ದಾವಣಗೆರೆ ಡಿ.08
ಸಹಕಾರ ಸಂಘಗಳ ನಿಬಂಧಕರು ಕರ್ನಾಟಕ ನೋಂದಣಿ
ಅಧಿನಿಯಮ 1960ರಡಿ ನೋಂದಣಿಗೊಂಡ ಸಂಘ-ಸಂಸ್ಥೆಗಳು
ಪ್ರತಿ ವರ್ಷ ನವೀಕರಣಗೊಳ್ಳಬೇಕಾಗುತ್ತದೆ.
ಆದರೆ ಕೆಲವು ಸಂಘ ಸಂಸ್ಥೆಗಳು ಹಲವು ವರ್ಷ
ಕಳೆದರೂ ನವೀಕರಣಗೊಳ್ಳದೇ ಇರುವುದು ಮನಗಂಡು
ಸದಸ್ಯರ ಹಿತದೃಷ್ಟಿಯಿಂದ 5 ವರ್ಷಗಳಿಗೂ ಮೇಲ್ಪಟ್ಟು
ನವೀಕರಿಸದೇ ಇರುವ ಸಂಘ-ಸಂಸ್ಥೆಗಳನ್ನು ದಿನಾಂಕ: 31-12-
2020ರ ಅಂತ್ಯದೊಳಗೆ ಒಂದು ಬಾರಿ ದಂಡ ವಿಧಿಸಿ ಕೆಲವು
ಷರತ್ತುಗೊಳಪಟ್ಟು ನವೀಕರಿಸಲು ಅನುಮತಿ
ನೀಡಲಾಗಿರುತ್ತದೆ.
ಕೋವಿಡ್-19 ರೋಗವು ಸಾಂಕ್ರಾಮಿಕವಾಗಿ ಹರಡುತ್ತಿರುವ
ಹಿನ್ನಲೆಯಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆಯಡಿ
ನೋಂದಣಿಗೊಂಡು ಕಾರ್ಯ ನಿರ್ವಹಿಸುತ್ತಿರುವ ಸಂಘ-
ಸಂಸ್ಥೆಗಳಿಗೆ ವಾರ್ಷಿಕ ಮಹಾಸಭೆಯನ್ನು ನಡೆಸಲು ಡಿಸೆಂಬರ್-
2020ರ ಅಂತ್ಯದವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು
ಸಹಕಾರ ಸಂಘಗಳ ಉಪನಿಬಂಧಕ ಬಿ.ಜಯಪ್ರಕಾಶ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *