ದಾವಣಗೆರೆ ಡಿ.07
  ನೆಹರು ಯುವ ಕೇಂದ್ರ ಶಾಲಾ ಕಾಲೇಜು
ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯಕ್ರಮವನ್ನು ಮಾಡುವ
ಮೂಲಕ ಯುವಕರನ್ನು ಸಶಕ್ತಗೊಳಿಸಲಿ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಹೇಳಿದರು.
 ಇಂದು ಜಿಲ್ಲಾಡಳಿತ ಭವನದಲ್ಲಿ ನಡೆದ ನೆಹರು ಯುವ
ಕೇಂದ್ರದ ಜಿಲ್ಲಾ ಸಲಹಾ ಸಮಿತಿಯಲ್ಲಿ ಪಾಲ್ಗೊಂಡು ಹಾಗೂ ವಾರ್ಷಿಕ
ಕ್ರಿಯಾ ಯೋಜನೆಗೆ ಅನುಮತಿ ನೀಡಿ ಮಾತಾನಾಡಿದ ಅವರು ಇಂದು
ಯುವಕರು ಸರಿದಾರಿಯಲ್ಲಿ ಸಾಗಲು ಹಾಗೂ ರಾಷ್ಟ್ರ ಕಟ್ಟುವ
ಕಾರ್ಯದಲ್ಲಿ ತೊಡಗಲು ನೆಹರು ಯುವಕ ಕೇಂದ್ರಗಳು
ಸಹಕಾರಿಯಾಗಲಿವೆ.
 ಶಾಲಾ ಕಾಲೇಜು, ಹಾಸ್ಟೆಲ್‍ಗಳು ವರ್ಷಪೂರ್ತಿ ಕಾರ್ಯಕ್ರಮ
ನಡೆಸುವ ಮೂಲಕ ವಿವಿಧ ಜಾಗೃತಿ ಅಭಿಯಾನಗಳನ್ನು
ಹಮ್ಮಿಕೊಳ್ಳಬೇಕು. ಪ್ರತಿ ತಿಂಗಳು ಸಭೆ ನಡೆಸಿ ಆಯಾ
ತಿಂಗಳುಗಳಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ
ಪಟ್ಟಿ ಮಾಡಿಕೊಂಡು ಕ್ರಿಯಾಶೀಲವಾಗಿ
ಕಾರ್ಯನಿರ್ವಹಿಸಬೇಕೆಂದರು.
 ಸಂಸ್ಥೆಯವರು ಸ್ವಂತ ಕಟ್ಟಡಕ್ಕೆ ಜಾಗ ನೀಡಲು
ಕೋರಿರುತ್ತಾರೆ. ನಗರಪಾಲಿಕೆ ಅಥವಾ ದೂಢಾ ವ್ಯಾಪ್ತಿಯಲ್ಲಿ
ಪರಿಶೀಲಿಸಿ ಜಾಗ ಮಂಜೂರು ಮಾಡಿಸಲು ಕ್ರಮ
ಕೈಗೊಳ್ಳಲಾಗುವುದೆಂದರು.
ಜಲನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಹಾಗೂ ಸಾಮಾನ್ಯ ಜನರಲ್ಲಿ
ಅರಿವು ವiತ್ತು ಸರ್ಕಾರದ ಆಸ್ತಿಯನ್ನು, ಸಂಪನ್ಮೂಲಗಳನ್ನು
ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದ ಅವರು, ಜಿಲ್ಲಾ
ಯುವ ಪ್ರಶಸ್ತಿಗಾಗಿ ಜಿಲ್ಲೆಯ ಅತ್ಯುತ್ತಮ ಯುವಕ-
ಯುವತಿ ಸಂಘಗಳನ್ನು ಆಯ್ಕೆ ಮಾಡುವಂತೆ ತಿಳಿಸಿದರು.
ದಾವಣಗೆರೆ ವಿ.ವಿದ್ಯಾನಿಲಯದ ಎನ್.ಎಸ್.ಎಸ್ ಯೋಜನಾಧಿಕಾರಿ,
ಜಿಲ್ಲೆಯಲ್ಲಿ 101 ಎನ್.ಎಸ್.ಎಸ್ ಯುನಿಟ್‍ಗಳಿದ್ದು, ಅವುಗಳ

ಮುಖಾಂತರ ಯುವಕರಿಗೆ ನೆರವಾಗುವಂತಹ
ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದರು.
 ಜಿಲ್ಲಾ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ
ಸಾಗರ್ ಮೈತ್ರಿ, ಕೇಂದ್ರದ ವಾರ್ಷಿಕ ಕ್ರಿಯಾಯೋಜನೆಯ
ಮೂಲಕ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳು ಹಾಗೂ
ಕೇಂದ್ರದ ಉದ್ದೇಶಗಳನ್ನು ಸಭೆಗೆ ವಿವರಿಸಿದರು.
  ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಕೌಸರ್,
ನೆಹರು ಯುವ ಕೇಂದ್ರದ ಎಲ್ಲಾ ಕಾರ್ಯಕ್ರಮಗಳನ್ನು
ನಮ್ಮ ಹಾಸ್ಟೆಲ್‍ಗಳಲ್ಲಿ ನೆಹರು ಯುವ ಕೇಂದ್ರದ
ಕಾರ್ಯಕ್ರಮಗಳನ್ನು
ಅನುಷ್ಟಾನಗೊಳಿಸಲಾಗುವುದೆಂದರು.
ಸಭೆಯಲ್ಲಿ ಯುವ ಸಬಲೀಕರಣ, ರೆಡ್‍ಕ್ರಾಸ್ ಸೊಸೈಟಿ, ಜಿಲ್ಲಾ
ಕೈಗಾರಿಕಾ ಕೇಂದ್ರ, ಜಿಲ್ಲಾ ಪಂಚಾಯತ್, ಎನ್‍ಎಸ್‍ಎಸ್, ಎನ್‍ಸಿಸಿ
ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *