ಕೇಂದ್ರದ
ತೋಟಗಾರಿಕೆ ವಿಜ್ಞಾನಿ ಶ್ರೀ ಬಸವನಗೌಡ ಎಂ.ಜಿ. ಮಾತನಾಡಿ, ಮನೆಯಂಗಳದಲ್ಲಿ
ಸಾವಯವ ಪದ್ಧತಿಯಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ನಮ್ಮ ಆಹಾರ
ಪಠ್ಯದಲ್ಲಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುವುದೆಂದರು.
ರಾಸಾಯನಿಕ ಪದ್ಧತಿಗಳನ್ನು ಮುಕ್ತವಾಗಿಸಿ ಪರಿಸರ ಸ್ನೇಹಿ ಕೃಷಿ
ಪದ್ಧತಿಗಳಾದ ಎರೆಹುಳು ಗೊಬ್ಬರ, ಬೇವಿನ ಹಿಂಡಿ ಬಳಕೆ, ಮೋಹಕ
ಬಲೆಗಳ ಬಳಕೆ, ಸ್ಥಳೀಯ ನಾಟಿ ಬೀಜಗಳ ಬಳಕೆ ಹಾಗೂ ಜೈವಿಕ
ಕೀಟನಾಶಕಗಳ ಬಳಕೆಯಿಂದ ಗುಣಮಟ್ಟದ ಇಳುವರಿಯನ್ನು ಪಡೆಯಲು
ಸಾಧ್ಯವೆಂದರು.
ಪಾರಂಪರಿಕ ಕೃಷಿ ವಿಕಾಸ ಯೋಜನೆಯಡಿ ನೀಡಿರುವ ಜೀವಾವೃತ
ಘಟಕಗಳನ್ನು ಪರಿಣಾಮಕಾರಿಯಾಗಿ ಬಳಸಿ ಕೈ ತೋಟದ
ಸದುದ್ದೇಶವನ್ನು ಈಡೇರಿಸಬೇಕೆಂದು ಈ ಮೂಲಕ ಕರೆ ನೀಡಿದರು. ಬಳಿಕ
ಕಾರ್ಯಕ್ರಮದಲ್ಲಿ ರೈತ ಮಹಿಳೆಯರಿಗೆ ಹಳದಿ ಅಂಟು ಚೀಟಿ ಮತ್ತು ಬೇವಿನ
ಪುಡಿಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೈತ ಮಹಿಳೆಯರಾದ
ಶ್ರೀಮತಿ ಯಶೋಧಮ್ಮ, ಶ್ರೀಮತಿ ಗಾಯಿತ್ರಮ್ಮ, ಶ್ರೀಮತಿ ಪಾರ್ವತಿ,
ಶ್ರೀಮತಿ ಶಿಲ್ಪ, ಶ್ರೀಮತಿ ಹೇಮಾವತಿ, ಶ್ರೀಮತಿ ಸಾಕಮ್ಮ
ಮೊದಲಾದವರು ಹಾಜರಿದ್ದರು.