು ಬಂದ ಹಾದಿಯಲ್ಲಿ ನಡೆಯುವ ಪ್ರಯತ್ನ
ಮಾಡಬೇಕೆಂದು ಆಶಿಸಿದರು.
ಗಣ್ಯರಾದ ಹೆಗ್ಗೆರೆ ರಂಗಪ್ಪ ಅಂಬೇಡ್ಕರ್ ಕುರಿತು ಗಾಯನ
ಪ್ರಸ್ತುತ ಪಡಿಸಿದರು. ಈ ವೇಳೆ ಜಿ.ಪಂ ಉಪಾಧ್ಯಕ್ಷೆ ಸಾಕಮ್ಮ
ಗಂಗಾಧರನಾಯ್ಕ, ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಅಧ್ಯಕ್ಷ
ಲೋಕೇಶ್ವರ, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಸಮಾಜ ಕಲ್ಯಾಣ
ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಕೌಸರ್, ನಗರಾಭಿವೃದ್ದಿ
ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಅಂಬೇಡ್ಕರ್ ಅಭಿವೃದ್ದಿ
ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ್ ಸೇರಿದಂತೆ ವಿವಿಧ
ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಮಾಜದ
ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *