ದಾವಣಗೆರೆ ಜಿಲ್ಲೆ ದಿ. ಡಿ.7 ದಾವಣಗೆರೆಯ ಶಿಕ್ಷಕರಾದ ಮಲ್ಲಿಕಾರ್ಜುನ್ ಬಾವಿಕಟ್ಟೆಯವರ ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಸವಿಸ್ಥಾರವಾಗಿ ದೃಶ್ಯ ಮಾಧ್ಯಮದ ಮೂಲಕ ತರಲಾಗುವುದು ಎಂದು ಈ ಕೆಳಗಿನ ಸಾರಂಶದಲ್ಲಿ ತಿಳಿಸಿದ್ದಾರೆ.👇
ಹೆಣ್ಣುಭ್ರೂಣ ಹತ್ಯೆಯನ್ನು ದಯವಿಟ್ಟು ನಿಲ್ಲಿಸಿ, ಹೆಣ್ಣು ಜಗದ ಕಣ್ಣು , ನಮ್ಮ ಪೂರ್ವಜರು ಹೆಣ್ಣಿಗೆ ಬಹುಮುಖ್ಯ ಸ್ಥಾನವನ್ನು ಕೊಟ್ಟಿದ್ದಾರೆ, ಗಂಗಾಬಿಕೆ, ನೀಲಾಂಬಿಕೆ, ನಾಗಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ, ಅಕ್ಕಮಹಾದೇವಿ, ದುಗ್ಗಳೆ, ಶಿವನಾಗಮ್ಮ, ಪುಣ್ಯಸ್ತ್ರೀ ಲಿಂಗಮ್ಮ, ಹೇಮರೆಡ್ಡಿ ಮಲ್ಲಮ್ಮ ಹೀಗೆ ನೂರಾರು ಶರಣೆಯರು, ವೀರ ಮಹಿಳೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಒಬ್ಬವ್ವ, ಝಾನ್ಸಿರಾಣಿ ಲಕ್ಷ್ಮೀಬಾಯಿಯವರು ಗಂಡಿಗೆ ಸರಿಸಮನಾದ ಸ್ಥಾನ ಪಡೆದಿದ್ದರು.
ಹೆಣ್ಣು ಮಗು ಬೇಡ ಅವಳು ಕುಟುಂಬಕ್ಕೆ ಹೊರೆ ಎಂದು ಭಾವಿಸಲು ಅನೇಕ ಕಾರಣಗಳು, ಈ ದೌರ್ಜನ್ಯಕ್ಕೆ ಮುಖ್ಯ ಕಾರಣ ವರದಕ್ಷಿಣೆಯ ಪಿಡುಗು, ಹೆಣ್ಣು ಮಗಳ ವಿವಾಹ ಮಾಡಲು ಅತಿ ಹೆಚ್ಚು ವೆಚ್ಚವಾಗುತ್ತದೆ, ಅವಳ ಮದುವೆಗೆ ವರದಕ್ಷಿಣೆ ಹೊಂದಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಭ್ರೂಣ ಹತ್ಯೆಯಂತಹ ಅಮಾನವೀಯ ಕೃತ್ಯಕ್ಕೆ ನಮ್ಮ ಜನರು ಮುಂದಾಗುತ್ತಿದ್ದಾರೆ..
ಅಲ್ಟ್ರಾ ಸೌಂಡ್ ಡಯಗ್ನೊಸ್ಟಿಕ್ ವಿಧಾನಗಳಂಥ ನವೀನ ತಾಂತ್ರಿಕತೆಯ ಬೆಳವಣಿಗೆಯಿಂದಾಗಿ ತಾಯಿಯ ಗರ್ಭದಲ್ಲಿ ಭ್ರೂಣಾವಸ್ಥೆಯಲ್ಲಿರುವಾಗಲೆ ಅದರ ಲಿಂಗ ಪತ್ತೆ ಹಚ್ಚುವ ಸಾಧ್ಯತೆಗಳು ಕೈಗೊಂಡಿರುವುದರ ಪರಿಣಾಮವಾಗಿ ಹೆಣ್ಣು ಭ್ರೂಣ ಹತ್ಯೆಗೆ ರಾಜ ಮಾರ್ಗ ತೆರೆದಂತಾಗಿದೆ..
ಈ ನಿಟ್ಟಿನಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸುವುದು
ಮತ್ತು ಅದರ ಹಿಂದಿನ ಕ್ರೂರತೆಯನ್ನು
ತೋರಿಸುವುದು ನನ್ನ ಬಹುದಿನಗಳ ಪ್ರಯತ್ನವಾಗಿತ್ತು,
ಆ ನಿಟ್ಟಿನಲ್ಲಿ ಹಲವು ಬರವಣಿಗೆಗಳನ್ನು ಬರೆದದ್ದಾಯಿತು,
ಮತ್ತೇ ಕುಳಿತು ಯೋಚಿಸಿದಾಗ ಬರವಣಿಗೆ
ಒಂದು ವರ್ಗಕ್ಕೆ ಮಾತ್ರ ಸೀಮೀತವಾಗುತ್ತದೆ ಆದ್ದರಿಂದ
ದೃಶ್ಯ ಮಾಧ್ಯಮದ ಮುಖಾಂತರ ಇದನ್ನು
ತೋರಿಸಲು ಯೋಜನೆ ಹಾಕಿದಾಗ ನನ್ನ ಜೋತೆಯಾದವರೇ
ಚಿತ್ರದುರ್ಗದ ಸಂಗೀತ ನಿರ್ದೇಶಕ
ಪ್ರದೀಪಚಂದ್ರ ಇಬ್ಬರು ಕುಳಿತು ಸಾಹಿತ್ಯವನ್ನು ರಚಿಸಿ
ಆಡಿಯೋ ರೇಕಾರ್ಡಿಂಗ್ ಮಾಡಲು
ಅಣಿಯಾದಾಗ ನೆನಪಾದವರೇ
ನನ್ನ ಸುದೀರ್ಘ ಕಾಲದ ಸ್ನೇಹಿತರಾದ
ಡಾ.ವಿ ನಾಗೇಂದ್ರಪ್ರಸಾದ್ ರವರು, ಅವರ ಬಳಿ
ನಮ್ಮ ಯೋಜನೆಯ ಬಗ್ಗೆ ಮಾತನಾಡಿದಾಗ ಅವರು
*ನಿಮ್ಮ ಈ ಯೋಜನೆಗೆ
ನನ್ನ ಸಂಪೂರ್ಣ ಸಹಕಾರವಿದೆ ಇದನ್ನು
ಅನುರಾಧ ಭಟ್ ಅವರಿಂದ ಹಾಡಿಸೋಣವೇಂದು
ನುಡಿದಂತೇ ಅವರ ಸ್ಟುಡಿಯೋವನ್ನು
ಯಾವುದೇ ಫಲಾಪೇಕ್ಷೆಯಿಲ್ಲದೆ ಉಚಿತವಾಗಿ ನೀಡಿ
ಅನುರಾಧ ಭಟ್ ಅವರಿಂದ ಹಾಡಿಸಿದರು,
ಮುಂದೇ ಶೀಘ್ರದಲ್ಲೇ
ಇದು ಚಿತ್ರೀಕರಣಗೊಂಡು ನಿಮ್ಮ ಮುಂದೇ ಬರಲಿದೆ ..