ಸಾಸ್ವೆಹಳ್ಳಿ: ಸಂಘಟಿತರಾಗುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಪತ್ರಕರ್ತರಿಗೆ, ಪತ್ರಿಕಾ ವಿತರಕರಿಗೂ ಹಲವು ಸಮಸ್ಯೆಗಳು ಇವೆ. ಅವುಗಳನ್ನು ಸರ್ಕಾರದ ಗಮನಕ್ಕ ತಂದು ಪರಿಹಾರ ಪಡೆಯಲು ಸಂಘಟಿತರಾಗುವುದು ಮುಖ್ಯ ಎಂದು ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಕೆ ಹಾಲೇಶಪ್ಪ ಹೇಳಿದರು.
ಇಲ್ಲಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಪರ್ತಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಸದಸ್ಯತ್ವವನ್ನು ಎಲ್ಲರೂ ಪಡೆಯಬೇಕು. ಪರಸ್ಪರ ಸಹಕಾರದಿಂದ ಇರಬೇಕು ಎಂದರು.
ಸಂಘದ ಕಾರ್ಯದರ್ಶಿ ಡಿ.ಎಂ ಹಾಲರಾದ್ಯ ಮಾತನಾಡಿ, ಈ ಸಂಘವು ತಾಲ್ಲೂಕಿನಲ್ಲಿ ರಚನೆಯಾಗಿ ನಾಲ್ಕು ವರ್ಷಗಳದಾವು. ಹಲವು ಯೋಜನೆಗಳಿಂದ ಕಾರ್ಯನಿರ್ವಹಿಸುತ್ತಿದೆ. ಪತ್ರಿಕಾ ದಿನಾಚರಣೆಗಳ ಮೂಲಕ ಪರ್ತಕರ್ತರಿಗೆ ಶಿಕ್ಷಣ ನೀಡಿದೆ. ಕೊರೊನಾ ಸಂದರ್ಭದಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಿದೆ. ಸಂಘದ ಪದಾಧಿಕಾರಿಗಳಿಗೆ ಆಯುಷ್ ಕಿಟ್ ವಿತರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದನ್ನು ತಿಳಿಸಲಾಗಿದೆ. ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಕುಂದುಕೊರತೆಗಳ ಕಡೆ ಹೆಚ್ಚು ಗಮನ ಹರಿಸುವ ಮೂಲಕ ಗ್ರಾಮದಲ್ಲಿನ ಸಮಸ್ಯೆಗಳ ಪರಿಹಾರ ಮಾಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಡಿ.ಎಂ ಹಾಲಾರಾದ್ಯ,ಜಿ.ವಿ ರಾಜು, ಎಂ.ಪಿ.ಎಂ ವಿಜಯಾನಂದ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ರಾಜ್ಯ ಸಂಚಾಲಕ ಅರುಣ್ ಕುಮಾರ್ ಮಾಸಡಿ,ಪತ್ರಕರ್ತರಾದ ಶಕೀಲ್ ಅಹ್ಮದ್ ,ಅರವಿಂದ್, ನಾಗರಾಜ್ ಎನ್, ಎಂ.ಎಸ್ ಶಾಸ್ತ್ರಿ ಹೊಳೆಮಠ್, ಸುರೇಶ್, ಮಲ್ಲೇಶ್ ಮಾಳಗಿ, ಕೃಷ್ಣಮೂರ್ತಿ, ಮಡಿವಾಳ್ ರಮೇಶ್, ಗಿರೀಶ್ ಎನ್.ಎಂ ಪತ್ರಿಕಾ ವಿತರಕರು ಇದ್ದರು.