ದಾವಣಗೆರೆ ಡಿ.09
    ಆರ್‍ಎಸ್‍ಐ(ಸಿಎಆರ್/ಡಿಎಆರ್) ಮತ್ತು ಪಿಎಸ್‍ಐ (ವೈರ್‍ಲೆಸ್) ಹುದ್ದೆಗಳಿಗೆ ಅರ್ಜಿ
ಸಲ್ಲಿಸಿರುವ 3801 ಅಭ್ಯರ್ಥಿಗಳಿಗೆ ಡಿ.13 ರ ಭಾನುವಾರ ಬೆಳಿಗ್ಗೆ 10
ರಿಂದ 11.30 ಗಂಟೆಯವರೆಗೆ, ಮಧ್ಯಾಹ್ನ 1 ರಿಂದ 2.30 ರವರೆಗೆ
ಹಾಗೂ ಸಂಜೆ 4 ರಿಂದ 5.30 ರವರೆಗೆ ಲಿಖಿತ ಪರೀಕ್ಷೆಯನ್ನು
ದಾವಣಗೆರೆ ನಗರದ ಈ ಕೆಳಗಿನ ಪರೀಕ್ಷಾ ಕೇಂದ್ರಗಳಲ್ಲಿ
ನಡಸಲಾಗುತ್ತದೆ.
   ಅಭ್ಯರ್ಥಿಗಳ ರೋಲ್ ಸಂಖ್ಯೆ 3500001 ರಿಂದ 3501000 ರವರೆಗೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅನುಭವ ಮಂಟಪ ಶಾಲೆ
ಹತ್ತಿರ, ಡೆಂಟಲ್ ಕಾಲೇಜು ಹತ್ತಿರ ದಾವಣಗೆರೆ. 3501001 ರಿಂದ
3501500 ರವರೆಗೆ ಎವಿ ಕಮಲಮ್ಮ ಮಹಿಳಾ ಕಾಲೇಜು,
ಅಕ್ಕಮಹಾದೇವಿ ರಸ್ತೆ ದಾವಣಗೆರೆ. 3501501 ರಿಂದ 3502047 ರವರೆಗೆ
ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ
ಕಾಲೇಜು, ಅನುಭವ ಮಂಟಪ ದಾವಣಗೆರೆ. 3502101 ರಿಂದ 3502547
ರವರೆಗೆ ಸಿದ್ದಗಂಗಾ ಪಿಯು ಕಾಲೇಜು, ಸ್ಟೇಡಿಯಂ ಹತ್ತಿರ
ಸಿದ್ದಲಿಂಗೇಶ್ವರ ನಗರ, 18ನೇ ಕ್ರಾಸ್, ಕೆಟಿಜೆ ನಗರ
ದಾವಣಗೆರೆ. 3502601 ರಿಂದ 3503100 ರವರೆಗೆ ಜಿ.ಎಂ ಇನ್ಸ್‍ಟಿಟ್ಯೂಟ್ ಆಫ್
ಇಂಜಿನಿಯರಿಂಗ್ &ಚಿmಠಿ; ಟೆಕ್ನಾಲಜಿ, ಹರಿಹರ ರಸ್ತೆ, ದಾವಣಗೆರೆ. 3503101 ರಿಂದ
3503540 ರವರೆಗೆ ಸೇಂಟ್ ಜಾನ್ಸನ್ ಆಂಗ್ಲ ಮಾಧ್ಯಮ ಶಾಲೆ,
ಶಿವಕುಮಾರಸ್ವಾಮಿ ಬಡಾವಣೆ, ದಾವಣಗೆರೆ. 3503541 ರಿಂದ 3503907
ರವರೆಗೆ ಎಆರ್‍ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಪಿಜೆ ಬಡಾವಣೆ
ದಾವಣಗೆರೆ. ಈ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
    ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ
ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು,
ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ಸೂಚಿಸಿರುವ ಅಗತ್ಯ
ದಾಖಲಾತಿಗಳೊಂದಿಗೆ ಲಿಖಿತ ಪರೀಕ್ಷಾ ಕೇಂದ್ರಕ್ಕೆ ನಿಗದಿತ
ಸಮಯಕ್ಕಿಂತ 60 ನಿಮಿಷ ಮುಂಚಿತವಾಗಿ ಹಾಜರಾಗುವಂತೆ ಜಿಲ್ಲಾ

ಪೊಲೀಸ್ ಅಧೀಕ್ಷಕರಾದ ಹನುಮಂತರಾಯ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *